ಗೂನಡ್ಕ- KSRTC ಚಾಲಕರ ಬೇಜವಾಬ್ದಾರಿಯುತ ನಡೆ, ಎಸ್‌ಡಿಪಿಐ ಸಂಪಾಜೆ ವತಿಯಿಂದ ಡಿಪೋ ವ್ಯವಸ್ಥಾಪರಿಗೆ ದೂರು…
ಸಮಸ್ಯೆ ಸರಿಪಡಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ,ವ್ಯವಸ್ಥಾಪಕರಿಂದ ಸಕಾರಾತ್ಮಕ ಭರವಸೆ…
ಸುಳ್ಯ: ಸುಳ್ಯ – ಕೊಯನಾಡು ಮಾರ್ಗದಲ್ಲಿ ಹೋಗುವ ಸರ್ಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ ಬಸ್ ಕೆಲವು ಕಡೆಗಳಲ್ಲಿ ಪ್ರಯಾಣಿಕರನ್ನು ಹತ್ತಿಸದೆ ಹಾಗೂ ಇಳಿಸುವಾಗ ಬಸ್ ತಂಗುದಾಣಕ್ಕಿಂತ ದೂರ ಇಳಿಸಿ ಪ್ರಯಾಣಿಕರಿಗೆ ಮಾನಸಿಕ ಕಿರುಕುಳ ನೀಡಿ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ. ಚಾಲಕರ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್‌ಡಿಪಿಐ ಸಂಪಾಜೆ ಗ್ರಾಮ ಸಮಿತಿ ವತಿಯಿಂದ ಕೆ ಎಸ್ ಆರ್ ಟಿ ಸಿ ಸುಳ್ಯ ಡಿಪೋ ವ್ಯವಸ್ಥಾಪಕರಿಗೆ ಲಿಖಿತ ದೂರು ನೀಡಲಾಗಿದೆ.
ಸೂಕ್ತ ಕ್ರಮ ಕೈಗೊಳ್ಳದೆ ಮುಂದೆಯೂ ಈ ರೀತಿ ಬೇಜವಾಬ್ದಾರಿ ನಡೆ ಕಂಡು ಬಂದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಸ್‌ಡಿಪಿಐ ವತಿಯಿಂದ ಎಚ್ಚರಿಕೆ ನೀಡಲಾಗಿದೆ. ಡಿಪೋ ವ್ಯವಸ್ಥಾಪಕರು ಈ ಬಗ್ಗೆ ಪರಿಶೀಲಿಸಿ ಸಮಸ್ಯೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಎಸ್‌ಡಿಪಿಐ ಸಂಪಾಜೆ ಗ್ರಾಮ ಸಮಿತಿ ಕಾರ್ಯದರ್ಶಿ ಸಾಜಿದ್ ಐ.ಜಿ ತಿಳಿಸಿದ್ದಾರೆ.
ನಿಯೋಗದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರ ಸದಸ್ಯರಾದ ಅಶ್ರಫ್ ಟರ್ಲಿ, ಸುಳ್ಯ ಗ್ರಾಮಾಂತರ ಬ್ಲಾಕ್ ಉಪಾಧ್ಯಕ್ಷರಾದ ಸಲೀಂ ದರ್ಕಾಸ್, ಹಾಗೂ ಸ್ಥಳೀಯರಾದ ಉಬೈಸ್ ಟಿ ಕೆ ಗೂನಡ್ಕ,ಸಿರಾಜುದ್ದಿನ್ ಇಚ್ಚು ಗೂನಡ್ಕ ನಿಯೋಗದಲ್ಲಿದ್ದರು.