ಕ್ಷೇತ್ರದ ಪಾವಿತ್ರ್ಯತೆ ಹಾಳಾಗುವುದನ್ನು ಸಹಿಸುವುದಿಲ್ಲ – ರಾಧಾಕೃಷ್ಣ ಅಡ್ಯಂತಾಯ…

ಬಂಟ್ವಾಳ: ಧಾಮಿಕ ಕ್ಷೇತ್ರಗಳು ಅಭಿವ್ರದ್ಧಿಯಾಗಬೇಕು, ಭಕ್ತಾದಿಗಳಿಗೆ ಉತ್ತಮ ವ್ಯವಸ್ಥೆಗಳನ್ನು ಒದಗಿಸಬೇಕು. ಆದರೆ ಪ್ರವಾಸೋದ್ಯಮದ ಹೆಸರಲ್ಲಿ ಕ್ಷೇತ್ರದ ಪಾವಿತ್ರ್ಯತೆ ಹಾಳಾಗುವುದನ್ನು ನಾವು ಸಹಿಸುವುದಿಲ್ಲ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಹೇಳಿದರು.
ಅವರು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಆಶ್ರಯದಲ್ಲಿ ಅ. 17 ರಂದು ಆಯೋಜಿಸಲಾಗಿದ್ದ ನಮ್ಮ ನಡಿಗೆ ನರಹರಿಯ ಕಡೆಗೆ ಪಾದಯಾತ್ರೆ ಮತ್ತು ಜನಜಾಗೃತಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಬಾಲವಾಗ್ಮಿ ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಿದರು. ಪೂರ್ವಜರು ನಮಗೆ ಬಿಟ್ಟುಹೋದ ಆಸ್ತಿಯನ್ನು ರಕ್ಷಿಸುವ ಕೆಲಸವನ್ನು ನಾವಿಂದು ಮಾಡಬೇಕಾಗಿದೆ. ಅಪಘಾನಿಸ್ಥಾನದಲ್ಲಿ ಆದ ಘಟನೆಗಳು ಇಲ್ಲಿ ಆಗಬಾರದೆಂದಾದರೆ ಜಾಗೃತರಾಗಿ ಸಂಘಟಿತರಾಗಬೇಕು ಎಂದರು.
ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಮಾತನಾಡಿ, ನರಹರಿ ಪರ್ವತ ನಮಗೆಲ್ಲರಿಗೂ ಶ್ರದ್ಧಾಕೇಂದ್ರ, ಇದರ ಪಾವಿತ್ರ್ಯ ಉಳಿಸಲು ಹಿಂದು ಜಾಗರಣಾ ವೇದಿಕೆ ವಿಟ್ಲ ತಾಲೂಕು ಕಟಿಬದ್ಧವಾಗಿದೆ ಎಂದು ತಿಳಿಸಿದರು.
ಹಿಂದು ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾಧ್ಯಕ್ಷ ಜಗದೀಶ ನೆತ್ತರಕೆರೆ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುತ್ತೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ, ತಾಲೂಕು ಅಧ್ಯಕ್ಷ ಗಣೇಶ್ ಕುಲಾಲ್ ಕೆದಿಲ ಉಪಸ್ಥಿತರಿದ್ದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಅರುಣ್ ಸಜಿಪ ಸ್ವಾಗತಿಸಿದರು. ವೈಯಕ್ತಿಕ ಗೀತೆ ವಿದ್ಯಾಶ್ರೀ ಕಲ್ಲಡ್ಕ ಹಾಡಿದರು. ಕಲ್ಲಡ್ಕ ಶ್ರೀರಾಮ ಮಂದಿರದ ಬಳಿಯಿಂದ ಮತ್ತು ಮೆಲ್ಕಾರ್ ಜಂಕ್ಷನ್ ನಿಂದ ನರಹರಿ ಪರ್ವತಕ್ಕೆ ಪಾದಯಾತ್ರೆ ನಡೆಯಿತು. ವಿಭಾಗ ಸಂಪರ್ಕ ಪ್ರಮುಖ್ ರತ್ನಾಕರ ಶೆಟ್ಟಿ ಕಲ್ಲಡ್ಕ, ಪ್ರಮುಖರಾದ ದಿನೇಶ್ ಅಮ್ಟೂರು, ಪುರುಷೋತ್ತಮ ಸಾಲಿಯಾನ್, ಪಿ.ಎಸ್.ಮೋಹನ್, ರವೀಶ್ ಶೆಟ್ಟಿ, ದಯಾನಂದ ಉಜಿರೆಮಾರು, ತಾಲೂಕು ಜಿಲ್ಲೆಯ ಪದಾಧಿಕಾರಿಗಳು ಹಾಗೂ ಜಾಗರಣ ವೇದಿಕೆಯ ಕಾರ್ಯಕರ್ತರು ಭಾಗವಹಿಸಿದ್ದರು.

Sponsors

Related Articles

Back to top button