ಗೂನಡ್ಕ ತೆಕ್ಕಿಲ್ ಪ್ರೌಡ ಶಾಲೆಗೆ ಶೇ.100 ಪಲಿತಾಂಶ…
ಸುಳ್ಯ: ಸಂಪಾಜೆ ಗ್ರಾಮದ ಗೂನಡ್ಕ ತೆಕ್ಕಿಲ್ ಆಂಗ್ಲ ಮಾಧ್ಯಮ ಪ್ರೌಡ ಶಾಲೆಗೆ ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಪಲಿತಾಂಶ ಬಂದಿರುತ್ತದೆ.
ಶಾಲೆಯಿಂದ ಪರೀಕ್ಷೆಗೆ ಹಾಜರಾದ ಒಟ್ಟು 10 ಮಂದಿ ವಿದ್ಯಾರ್ಥಿಗಳಲ್ಲಿ ಎಲ್ಲರು ತೇರ್ಗಡೆ ಹೊಂದಿರುತ್ತಾರೆ. ಸಂಪಾಜೆ ಗ್ರಾಮದ ಗೂನಡ್ಕಅಬೀರಾ ಆನಂದ ಮತ್ತು ನಳಿನಾಕ್ಷಿ ದಂಪತಿಗಳ ಪುತ್ರ ಲವೀತ್ ಅಬೀರ 606 ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಗೂನಡ್ಕದ ಧರ್ಮಲಿಂಗಂ ಮತ್ತು ಪ್ರತಿಮಾ ದಂಪತಿಯವರ ಪುತ್ರಿ ರೇಶ್ಮಾ580, ಅರಂತೋಡು ಗ್ರಾಮದ ಅಡ್ಕಬಳೆ ಶಶಿಧರ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರಿ ಜಶಿಕಾ 578, ಹಾಗು ಸಂಪಾಜೆ ಗ್ರಾಮದ ಗೂನಡ್ಕ ದರ್ಖಾಸ್ ಉಮ್ಮರ್ ಮತ್ತು ಸಫಾನ ದಂಪತಿಯ ಪುತ್ರ ಉಫೈಫ್ 548 ಅಂಕಗಳೊಂದಿಗೆ ತೇರ್ಗಡೆಗೊಂಡಿರುತ್ತಾರೆ.
ಎಸ್ಸೆಸ್ಸೆಲ್ಸಿಯಲ್ಲಿ ಸತತವಾಗಿ ಈ ಶಾಲೆಗೆ 5 ಬಾರಿ ಶೇಕಡ 100 ಫಲಿತಾಂಶ ಬಂದಿರುತ್ತದೆ. ಉತ್ತಮ ಪಲಿತಾಂಶಕ್ಕಾಗಿ ಶ್ರಮಿಸಿದ ಶಾಲಾ ಅಧ್ಯಾಪಕರನ್ನು, ಪೋಷಕರನ್ನು ಮತ್ತು ವಿಧ್ಯಾರ್ಥಿಗಳನ್ನು ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಅಭಿನಂದಿಸಿರುತ್ತಾರೆ.