ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಚುಟುಕು ಕವಿಗೋಷ್ಠಿ…..

ಕಾಸರಗೋಡು : ಮೈಸೂರಿನ ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಘಟಕ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಕಾರದಲ್ಲಿ ಈಚೆಗೆ ನಡೆದ 5ನೇ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಮಕ್ಕಳ ಚುಟುಕು ಕವಿಗೋಷ್ಠಿ ಹಾಗೂ ಹಿರಿಯರ ಚುಟುಕು ಕವಿಗೋಷ್ಠಿ ಸಮಾಜದ ವಿವಿಧ ಅವ್ಯವಸ್ಥೆಗಳನ್ನು ಕುಟುಕಿ, ನಗೆಯುಕ್ಕಿಸಿ, ಚಿಂತನೆಗೆ ಅವಕಾಶ ನೀಡಿದುವು.
ಚುಟುಕು ಕವಿಗೋಷ್ಠಿಯಲ್ಲಿ ಕೇರಳ ಹಾಗೂ ಕರ್ನಾಟಕದಿಂದ ಆಗಮಿಸಿದ ಸುಮಾರು 40ಕ್ಕೂ ಮಿಕ್ಕಿದ ಕವಿಗಳು ಸ್ವರಚಿತ ಚುಟುಕು ವಾಚನ ಮಾಡಿದರು. ಪೆರಿಯ ಕೇರಳ ಕೇಂದ್ರೀಯ ವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ಡಾ. ಸ್ವಾಮಿ ನ ಕೋಡಿಹಳ್ಳಿ ಹಿರಿಯರ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕಾಟುಕುಕ್ಕೆಯ ಸೃಷ್ಟಿ ಕೆ ಶೆಟ್ಟಿ ವಹಿಸಿದ್ದರು.
ಕವಿಗೋಷ್ಠಿಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಕಡಬ ಗೌರವಾಧ್ಯಕ್ಷ ಜಯಾನಂದ ಪೆರಾಜೆ, ಉಪಾಧ್ಯಕ್ಷೆ ಶಾಂತಾ ಪುತ್ತೂರು, ಎಂ.ಪಿ. ಬಶೀರ್ ಮಹಮ್ಮದ್ ಬಂಟ್ವಾಳ, ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸುರೇಶ್ ನೆಗಳಗುಳಿ, ಕರ್ನಾಟಕದ ಗೀತಾ ಮಂಜು ದಾವಣಗೆರೆ, ಡಾ. ಜಯಶ್ರೀ ಬಿ ಕದ್ರಿ, ವಿದ್ಯಾಧರ ರಾವ್, ಹಮೀದ್ ಹಸನ್, , ರಾಮಕೃಷ್ಣ ಸುಳ್ಯ ಮೊದಲಾದವರು ಹಾಗೂ ಕಾಸರಗೋಡು ಜಿಲ್ಲೆಯ ವೆಂಕಟ್ ಭಟ್ ಎಡನೀರು, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ವಿಜಯರಾಜ್ ಪುಣಿಂಚಿತ್ತಾಯ, ವಸಂತ ಕುಮಾರ್ ಕೊಡ್ಲಮೊಗರು, ಬಾಲಕೃಷ್ಣ ಕೆ.ಎಸ್. ಬೇಕೂರು, ಸುಭಾಶ್ ಪೆರ್ಲ, ಪ್ರಭಾವತಿ ಕೆದಿಲಾಯ ಪುಂಡೂರು, ಚಂದ್ರಿಕಾ ಶೆಣೈ, ಸೌಮ್ಯಗುರು ಕಾರ್ಲೆ, ಪ್ರಮೀಳಾ ಚುಳ್ಳಿಕ್ಕಾನ, ರಿತೇಶ್ ಕಿರಣ್, ಶ್ವೇತಾ ಕಜೆ, ಶಶಿಕಲಾ ಕುಂಬಳೆ, ನರಸಿಂಹ ಭಟ್ ಏತಡ್ಕ, ಆನಂದ ರೈ ಅಡ್ಕಸ್ಥಳ, ಜ್ಯೋತ್ಸ್ನಾ ಕಡಂದೇಲು, ಸುಶೀಲಾ ಕೆ ಪದ್ಯಾಣ, ನಿರ್ಮಲಾ ಶೇಷಪ್ಪ ಪೆರ್ಲ, ರವೀಂದ್ರನ್ ಪಾಡಿ ಮೊದಲಾದವರು ಭಾಗವಹಿಸಿದ್ದರು.
ಕಾಸರಗೋಡು ತಾಲೂಕು ಚು.ಸಾ.ಪ. ಅಧ್ಯಕ್ಷ ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿದರು. ಕವಿಗೋಷ್ಠಿಯಲ್ಲಿ ಶಿವರಾಮ ಕಾಸರಗೋಡು, ಜಗದೀಶ್ ಕೂಡ್ಲು, ಶ್ರೀಕಾಂತ್ ಕಾಸರಗೋಡು ಸಹಕರಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button