ದಾಸಕೋಡಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ…

ಬಂಟ್ವಾಳ: ಕಲ್ಲಡ್ಕ ಸಮೀಪದ ದಾಸಕೋಡಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಉದ್ಘಾಟಿಸಿದರು.
ಬಾಳ್ತಿಲ ಗ್ರಾ.ಪಂ ಅಧ್ಯಕ್ಷೆ ಹಿರಣ್ಮಯಿ ಸ್ತ್ರೀ ಶಕ್ತಿ ಗುಂಪುಗಳ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ತ್ರೀ ಶಕ್ತಿ ಸದಸ್ಯರಿಗೆ ವೈದ್ಯಕೀಯ ತಪಾಸಣಾ ಕಾರ್ಯಕ್ರಮ ನಡೆಯಿತು.
ಇಲಾಖಾಧಿಕಾರಿ ಗಾಯತ್ರಿ ಕಂಬಳಿ , ವೈದ್ಯಾಧಿಕಾರಿ ಪ್ರಜ್ಞಾ ಶರ್ಮ, ಅಭಿವೃದ್ಧಿ ಅಧಿಕಾರಿ ಸಂಧ್ಯಾ, ಉಪಾಧ್ಯಕ್ಷೆ ಜ್ಯೋತಿ, ಗ್ರಾ.ಪಂ ಸದಸ್ಯರಾದ ಬಿ.ಕೆ ಪೂಜಾರಿ, ಅಶೋಕ, ಮಲ್ಲಿಕಾ , ಚಂದ್ರಶೇಖರ , ಚೈತ್ರ, ಶೋಭ, ವಿಠಲ ನಾೈಕ್, ಪ್ರಮುಖರಾದ ಶುಭಶ್ರೀ, ಸದಾಶಿವ ಆಚಾರ್, ಶೃತಿ, ಮೋಹನ್ ಪಿ.ಎಸ್. ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗಾಯತ್ರಿ ಕಂಬಳಿ, ರಾಜೇಶ್ ಪದ್ಮಿನಿ, ಬಿ.ಆರ್. ಕಬಕ ಗೀತಾ, ಶೋಭ ಇವರನ್ನು ಅಭಿನಂದಿಸಲಾಯಿತು.
ಜ್ಞಾನ ವಿಕಾಸ ಸಮಿತಿಯ ಪದ್ಮಿನಿ ಸ್ವಾಗತಿಸಿ , ವಿನುತ ವಂದಿಸಿದರು. ಲಲಿತ ನಿರೂಪಿದರು.

Sponsors

Related Articles

Back to top button