ಅಬ್ಬಕ್ಕ ಪ್ರತಿಷ್ಠಾನದಿಂದ ತಾರಾನಾಥ ರೈ ಅವರಿಗೆ ನುಡಿ ನಮನ…

ಹಲವು ಕ್ರೀಡಾಳುಗಳನ್ನು ರೂಪಿಸಿದ ಆದರ್ಶ ಅಧ್ಯಾಪಕ ರೈ…

ಮಂಗಳೂರು: ‘ಮೂಲತಃ ಪುತ್ತೂರು ತಾಲೂಕಿನವರಾದ ಮೊದೆಲ್ಕಾಡಿ ತಾರಾನಾಥ ರೈ ಕೋಟೆಕಾರು ಆನಂದಾಶ್ರಮ ಶಾಲೆಯಲ್ಲಿ 32 ವರ್ಷ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸಮಾಜದ ಗೌರವಕ್ಕೆ ಪಾತ್ರರಾದವರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಹಲವು ಕ್ರೀಡಾಳುಗಳನ್ನು ರೂಪಿಸಿದ ಆದರ್ಶ ಅಧ್ಯಾಪಕರು. 1997ರಿಂದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಕ್ರೀಡೋತ್ಸವ ಸಂಚಾಲಕರಾಗಿ, ಪುನಾರಚಿತ ಅಬ್ಬಕ್ಕ ಪ್ರತಿಷ್ಠಾನದ ಉಪಾಧ್ಯಕ್ಷರಾಗಿ ಅವರ ಸೇವೆ ಸ್ಮರಣೀಯ’ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಇತ್ತೀಚೆಗೆ ನಿಧನರಾದ ನಿವೃತ್ತ ಕ್ರೀಡಾ ಶಿಕ್ಷಕ ಮತ್ತು ಶ್ರೇಷ್ಠ ಸಂಘಟಕ ಕೆ.ತಾರಾನಾಥ ರೈಯವರಿಗೆ ದೇರಳಕಟ್ಟೆ ಕಂಫರ್ಟ್ ಇನ್ ಸಭಾಂಗಣದಲ್ಲಿ ಜರಗಿದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ನುಡಿ ನಮನ ಸಲ್ಲಿಸಿದರು.
ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ದ.ಕ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಚಾಲಕ ಲ. ಚಂದ್ರಹಾಸ ಶೆಟ್ಟಿ, ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಕೋಶಾಧಿಕಾರಿ ಪಿ.ಡಿ. ಶೆಟ್ಟಿ ಮೃತರ ಗುಣಗಾನ ಮಾಡಿದರು. ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ದೈಹಿಕ ಶಿಕ್ಷಕ ಸಂಘದ ಪರವಾಗಿ ಶ್ರದ್ಧಾಂಜಲಿ ಅರ್ಪಿಸಿದರು.
ಪ್ರತಿಷ್ಠಾನದ ಪ್ರಮುಖರಾದ ವಾಮನ್ ಬಿ. ಮೈಂದನ್, ತುಕಾರಾಮ ಉಳ್ಳಾಲ್, ಪುರುಷೋತ್ತಮ ಅಂಚನ್, ಮೋಹನ್ ದಾಸ್ ರೈ, ಸುವಾಸಿನಿ ಬಬ್ಬುಕಟ್ಟೆ, ವಿಜಯಲಕ್ಷ್ಮಿ ಬಿ.ಶೆಟ್ಟಿ, ಸುಮಾ ಪ್ರಸಾದ್, ವಿಜಯಲಕ್ಷ್ಮಿ ಕಟೀಲು, ಪ್ರತಿಮಾ ಹೆಬ್ಬಾರ್ ,ಜಯಲಕ್ಷ್ಮಿ ಶೆಟ್ಟಿ ಉಪಸ್ಥಿತರಿದ್ದರು. ಸಭೆಯಲ್ಲಿ ದಿ.ತಾರಾನಾಥ ರೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೌನ ಪ್ರಾರ್ಥನೆಯೊಂದಿಗೆ ಗೌರವ ಸಲ್ಲಿಸಲಾಯಿತು.

img 20230113 wa0015
img 20230113 wa0017
Sponsors

Related Articles

Back to top button