ಬಂಟ್ವಾಳ ನಗರ ಪೋಲೀಸ್ ಠಾಣೆ – 12 ಪ್ರಕರಣಗಳನ್ನು ಭೇಧಿಸಿ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳ ಸ್ವಾಧೀನ…

ಬಂಟ್ವಾಳ: ಬಂಟ್ವಾಳ ನಗರ ಪೋಲೀಸ್ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್ ಹಾಗೂ ಎಸ್.ಐ.ನೇತ್ರತ್ವದಲ್ಲಿ ಈ ವರ್ಷದಲ್ಲಿ ಒಟ್ಟು 12 ಪ್ರಕರಣಗಳನ್ನು ಭೇಧಿಸಿ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ .
2021 ನೇ ವರ್ಷದಲ್ಲಿ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ , ಸುಲಿಗೆ, ವಂಚನೆ ಸೇರಿದಂತೆ ಒಟ್ಟು 12 ಪ್ರಕರಣಗಳನ್ನು ಬೇಧಿಸಿ ಒಟ್ಟು 17 ಲಕ್ಷದ 33 ಸಾವಿರ ರೂ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವ ಪೋಲೀಸರು ನ್ಯಾಯಾಲಯದ ಅನುಮತಿ ಪಡೆದುಕೊಂಡು ನ.22 ರಂದು ಸಹಾಯಕ ಪೋಲೀಸ್ ಅಧೀಕ್ಷಕ ಶಿವಾಂಷು ರಜಪೂತ್ ಐ.ಪಿ‌.ಎಸ್. ಅವರು ವಾರಸುದಾರ ರಿಗೆ ಹಸ್ತಾಂತರ ಮಾಡಿದರು.
11,3400 ರೂ ಮೌಲ್ಯದ 252.390 ಗ್ರಾಂ.ತೂಕ ದ ಚಿನ್ನಾಭರಣಗಳು, 5,49,00 ಮೌಲ್ಯದ ಬೋಲೇರೊ ಜೀಪ್, ಒಂದು ಆಲ್ಟೋ ಕಾರು, ಒಂದು ಮೋಟಾರ್ ಸೈಕಲ್, ರೂ.50000 ಮೌಲ್ಯದ ಲ್ಯಾಪ್ ಟಾಪ್ ಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದರು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ ಅವರ ನಿರ್ದೇಶನದಂತೆ ಹೆಚ್ಚುವರಿ ಪೋಲೀಸ್ ಅಧೀಕ್ಷಕರಾದ ಡಾ! ಶಿವಕುಮಾರ್ ಗುಣಾರೆರವರ ಮಾರ್ಗದರ್ಶನದಲ್ಲಿ ಬಂಟ್ವಾಳ ಎ.ಎಸ್.ಪಿ.ಶಿವಾಂಷು ರಜಪೂತ್ ಐ.ಪಿ.ಎಸ್. ನೇತೃತ್ವದಲ್ಲಿ ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಹಾಗೂ ಬಂಟ್ವಾಳ ನಗರ ಠಾಣಾ ಎಸ್ ‌ಐ.ಅವಿನಾಶ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು.

Sponsors

Related Articles

Back to top button