ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿ – ಕಡಿದ ಮರಕ್ಕೆ 10 ಪಟ್ಟು ಗಿಡ ನೆಟ್ಟು ಪರಿಸರ ಕಾಪಾಡಿ; ಸಾರ್ವಜನಿಕರಿಂದ ಮನವಿ….

ಪುತ್ತೂರು: ರಸ್ತೆ ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿನ ಮರಗಳನ್ನು ಕಡಿದು ತೆರುವುಗೊಳಿಸುವುದು ಅನಿವಾರ್ಯ ಅದರೆ ಬಳಿಕ ಆ ರಸ್ತೆಯ ಇಕ್ಕೆಲಗಳಲ್ಲಿ ಕಡಿದ ಒಂದು ಮರಕ್ಕೆ 10 ಗಿಡಗಳಂತೆ ನೆಟ್ಟು ಪರಿಸರವನ್ನು ಕಾಪಾಡುವುದು ಅಧಿಕಾರಿಗಳು ಸಹಿತ ಸಾರ್ವಜನಿಕರ ಜವಾಬ್ದಾರಿಯಾಗಿದೆ. ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ಕಾಮಗಾರಿ ಬಳಿಕ ಇಲ್ಲಿ ಕಡಿದ ಮರಗಳಿಗೆ ಬದಲಾಗಿ ಕನಿಷ್ಠ 10 ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
ಪುತ್ತೂರು-ಉಪ್ಪಿನಂಗಡಿ ರಸ್ತೆಯ ಚತುಷ್ಪಥ ಕಾಮಗಾರಿಗಾಗಿ 2ನೇ ಹಂತದಲ್ಲಿ ರೂ. 12 ಕೋಟಿ ಬಿಡುಗಡೆಗೊಂಡಿದ್ದು, ರಸ್ತೆ ಅಗಲೀಕರಣದ ವೇಳೆಯಲ್ಲಿ ಮರಗಳ ತೆರವು ಬಗ್ಗೆ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ ಶುಕ್ರವಾರ ಪುತ್ತೂರಿನ ಅರಣ್ಯ ಇಲಾಖೆಯ ಕಚೇರಿ ವಠಾರದಲ್ಲಿ ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಯಿತು.
ತಾ.ಪಂ ಮಾಜಿ ಅಧ್ಯಕ್ಷ ಜಯಾನಂದ ಕೋಡಿಂಬಾಡಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ತಾ.ಪಂ ಸದಸ್ಯ ಮುಕುಂದ ಬಜತ್ತೂರು, ಬನ್ನೂರು ಗ್ರಾ.ಪಂ ಸದಸ್ಯ ರತ್ನಾಕರ ಪ್ರಭು, ಎಸ್‍ಕೆಡಿಆರ್‍ಡಿಪಿ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡ ಗುಂಡೊಳೆ, ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಪ್ರದಾನ ಕಾರ್ಯದರ್ಶಿ ರೂಪೇಶ್ ರೈ ಅಲಿಮಾರ್, ಕೋಡಿಂಬಾಡಿ ಗ್ರಾ,ಪಂ ಸದಸ್ಯ ಮನೋಹರ್ ಗೌಡ ಡಿ.ವಿ, ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ, ತಾ.ಪಂ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮೋಹನ್ ಪಕ್ಕಳ ಕುಂಡಾಪು, ಸೀತಾರಾಮ ಶೆಟ್ಟಿ ಹೆಗ್ಗಡೆಹಿತ್ತಿಲು, ಸಂದೀಪ್ ಲೋಬೋ, ಬಿಜೆಪಿ ಯುವ ಮೋರ್ಛಾದ ಮಾಜಿ ಅಧ್ಯಕ್ಷ ಸುನೀಲ್ ದಡ್ಡು, ನವ ಜೀವನ ಟ್ರಸ್ಟ್‍ನ ಪದಾಧಿಕಾರಿಗಳು ಸೇರಿದಂತೆ ಹಲವು ಮಂದಿ ಅಭಿಪ್ರಾಯ ವ್ಯಕ್ತ ಪಡಿಸಿದರು. ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಈ ಬಗ್ಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಿ ಕರಿಕಲನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಲಯ ಅರಣ್ಯಾಧಿಕಾರಿ ಮೋಹನ್ ಸ್ವಾಗತಿಸಿ, ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button