ಸುದ್ದಿ

ಸೋಮವಾರದಿಂದ ಮದ್ಯ ಮಾರಾಟ ಆರಂಭ…..

ಬೆಂಗಳೂರು: ಕೇಂದ್ರದ ಮಾರ್ಗಸೂಚಿಯನ್ವಯ ಹೊಸ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿ ಅನ್ವಯ ಕರ್ನಾಟಕ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ.
ರಾಜ್ಯವನ್ನು ರೆಡ್​, ಗ್ರೀನ್​​, ಆರೆಂಜ್ ಎಂದು ಮೂರು ಝೋನ್​ಗಳನ್ನಾಗಿಸಿ ವಿಂಗಡಣೆ ಮಾಡಲಾಗಿದೆ. ಎಲ್ಲಾ ಮೂರು ಝೋನ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಈ ಕುರಿತು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದು, ಮೇ 4 ರಿಂದ ಸಿಎಲ್-೨ ಮತ್ತು ಎಂಎಸ್‌ಐಎಲ್ ಮದ್ಯದ ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮದ್ಯದ ಮಳಿಗೆಗಳಲ್ಲಿ ಐದು ಜನ ಗ್ರಾಹಕರು ಮಾತ್ರ ಇರಬೇಕು. ಮದ್ಯ ಖರೀದಿ ಮಾಡವಾಗ 6 ಅಡಿ ಕಡಿಮೆ ಇಲ್ಲದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಆದೇಶದಲ್ಲಿ ತಿಳಿಸಲಾಗಿದೆ.

ಮದ್ಯದಂಗಡಿಗಳು ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದ್ದು, ಮದ್ಯ ಖರೀದಿಸಲು ಬರುವ ಗ್ರಾಹಕರು ಮತ್ತು ಮದ್ಯ ಮಾರಾಟಗಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮದ್ಯದಂಗಡಿಗಳಲ್ಲಿ ಚಾಚೂ ತಪ್ಪದೆ ಸ್ಯಾನಿಟೈಸರ್ ಬಳಕೆಯನ್ನು ಮಾಡಬೇಕಾಗಿದೆ.

ಸಿಎಲ್-2 ಮತ್ತು ಎಂ.ಎಸ್.ಐ.ಎಲ್ ಮದ್ಯದ ಮಳಿಗೆಗಳು ಹೊರತುಪಡಿಸಿ ಮಾಲ್ ಗಳು ಮತ್ತು ಸೂಪರ್ ಮಾರ್ಕೆಟ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಅಬಕಾರಿ ಕಾಯ್ದೆ ಆದೇಶ ಮತ್ತು ಅನ್ವಯಿಸುವ ತತ್ಸಂಬಂಧಿತ ನಿಯಗಳನ್ನು ಮದ್ಯದ ಮಳಿಗೆಗಳು ಪಾಲಿಸಬೇಕು. ಸರ್ಕಾರದ ಆದೇಶ ಪಾಲನೆಯಾಗುತ್ತಿದೆಯೇ ಎನ್ನುವುದನ್ನು ಅಬಕಾರಿ ಉಪ ಆಯುಕ್ತರು ಪರಿಶೀಲನೆ ಮಾಡಬೇಕು. ಹಾಗೊಂದು ವೇಳೆ ಆದೇಶ ಉಲ್ಲಂಘಿಸಿದರೆ ಪರವಾನಗಿ ರದ್ದು ಮಾಡುವುದಾಗಿಯೂ ಸರ್ಕಾರ ಎಚ್ಚರಿಕೆ ನೀಡಿದೆ.

Related Articles

Leave a Reply

Your email address will not be published.

Back to top button