ಸುದ್ದಿ

ಹಾಜಿ ಕೆ ಅಬ್ದುಲ್ ಖಾದರ್ ರವರಿಗೆ ನುಡಿ ನಮನ….

ಬಂಟ್ವಾಳ: ಮಾಣಿ ವಿದ್ಯಾಭಿವರ್ಧಕ ಸಂಘದ ಕರ್ನಾಟಕ ಪ್ರೌಢ ಶಾಲೆ, ಕರ್ನಾಟಕ ಪದವಿ ಪೂರ್ವ ವಿದ್ಯಾಲಯ, ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾಗಿ 38 ವರ್ಷಗಳ ಸದೀರ್ಘ ಸೇವೆ ಸಲ್ಲಿಸಿದ , ಧಾರ್ಮಿಕ-ಸಾಮಾಜಿಕ-ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಜನಮಾಸದ ಪ್ರೀತಿಗೆ ಪಾತ್ರರಾಗಿದ್ದ , 95 ವರ್ಷಗಳ ಸುದೀರ್ಘ ಅವಧಿಯ ಜೀವನ ನಡೆಸಿದ ಹಿರಿಯರಾದ ಹಾಜಿ ಕೆ ಅಬ್ದುಲ್ ಖಾದರ್ ರವರಿಗೆ ನುಡಿ ನಮನ ಸಲ್ಲಿಸುವ ಶ್ರದ್ದಾಂಜಲಿ ಕಾರ್ಯಕ್ರಮ ಮಾಣಿಯ ಕರ್ನಾಟಕ ಪ್ರೌಢ ಶಾಲೆಯಲ್ಲಿ ಜರಗಿತು.
ಮಾಜಿ ಸಚಿವರಾದ ಬಿ ರಮಾನಾಥ ರೈ ಯವರು ನುಡಿ ನಮನವನ್ನು ಸಲ್ಲಿಸಿ ಅಬ್ದುಲ್ ಖಾದರ್ ರವರ ಸಾಮಾಜಿಕ ಸೇವೆಯನ್ನು ಕೊಂಡಾಡಿ , ಪ್ರೀತಿ, ವಾತ್ಸಲ್ಯದ ಬದುಕನ್ನು ನೆನಪಿಸಿಕೊಂಡರು.
ಶ್ರದ್ದಾಂಜಲಿ ಸಭೆಯ ಅಧ್ಯಕ್ಷತೆಯನ್ನು ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷರಾದ ರೊ. ಕಿರಣ್ ಹೆಗ್ಡೆ ಯವರು ವಹಿಸಿದ್ದರು.
ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾಧವ ಮಾವೆ, ತಾಲೂಕು ಪಂಚಾಯತ್ ಸದಸ್ಯೆ ಕುಶಾಲ ಪೆರಾಜೆ, ಪಂಚಾಯತ್ ಅಧ್ಯಕ್ಷೆ ಮಮತಾ ಶೆಟ್ಟಿ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಪ್ರಹ್ಲಾದ್ ಶೆಟ್ಟಿ , ಪ್ರಮುಖರಾದ ಪ್ರಫುಲ್ಲ ಆರ್ ರೈ, ಶ್ರೀಕಾಂತ್ ಆಳ್ವ, ಮಹಮ್ಮದ್ ರಫೀಕ್, ಗಂಗಾಧರ ರೈ ತುಂಗೆರೆಕೋಡಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಬಿ.ಕೆ ಭಂಡಾರಿ ಸ್ವಾಗತಿಸಿ , ಪ್ರಾಂಶುಪಾಲರಾದ ಶ್ರೀ ದೇವಿ ಧನ್ಯವಾದ ಸಲ್ಲಿಸಿದರು. ವಿದ್ಯಾಭಿವರ್ಧಕ ಸಂಘದ ನಿರ್ದೇಶಕ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button