ಗೋಳ್ತಮಜಲು ತಾಲೂಕು ಮಟ್ಟದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಉದ್ಘಾಟನೆ….

ಬಂಟ್ವಾಳ : ಭಕ್ತಿಯ ಜೊತೆ ಶಕ್ತಿಯನ್ನು ಹೊಂದಿರುವ ಗೋಳ್ತಮಜಲು ಗಣೇಶ್ ಮಂದಿರ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಮಾದರಿಯಾಗಲಿ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಜ.5ರಂದು ಗೋಳ್ತಮಜಲು ಗಣೇಶ ಮಂದಿರದ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಗೋಳ್ತಮಜಲು ಗಣೇಶ ಮಂದಿರ, ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ , ಶ್ರೀ ಗಣೇಶ್ ಗೆಳೆಯರ ಬಳಗ ಗಣೇಶ ನಗರ ಗೊಳ್ತಮಜಲು ಆಶ್ರಯದಲ್ಲಿ ಕಾರ್ಯಕ್ರಮ ನಡೆದಿತ್ತು. ಸತ್ಯನಾರಾಯಣ ಪೂಜೆ ಹಾಗೂ ಸಂಘನಾತ್ಮಕ ಶಕ್ತಿಯನ್ನು ಪಡೆದಿರುವ ಜಿಲ್ಲೆಯ ಮಣ್ಣಿನ ಕ್ರೀಡೆಯಾದ ಕಬಡ್ಡಿ ಆಟದ ಮೂಲಕ ಯುವಕರನ್ನು ಒಗ್ಗೂಡಿಸಿ ಸಮಾಜದ ರಕ್ಷಣೆಗೆ ಪಣತೊಟ್ಟಿರುವ ಈ ಸಂಘಟನೆ ಇನ್ನಷ್ಟು ಶಕ್ತಿಯುತವಾಗಿ ಬೆಳೆಯಲಿ ಎಂದು ಹಾರೈಸಿದರು.
ಪುನರ್ಜನ್ಮದ ನಂಬಿಕೆ ಇರುವ ಹಿಂದೂ ಧರ್ಮದಲ್ಲಿ ಸತ್ತರೆ ಬದುಕುವ ಆಟ ಇದ್ದರೆ ಅದು ಕಬಡ್ಡಿ ಮಾತ್ರ. ಹೀಗೆ ಭಾರತೀಯ ಸಂಸ್ಕೃತಿಯನ್ನು ಮೇಳೈಸಿಕೊಂಡ ಶಕ್ತಿ ಮತ್ತು ಯುಕ್ತಿಯ ಆಟ ಕಬಡ್ಡಿ. ಆಟದಲ್ಲಿ ದ್ವೇಷ ನಿರ್ಮಾಣ ಮಾಡದೆ ಸ್ಪರ್ಧೆಯ ಕಡೆ ಶಕ್ತಿಯನ್ನು ಸಂಪೂರ್ಣ ತೊಡಗಿಸಿಕೊಂಡು ಆಟ ಆಡಬೇಕಾಗಿದೆ, ಎಲ್ಲರಿಗೂ ಕಬಡ್ಡಿ ಆಟ ಪ್ರೇರಣೆಯಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಮಾತನಾಡಿ, ಸಂಘಟನೆಯ ಮೂಲಕ ಶಕ್ತಿಯುತರಾಗಿ,ಧಾರ್ಮಿಕ ಸಾಮಾಜಿಕ , ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಬದಲಾವಣೆಗೆ ಪ್ರೇರಣೆ ನೀಡಿ, ಕ್ರೀಡೆಯ ಮೂಲಕ ಯುವಕರನ್ನು ಒಗ್ಗೂಡಿಸಿ ಎಂದು ಕರೆ ನೀಡಿದರು.
ತಾ.ಪಂ.ಸದಸ್ಯ ಮಹಾಬಲ ಆಳ್ವ, ಗಣೇಶ್ ಮಂದಿರದ ಗೌರವಾಧ್ಯಕ್ಷ ತೋಟ ಶ್ಯಾಂ ಭಟ್, ಸರ್ವೇಶ್ವರಿ ಗೋಪಾಲಕೃಷ್ಣ ಭಟ್, ವಕೀಲ ಶಂಭು ಶರ್ಮ, ರಾಜ್ಯ ಅಮೆಚ್ಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ, ರೈತಸೇವಾ ಸಹಕಾರಿ ಸಂಘದ ಅಧ್ಯಕ್ಷ , ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಶರಣ್ ಪಂಪ್‍ವೆಲ್ , ಪ್ರದೀಪ್ ಪಂಪ್‍ವೆಲ್, ವಕೀಲ ಪ್ರಸಾದ್ ಕುಮಾರ್ ರೈ, ಸಂಚಾಲಕ ಕೃಷ್ಣ ಪ್ಪ ಪೂಜಾರಿ ದೋಟ, ಅಶೋಕ ಕುಮಾರ್ ಕೊಳಕೀರು, ಸುಂದರ ಆಳ್ವ, ಸುಂದರ ಶೆಟ್ಟಿ ಗೋಳ್ತಮಜಲು, ನಾರಾಯಣ ಪೂಜಾರಿ ಹೊಸಮನೆ, ಕೃಷ್ಣ ಪ್ಪ ಆಚಾರ್ಯ ಕಲ್ಲಡ್ಕ, ರತ್ನಾಕರ ಶೆಟ್ಟಿ ಕಲ್ಲಡ್ಕ, ಗುರು ಬಂಟ್ವಾಳ, ಚರಣ್ ವಿಟ್ಲ, ರಾಧಾಕೃಷ್ಣ ಅಡ್ಯಾಂತಯ, ಶಂಕರ್ ಮಾಸ್ಟರ್, ಕೃಷ್ಣ ವಕೀಲ, ಲೋಹಿತ್ ಪನೋಲಿಬೈಲು, ಪ್ರವೀಣ್ ಉಡುಪಿ, ಸುಧಾಕರ ರೈ ಬೋಳಂತೂರು, ಅಕ್ಷಕ ರಜಪೂತ್, ಪದ್ಮನಾಭ ಕಟ್ಟೆ, ಮುರಳಿಕೃಷ್ಣ ಹಸಂತಡ್ಕ, ಶ್ರೀಧರ ತೆಂಕಿಲ, ದಿನೇಶ್ ಅಮ್ಟೂರು, ಶಿವಾನಂದ ಮೆಂಡನ್,ಮಿಥುನ್ ಪೂಜಾರಿ, ತಿಲಕ್‍ರಾಜ್, ಶಶಿಕಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಸೈನಿಕರಾದ ಶಿವಪ್ರಕಾಶ್, ಆನಂದ ಬಿ., ನ್ಯಾಯವಾದಿ ಶಂಭುಶರ್ಮ, ಪ್ರಸಾದ್ ಕುಮಾರ್ ರೈ, ನಿವೃತ್ತ ದೈಹಿಕ ಶಿಕ್ಷಕ ಶಂಕರ್ ಬಿ., ಪ್ರತಿಭಾನ್ವಿತರಾದ ಏಳು ವಿದ್ಯಾರ್ಥಿಗಳಾದ ರಚಿತಾ ಎಂ.ಎನ್., ವಿದ್ಯಾ ಎ., ಜನಿತ್, ನಿಶ್ಮಿತಾ, ದೀಕ್ಷಾ, ಪರೀಕ್ಷಿತ್, ನಿರೀಕ್ಷಾರನ್ನು ಸಮ್ಮಾನಿಸಲಾಯಿತು.
ಗಣೇಶ ಮಂದಿರ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಟೈಲರ್ ಸ್ವಾಗತಿಸಿ, ಖಜಾಂಚಿ ಮೋನಪ್ಪ ದೇವಶ್ಯ ವಂದಿಸಿದರು. ಸಂಪತ್ ಕುಮಾರ್, ಗೋಪಾಲ ಬಲ್ಯಾಯ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button