ಸುದ್ದಿ

ಸುಳ್ಯ ಹವ್ಯಕ ವಲಯದ ನವೆಂಬರ್ ತಿಂಗಳ ಶಾಸನತಂತ್ರ ಸಭೆ…..

ಸುಳ್ಯ: ಹವ್ಯಕ ವಲಯದ ಪದಾಧಿಕಾರಿಗಳ ಮಾಸಿಕ ಸಭೆಯು ಸುಳ್ಯವಲಯದ ನರಸಿಂಹ ಶಾಸ್ತಾವು ಘಟಕದ ಶಿವನಿವಾಸ ಕೆ.ಗೋಪಾಲಕೃಷ್ಣ ಭಟ್ ಇವರ ಮನೆಯಲ್ಲಿ ದಿನಾಂಕ ನ. 3 ರಂದು ವಲಯದ ಅಧ್ಯಕ್ಷರಾದ ಈಶ್ವರ ಕುಮಾರ್ ಉಬರಡ್ಕ ಇವರ ನೇತೃತ್ವದಲ್ಲಿ ನಡೆಯಿತು.
ಘಟಕದ ಹಿರಿಯರಾದ ಗೋವಿಂದ ಭಟ್.ಯು ರವರು ಧ್ವಜಾರೋಹಣಮಾಡಿದರು. ದೀಪೋಜ್ವಲನ, ಶಂಖನಾದ, ಗುರುವಂದನೆ ಹಾಗೂ ಗೋ ಸ್ತುತಿಯೊಂದಿಗೆ ಸಭಾ ಕಾರ್ಯಕ್ರಮವು ಪ್ರಾರಂಭವಾಯಿತು.
ವಲಯದ ಕಾರ್ಯದರ್ಶಿಯಾದ ವಿಷ್ಣು ಕಿರಣ ನೀರಬಿದಿರೆ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ ಗತ ಸಭೆಯ ವರದಿ ನೀಡಿ ಸಭಾ ನಿರ್ವಹಣೆ ಮಾಡಿದರು.ಕೋಶಾಧಿಕಾರಿಯಾದ ಸರವು ಈಶ್ವರ ಭಟ್ ಲಕ್ಷ್ಮೀ ಖಾತೆಯ ಲೆಕ್ಕ ಪತ್ರ ಮಂಡಿಸಿದರು.
ಬಳಿಕ ಕಾರ್ಯದರ್ಶಿಗಳಿಂದ ಸಂಘಟನೆಯ ಕಾರ್ಯಸೂಚಿ ವಿಷಯ ಮಂಡನೆಯಾಗಿ ಮಂಡಲದ ಸುತ್ತೋಲೆಗಳ ಬಗ್ಗೆ ವಿವರಣೆ ಸಮಾಲೋಚನೆ ನಡೆಯಿತು.ಘಟಕ ವಿಂಗಡನೆಯಾಗಿ ಸೇರ್ಪಡೆಯಾದ ಮನೆಗಳ ವಿವರಗಳನ್ನು ಗುರಿಕ್ಕಾರರಿಗೆ ತಿಳಿಸಲಾಯಿತು.ಜನವರಿ ತಿಂಗಳಿನಲ್ಲಿ ಸಮರ್ಪಿಸುವ ದೀಪಕಾಣಿಕೆ, ಗುರುಕುಲ ಕಾಣಿಕೆ ಹಾಗು ಬೆಳೆಸಮರ್ಪಣೆ ಬಗ್ಗೆ ಮಾಹಿತಿ ನೀಡಿ, ಪ್ರತಿ ಮನೆಯ ಗುರುಭಕ್ತರು ಕಡ್ಡಾಯವಾಗಿ ಗುರಿಕ್ಕಾರರ ಮನೆಗೆ ಹೋಗಿ ಸಮರ್ಪಿಸುವ ನಿರ್ಣಯ ಕೈಗೊಳ್ಳಲಾಯಿತು.ಪ್ರತಿ ಘಟಕಗಳ ಮುಖ್ಯಸ್ಥರಾದ ಗುರಿಕ್ಕಾರು ಘಟಕವಾರು ವರದಿ ಮಂಡಿಸಿದರು. ವಲಯ ಪದಾಧಿಕಾರಿಗಳು ವಿಭಾಗವಾರು ವರದಿ ಮಂಡಿಸಿದರು. ಗೋಕರ್ಣದ ಅಶೋಕೆಯಲ್ಲಿ ಸ್ಥಾಪಿತ ಗೊಳ್ಳಲಿರುವ ವಿಷ್ಣುಗುಪ್ತ ವಿದ್ಯಾಪೀಠದ ಕುರಿತು ವಲಯದ ಅಧ್ಯಕ್ಷರು ಸಮಗ್ರ ಮಾಹಿತಿಗಳನ್ನು ಪ್ರಸ್ತುತಪಡಿಸಿದರು.
ಕೊನೆಗೆ ವಲಯ ಅಧ್ಯಕ್ಷರಾದ ಈಶ್ವರ ಕುಮಾರ ಉಬರಡ್ಕ ಅವರು ಅಧ್ಯಕ್ಷತೆ ನೆಲೆಯಲ್ಲಿ ಮಾತನಾಡಿದರು.
ರಾಮ ತಾರಕ ಜಪ, ಶಾಂತಿ ಮಂತ್ರ ದೊಂದಿಗೆ ಧ್ವಜಅವರೋಹಣ, ಶಂಖನಾದವಾಗಿ ಸಭೆಯು ಮುಕ್ತಾಯವಾಯಿತು.

Related Articles

Leave a Reply

Your email address will not be published. Required fields are marked *

Back to top button