ಅಕಾಡೆಮಿಗಳಿಗೆ ನೇಮಕದಲ್ಲಿ ಕ್ರೈಸ್ತ ಕೊಂಕಣಿಗರಿಗೆ ಅನ್ಯಾಯ – ಐವನ್ ಡಿಸೋಜಾ…
ಮಂಗಳೂರು: ರಾಜ್ಯದ 16 ಅಕಾಡೆಮಿಗಳು ಮತ್ತು ಪ್ರಾಧಿಕಾರಗಳಿಗೆ ಸರ್ಕಾರ ಮಾಡಿದ ನೇಮಕದಲ್ಲಿ ಕ್ರೈಸ್ತ ಸಮುದಾಯಕ್ಕೆ ಅನ್ಯಾಯವಾಗಿದೆ. ನೇಮಕಗೊಂಡ ಒಟ್ಟು 250 ಸದಸ್ಯರಲ್ಲಿ ಕ್ರೈಸ್ತ ಕೊಂಕಣಿ ಭಾಷಿಕ ಸಮುದಾಯದ ಒಬ್ಬರಿಗೂ ಸದಸ್ಯ ಸ್ಥಾನವನ್ನು ನೀಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಈ ಅನ್ಯಾಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಮುಂದಿನ 15 ದಿನದೊಳಗೆ ಸರಿಪಡಿಸಬೇಕು. ಇಲ್ಲವಾದಲ್ಲಿ ಸಮುದಾಯದ ಮುಖಂಡರು, ಸಾಹಿತಿಗಳೊಂದಿಗೆ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.