ಶ್ರೀನಿವಾಸ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ – ಆಸ್ಟ್ರೇಲಿಯಾದ ಪೇಟೆಂಟ್…

ಸುರತ್ಕಲ್: ಶ್ರೀನಿವಾಸ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಒಟ್ಟಾಗಿ ಆಸ್ಟ್ರೇಲಿಯಾದ ಪೇಟೆಂಟನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳಾದ ನಿಖಿಲ್, ಶಶಾಂಕ, ರಾಕೇಶ್, ಸಹಾಯಕ ಪ್ರಾಧ್ಯಾಪಕರಾದ ವಿಶ್ವಾಸ್ , ರಾಘವೇಂದ್ರ , ಸ್ವರ್ಣ ಅವರು ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಯೋಜನೆಯಲ್ಲಿ ನಿರ್ದಿಷ್ಟ ರೋಗಿಯ ವೈದ್ಯಕೀಯ ಇತಿಹಾಸವನ್ನು ತಿಳಿಯಲು ಸ್ಮಾರ್ಟ್ ಕಾರ್ಡನ್ನು ಕೊಡಲಾಗುತ್ತದೆ. ಸೂಕ್ಷ್ಮ ಮಾಹಿತಿಗಳನ್ನು ನಿಯಂತ್ರಿಸಲು ಅಗತ್ಯವಿರುವ ಅಪ್ಲಿಕೇಶನ್ ಗಳಲ್ಲಿ ಸ್ಮಾರ್ಟ್ ಕಾರ್ಡ್ ಹಾಗೂ ಹೆಚ್ಚಿನ ಮಟ್ಟದ ಬದ್ಧತೆಯನ್ನು, ಭದ್ರತೆ ಯನ್ನು ಒದಗಿಸಲು ಈ ಸಾಧನ ಬಳಸಬಹುದು. ಈ ಯೋಜನೆಯಲ್ಲಿ ಕಾಡನ್ನು ನಿಯಂತ್ರಿಸುವ ಸ್ಮಾರ್ಟ್ ಕಾರ್ಡ್ ನ ವ್ಯವಸ್ಥೆಯನ್ನು ಮಾಡಲಾಗಿದೆ.
ರೋಗಿಯ ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ವ್ಯವಸ್ಥೆಗೆ ಒಳಗಾದಾಗ ಅವನ ಇತಿಹಾಸವು ಬಹಳ ಅವಶ್ಯಕವಾಗಿರುತ್ತದೆ. ಉದಾಹರಣೆಗೆ ಪಾರ್ಶ್ವವಾಯುವಿನಿಂದ ಪೀಡಿತನಾದವನು ಹಿಂದಿನ ಚಿಕಿತ್ಸೆಯ ಸಮಯದಲ್ಲಿ ಆಸ್ಪತ್ರೆಯಲ್ಲಿ ನೀಡಿದ ನಿರ್ಣಾಯಕ ವೈದ್ಯಕೀಯ ಇತಿಹಾಸವನ್ನು ಪಡೆಯಬಹುದು. ಆರಂಭದಲ್ಲಿ ರೋಗಿಗೆ ಕಾರ್ಡನ್ನು ಒದಗಿಸುವಾಗ ಅದರಲ್ಲಿ ರೋಗಿಯ ವ್ಯಕ್ತಿ ಚಿತ್ರಣವನ್ನು ಖಚಿತಪಡಿಸಿದ್ದಾರೆ. ರೋಗಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ವೈದ್ಯಕೀಯ ದತ್ತಾಂಶಗಳನ್ನು ಅದಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಇದರಲ್ಲಿ ವೈದ್ಯಕೀಯ ಮಾಹಿತಿಗಳನ್ನು ಉಪಯೋಗಿಸುವುದು ಹಾಗೂ ಮಾಹಿತಿಗಳನ್ನು ಸಂಗ್ರಹಿಸುವ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಬೇಡಿಕೆಗೆ ಅನುಗುಣವಾಗಿ ರೋಗಿಯು ಅಥವಾ ಯಾವುದೇ ಬಳಕೆದಾರರು ಇದನ್ನು ಬಳಸಿಕೊಂಡು ಡಾಟಾವನ್ನು ಪಡೆಯಬಹುದು. ಈ ವ್ಯವಸ್ಥೆಯ ಮೂಲಕ ಯಾವುದೇ ತುರ್ತು ಸಂದರ್ಭದಲ್ಲಿ ನಿರ್ದಿಷ್ಟ ಆಸ್ಪತ್ರೆಯ ಕಾಡು ಹೊಂದಿರುವವರಿಗೆ ವಿವಿಧ ಸೂಚನೆಗಳನ್ನು ಕಳುಹಿಸಲಾಗುತ್ತದೆ.
ಈ ಸಂಶೋಧನೆಯ ಆಧಾರ್ ಮಾದರಿಯ ವಿಶಿಷ್ಟ ಆರೋಗ್ಯ ಗುರುತಿನ ಸಂಖ್ಯೆ “ಪ್ರಧಾನಮಂತ್ರಿ ಡಿಜಿಟಲ್ ಆರೋಗ್ಯ ಯೋಜನೆ” ಅಡಿಯಲ್ಲಿ ರೂಪುಗೊಂಡಿದೆ. ಇದು ಭಾರತೀಯ ಪೇಟೆಂಟ್ ಪ್ರಕಟಣೆಯ ಅಡಿಯಲ್ಲಿ ಇದ್ದು ಪರೀಕ್ಷಾ ಹಂತದಲ್ಲಿ ಇದೆ.
ಈ ಪೇಟೆಂಟನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಅಧ್ಯಾಪಕರಿಗೂ ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಕುಲಪತಿಗಳಾದ ಡಾ. ಸಿ ಎ ರಾಘವೇಂದ್ರರಾವ್, ಸಹ ಕುಲಪತಿಗಳಾದ ಡಾ. ಶ್ರೀನಿವಾಸ್ ರಾವ್ ಹಾಗೂ ಶ್ರೀನಿವಾಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ.ಥಾಮಸ್ ಪಿಂಟೋ ಮತ್ತು ಯಾಂತ್ರಿಕ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀ ಪ್ರಕಾಶ್ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಸಂಶೋಧನೆಯು ಉತ್ತಮ ರೂಪದಲ್ಲಿ ಪ್ರಕಟವಾಗಲು ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಇವರು ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿದ್ದಾರೆ.

Sponsors

Related Articles

Back to top button