ಸುದ್ದಿ

ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ಸತೀಶ್ ಕುಮಾರ್ ವರ್ಗಾವಣೆ….

ಸುಳ್ಯ: ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಆರ್.ಸತೀಶ್ ಕುಮಾರ್ ಅವರಿಗೆ ಬೆಂಗಳೂರು ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾವಣೆಯಾಗಿದೆ ಎಂದು ತಿಳಿದು ಬಂದಿದೆ.
ಆರ್.ಸತೀಶ್ ಕುಮಾರ್ ಎರಡೂವರೆ ವರ್ಷಕ್ಕಿಂತಲೂ ಹೆಚ್ಚು ಸಮಯ ಸುಳ್ಯ ವೃತ್ತ ನಿರೀಕ್ಷಕರಾಗಿದ್ದರು. ಸುಳ್ಯಕ್ಕೆ ನೂತನ ವೃತ್ತ ನಿರೀಕ್ಷಕರಾಗಿ ರಾಜ್ಯ ಗುಪ್ತ ವಾರ್ತೆಯ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ಆಗಮಿಸಲಿದ್ದಾರೆ. ನವೀನ್ ಚಂದ್ರ ಜೋಗಿ ಅವರು ಈ ಹಿಂದೆ ಲೋಕಾಯುಕ್ತ, ರಾಜ್ಯ ರೌಡಿ ನಿಗ್ರಹ ದಳ ಮತ್ತಿತರ ವಿಭಾಗದಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.

Related Articles

Leave a Reply

Your email address will not be published.

Back to top button