ಕೇರಳ-ಕರ್ನಾಟಕ ವಾಹನ ಸಂಚಾರ ಸಂಪೂರ್ಣ ಬಂದ್…

ಮಂಗಳೂರು: ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ನಡುವೆ ಸಂಚಾರವನ್ನು ಸಂಪೂರ್ಣ ನಿಷೇಧ ಮಾಡಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಮಾಡಿದ್ದಾರೆ.
ಕಾಸರಗೋಡು ಜಿಲ್ಲೆಯಿಂದ ಮಂಗಳೂರಿಗೆ ಅಧಿಕ ಸಂಖ್ಯೆಯಲ್ಲಿ ಜನರು ವಿವಿಧ ಕೆಲಸ ಕಾರ್ಯಗಳಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಎಲ್ಲಾ ರೀತಿಯ ವಾಹನ ಸಂಚಾರವನ್ನು ಉಭಯ ಜಿಲ್ಲೆಗಳ ನಡುವೆ ನಿಷೇಧಿಸಲಾಗಿದೆ. ಮಾರ್ಚ್ 21ರ ಮಧ್ಯಾಹ್ನ 2 ಗಂಟೆಯಿಂದ ಮಾರ್ಚ್ 31ರ ತನಕ ವಾಹನ ಸಂಚಾರ ನಿಷೇಧವಿದೆ. ತುರ್ತು ಪ್ರಕರಣಗಳನ್ನು ತಲಪಾಡಿ ಟೋಲ್ ಗೇಟ್ ಮೂಲಕ ಮಾತ್ರವೇ ತೆರಳಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಗಡಿ ಪ್ರದೇಶಗಳಾದ ಮಂಜೇಶ್ವರ ತೂಮಿನಾಡು ರಸ್ತೆ, ಕೆದಂಬಾಡಿ ಪದವು ರಸ್ತೆ , ಸುಂಕದಕಟ್ಟೆ ಮುಡಿಪು ರಸ್ತೆ, ಕುರುಡ ಪದವು ಲಾಲ್ಬಾಗ್ ರಸ್ತೆ , ಮುಳಿಗದ್ದೆ ಬಾಯಾರು ರಸ್ತೆ, ಬೆರಿಪದವು ಪೆರುವಾಯಿ ರಸ್ತೆ , ಸ್ವರ್ಗ ಆರ್ಲಪದವು ರಸ್ತೆ , ಆರ್ಲಪದವು ಸ್ವರ್ಗ ರಸ್ತೆ , ಆದೂರು ಕೊಟ್ಟಿಯಾಡಿ ರಸ್ತೆ , ಪಳ್ಳತ್ತೂರು ಈಶ್ವರ ಮಂಗಳ ರಸ್ತೆ , ಗಾಳಿಮುಗ ಈಶ್ವರ ಮಂಗಳ ದೇಲಂಪಾಡಿ ರಸ್ತೆ , ನಾಟೆಕಲ್ ಸುಳ್ಯಪದವು ರಸ್ತೆ ಸಂಚಾರವನ್ನು ಇಂದಿನಿಂದ ಬಂದ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

.

Sponsors

Related Articles

Leave a Reply

Your email address will not be published. Required fields are marked *

Back to top button