ಇಂದು ರಾತ್ರಿ 12 ಗಂಟೆಯಿಂದ ಮೂರು ವಾರ ದೇಶವೇ ಲಾಕ್ ಡೌನ್….
![](wp-content/uploads/2020/03/Quotes-from-PM-Modis-Speech-to-control-spread-of-Coronavirus-1-780x470.webp)
ನವದೆಹಲಿ:ಇವತ್ತು ರಾತ್ರಿ 12 ಗಂಟೆಯಿಂದ 21 ದಿನಗಳ ಕಾಲ ದೇಶ ಸಂಪೂರ್ಣ ಲಾಕ್ ಡೌನ್ ಆಗಲಿದೆ. ಏಪ್ರಿಲ್ 14ರವರೆಗೆ ದೇಶ ಲಾಕ್ ಡೌನ್ ಆಗಲಿದೆ.ಕರೋನಾವನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಸರ್ಕಾರದೊಂದಿಗೆ ಜನ ಕೈ ಜೋಡಿಸಬೇಕಿದೆ. ಹಾಗಾಗಿ ಕೇಂದ್ರದ ಆದೇಶವನ್ನು ಪಾಲಿಸಿ 21 ದಿನಗಳ ಕಾಲ ಮನೆಯಲ್ಲೇ ಇರಬೇಕಿದೆ. ಇಂದು ರಾತ್ರಿಯಿಂದ ಏಪ್ರಿಲ್ 14ರ ತನಕ ಅಂದರೆ, ಮೂರು ವಾರಗಳ ಕಾಲ ಲಾಕ್ ಡೌನ್ ಇರಲಿದೆ ಎಂದು ತಿಳಿಸಿದ ಅವರು ಕೊರೋನಾ ನಿಯಂತ್ರಣಕ್ಕೆ 15 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದರು.