ಅಬುದಾಬಿ ಲಾಟರಿಯ 23 ಕೋಟಿ ರೂಪಾಯಿ ಸುಳ್ಯದ ಜಟ್ಟಿಪಳ್ಳದ ಯುವಕನಿಗೆ…..
ಸುಳ್ಯ: ಸುಮಾರು 23 ಕೋಟಿಯ ಮೌಲ್ಯದ ಅಬುದಾಬಿ ಲಾಟರಿಯ ಅದೃಷ್ಟ ಸುಳ್ಯದ ಜಟ್ಟಿಪಳ್ಳದ ಮಹಮ್ಮದ್ ಫಯಾಜ್ ಅವರಿಗೆ ಲಭಿಸಿದೆ ಎಂದು ತಿಳಿದು ಬಂದಿದೆ.
ಗುರುವಾರ ಡ್ರಾ ಮಾಡಲಾದ 12 ಮಿಲಿಯನ್ ದಿರ್ ಹಾಂ(ಅಂದಾಜು 23 ಕೋಟಿ) ಲಾಟರಿಯ ಪ್ರಥಮ ಬಹುಮಾನ ಮುಂಬೈನಲ್ಲಿ ಉದ್ಯೋಗದಲ್ಲಿರುವ ಸುಳ್ಯ ಜಟ್ಟಿಪಳ್ಳದ ಮಹಮ್ಮದ್ ಫಯಾಜ್ ಅವರಿಗೆ ಲಭಿಸಿದೆ ಎಂದು ತಿಳಿದು ಬಂದಿದೆ. ಫಯಾಜ್ ಕಳೆದ ಆರು ತಿಂಗಳಿನಿಂದ ದೊಡ್ಡ ಮೊತ್ತದ ಅಬುದಾಬಿ ಲಾಟರಿ ಟಿಕೆಟ್ ಗಳನ್ನು ಖರೀದಿಸುತ್ತಿದ್ದರು ಎನ್ನಲಾಗಿದೆ. ಇದೀಗ ಅವರಿಗೆ ಪ್ರಥಮ ಬಹುಮಾನದ ರೂಪದಲ್ಲಿ ಅದೃಷ್ಠ ಒಲಿದು ಬಂದಿದೆ.ವಿಶೇಷ ಎಂದರೆ ಯುಎಇಗೆ ಎಂದಿಗೂ ಭೇಟಿ ನೀಡದ ಭಾರತೀಯ ವ್ಯಕ್ತಿಯೊಬ್ಬರು ಗುರುವಾರ ಸಂಜೆ ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಬಿಗ್ ಟಿಕೆಟ್ ರಾಫೆಲ್ ಡ್ರಾದಲ್ಲಿ 12 ಮಿಲಿಯನ್ ಗೆದ್ದಿದ್ದಾರೆ.
ಮೊದಲು ಡ್ರಾ ಗೆದ್ದಿರುವ ಬಗ್ಗೆ ಕರೆ ಬಂದಾಗ ನಂಬಲು ಆಗಲಿಲ್ಲ. ಬಳಿಕ ಆನ್ ಲೈನ್ ನಲ್ಲಿ ಪರಿಶೀಲನೆ ಮಾಡಿದಾಗ ಖಚಿತವಾಯಿತು ಎಂದು ಮಹಮ್ಮದ್ ಫಯಾಜ್ ಪ್ರತಿಕ್ರಿಯಿಸಿದ್ದಾರೆ.