ಇ-ಗವರ್ನೆನ್ಸ್ ನೆಟ್ ವರ್ಕ್ ಎಂಡ್ ಸೊಲ್ಯುಶನ್ ಫಾರ್ ಕರ್ನಾಟಕ – ಕಾರ್ಯಾಗಾರ….

ಪುತ್ತೂರು: ಸರ್ಕಾರದ ಆಶೋತ್ತರಗಳಿಗೆ ತಕ್ಕಂತೆ ದೇಶದ ಗ್ರಾಮೀಣ ಭಾಗಗಳಿಗೆ, ಹಳ್ಳಿ ಹಳ್ಳಿಗಳಿಗೆ ಡಿಜಿಟಲ್ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇವೆ ಎಂದು ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಲಹೆಗಾರ ಬೇಳೂರು ಸುದರ್ಶನ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿವೇಕಾನಂದ ಕಾಲೇಜ್ ಆಫ್ ಆಟ್ರ್ಸ್, ಸೈನ್ಸ್ ಎಂಡ್ ಕಾಮರ್ಸ್, ವಿವೇಕಾನಂದ ಸೆಂಟರ್ ಫಾರ್ ರೀಸರ್ಚ್ ಸ್ಟಡೀಸ್ ಹಾಗೂ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ನಡೆದ ಇ-ಗವರ್ನೆನ್ಸ್ ನೆಟ್ ವರ್ಕ್ ಎಂಡ್ ಸೊಲ್ಯುಶನ್ ಫಾರ್ ಕರ್ನಾಟಕ ಎನ್ನುವ ವಿಷಯದ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತಾಡಿದರು.
ಭಾರತ್ ಬ್ರಾಡ್‍ಬ್ಯಾಂಡ್ ನೆಟ್ ವರ್ಕ್ ಲಿಮಿಟೆಡ್ ಮೂಲಕ 4 ಲಕ್ಷ ಕಿಲೋಮೀಟರ್ ಒಎಫ್‍ಸಿ ಕೇಬಲ್ ಅಳವಡಿಸಲಾಗಿದ್ದು, ದೇಶದ 142678 ಗ್ರಾಮ ಪಂಚಾಯತ್‍ಗಳನ್ನು ಈ ಮೂಲಕ ಜೋಡಿಸಲಾಗಿದೆ ಎಂದರು. ಇಷ್ಟು ದೊಡ್ದ ಜಾಲದಲ್ಲಿ ಆಗಾಗ ನೆಟ್ ವರ್ಕ್ ತೊಡಕುಗಳು ಉಂಟಾಗುವುದು ಸಹಜ ಇದಕ್ಕೆ ದೀರ್ಘಕಾಲೀನ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ ಎಂದರು. ಭವಿಷ್ಯದ ದಿನಗಳಲ್ಲಿಯೂ ಬಳಕೆಯಾಗುವಂತಹ ದೂರದೃಷ್ಟಿಯುಳ್ಳ ನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಎಲ್ಲರೂ ತಮ್ಮ ಸಲಹೆ ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳುವಂತೆ ಅವರು ವಿನಂತಿಸಿದರು.
ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸರ್ಕಾರದ ವಿಶ್ರಾಂತ ಕಾರ್ಯದರ್ಶಿ ಹಾಗೂ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‍ನ ಸ್ವತಂತ್ರ ನಿರ್ದೇಶಕ ವಿ.ವಿ.ಭಟ್, ನಾವು ವಿಜಯದ ಯಶೋಗಾಥೆಗಳನ್ನು ಮಾತ್ರ ಓದುವುದಕ್ಕೆ ಇಚ್ಚೆಪಡುತ್ತೇವೆ ಆದರೆ ವೈಫಲ್ಯದ ಅವಲೋಕನವನ್ನು ಮಾಡುವುದಿಲ್ಲ ಇದರಿಂದಾಗಿ ಸೋಲು ಕಲಿಸುವ ಪಾಠದಿಂದ ನಾವು ವಂಚಿತರಾಗುತ್ತೇವೆ ಎಂದರು. ಯಶಸ್ಸನ್ನು ಗಳಿಸುವುದಕ್ಕೆ ಸೋಲಿನ ಪಾಠ ತುಂಬಾ ಆವಶ್ಯಕ ವೈಫಲ್ಯಗಳು ಶಾಶ್ವತ ಅಲ್ಲ ಅದೊಂದು ತಾತ್ಕಾಲಿಕ ತಂಗುದಾಣ ಎಂದರು. ನೆಟ್ ವರ್ಕ್ ಕ್ಷೇತ್ರದ ಸಂಪರ್ಕದ ವ್ಯವಸ್ಥೆ, ಸರ್ವರ್‍ಗಳ ಸಾಮಥ್ರ್ಯ, ವ್ಯವಸ್ಥೆಯ ವಿಶ್ವಾಸಾರ್ಹತೆ ಹೆಚ್ಚುವಂತೆ ಮಾಡಿ ಇದು ನಾಗರಿಕ ಕೇಂದ್ರಿತ ವ್ಯವಸ್ಥೆಯಾಗುವಂತೆ ಮಾಡುವ ಆವಶ್ಯಕತೆ ಇದೆ ಎಂದರು. ಸಮಸ್ಯೆಯಾದಾಗ ಅದು ತಾಂತ್ರಿಕ ವೈಫಲ್ಯವೆಂದು ಸುಮ್ಮನಾಗುವ ಬದಲು ಸರ್ಕಾರದ ಇಲಾಖೆಗಳ ನಡುವಿನ ಹೊಂದಾಣಿಕೆಯನ್ನು ಉತ್ತಮಪಡಿಸುವುದರ ಮೂಲಕ ಇದನ್ನು ಪರಿಹರಿಸಬಹುದು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಮಾತನಾಡಿ ಯಾವುದೇ ತಂತ್ರಜ್ಞಾನಗಳನ್ನು ಬಳಕೆಗೆ ಬಿಡುಗಡೆಗೊಳಿಸುವ ಮೊದಲು ಅದರ ಸಾಧಕ ಬಾಧಕಗಳನ್ನು ಪರಾಮರ್ಶಿಸಬೇಕು ಮತ್ತು ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಬೇಕು ಇದರಿಂದ ಜನಸಾಮಾನ್ಯರು ತೊಂದರೆಗೊಳಗಾಗುವುದನ್ನು ತಪ್ಪಿಸಬಹುದು ಎಂದರು. ತಂತ್ರಜ್ಞರು ತಮ್ಮಲ್ಲಿರುವ ವಿಶೇಷ ನೈಪುಣ್ಯತೆಗಳನ್ನು ಬಳಸಿಕೊಂಡು ಹೊಸ ಹೊಸ ಆವಿಷ್ಕಾರಗಳತ್ತ ಗಮನಹರಿಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸರ್ಕಾರದ ಯಶಸ್ಸು ಅಲ್ಲಿನ ಸಂಪರ್ಕ ವ್ಯವಸ್ಥೆಯನ್ನು ಅವಲಂಬಿಸಿದೆ ಎಂದರು. ವಿವಿಧ ಇಲಾಖೆಗಳೊಳಗಿನ ವ್ಯವಹಾರಕ್ಕೆ ಮಾಹಿತಿ ತಂತ್ರಜ್ಞಾನದ ಕೊಡುಗೆ ಅಪಾರ ಇದು ಸರಿಯಾಗಿ ಕಾರ್ಯನಿರ್ವಹಿಸಿದರೆ ಸಾರ್ವಜನಿಕರ ಸಮಸ್ಯೆ ನಿವಾರಣೆಯಾಗಬಹುದು ಎಂದರು.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‍ನ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸುಲು ರೆಡ್ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ವೈಡ್ ನೆಟ್ ವರ್ಕ್ ಮತ್ತು ಇ-ಗವರ್ನೆನ್ಸ್‍ನ ಯೋಜನಾ ನಿರ್ದೇಶಕ ಕೆ.ರಮೇಶ್, ಎನ್‍ಐಸಿ ಬೆಂಗಳೂರಿನ ತಾಂತ್ರಿಕ ನಿರ್ದೇಶಕ ಪಿ.ಮೋಹನ್, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‍ನ ಅಧಿಕಾರಿಗಳಾದ ಬಾಲಸುಬ್ರಮಣ್ಯ.ಕೆ, ಕೃಷ್ಣಕುಮಾರ್ ಪಡಾರ್ ಮತ್ತು ಜಯರಾಮ್.ಕೆ.ಎಲ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡರು.
ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರೊ.ಮಹೇಶ್‍ಪ್ರಸನ್ನ ವಂದನಾರ್ಪಣೆಗೈದರು. ಉಪನ್ಯಾಸಕಿಯರಾದ ಪ್ರೊ.ತಪಸ್ವಿನಿ ಮತ್ತು ಪ್ರೊ .ಭಾನುಪ್ರಿಯ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button