ಎಪ್ರಿಲ್ 22: ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನಿಂದ ಸಾಂಸ್ಕೃತಿಕ ವೈಭವ – 2023…

ಮನೆ ಹಸ್ತಾಂತರ - ಗ್ರಂಥ ಲೋಕಾರ್ಪಣೆ…

ಮಂಗಳೂರು: ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿನ ಒಂಭತ್ತನೇ ವರ್ಷಾಚರಣೆ ಪ್ರಯುಕ್ತ ಎಪ್ರಿಲ್ 22ರಂದು ಶನಿವಾರ ‘ಬಂಟ ಸಾಂಸ್ಕೃತಿಕ ವೈಭವ – 2023’ ಉರ್ವಾ ಸ್ಟೋರ್ ಅಂಬೇಡ್ಕರ್ ಭವನದಲ್ಲಿ ಜರಗಲಿದೆ’ಎಂದು ಟ್ರಸ್ಟ್ ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ ಹೇಳಿದ್ದಾರೆ. ನಗರದ ಬಲ್ಮಠ ಕುಡ್ಲ ಪೆವಿಲಿನ್ ನ ಸದಾಶಯ ಕಚೇರಿಯಲ್ಲಿ ಜರಗಿದ ಪೂರ್ವ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಪೂರ್ವಾಹ್ನ ಒಂಬತ್ತು ಗಂಟೆಗೆ ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ‘ಬಿಸುಕಣಿ’ ಉದ್ಘಾಟಿಸುವರು. ಬಳಿಕ ವಿವಿಧ ಬಂಟರ ಸಂಘಗಳ ಕಲಾತಂಡಗಳಿಂದ ಸಾಂಸ್ಕೃತಿಕ ವೈಭವ ಜರಗುವುದು. ಸಾಯಂಕಾಲ ನಡೆಯುವ ಸಮಾರೋಪ ಸಮಾರಂಭವನ್ನು ನಿಟ್ಟೆ ವಿಶ್ವವಿದ್ಯಾನಿಲಯ ಕುಲಾಧಿಪತಿ ಡಾ.ಎನ್.ವಿನಯ ಹೆಗ್ಡೆ ಉದ್ಘಾಟಿಸಲಿದ್ದು , ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸುವರು’ ಎಂದರು.

‘ಸದಾಶ್ರಯ’ ಗ್ರೃಹ ಹಸ್ತಾಂತರ:
‘ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿನ ಸೇವಾ ಕಾರ್ಯಗಳ ಅಂಗವಾಗಿ ದಾನಿಗಳ ನೆರವಿನಿಂದ ಫರಂಗಿಪೇಟೆ ಬಳಿಯ ಕೊಟ್ಟಿಂಜದಲ್ಲಿ ನೂತನವಾಗಿ ನಿರ್ಮಿಸಿದ ‘ಸದಾಶ್ರಯ’ ಮನೆಯನ್ನು ಫಲಾನುಭವಿ ಗಳಿಗೆ ಅರ್ಪಿಸಲಾಗುವುದು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಗ್ರೃಹ ಹಸ್ತಾಂತರಿಸುವರು’ ಎಂದು ದೇವಿ ಚರಣ್ ಶೆಟ್ಟಿ ತಿಳಿಸಿದರು.

‘ಏಕಾಂತದಿಂದ ಲೋಕಾಂತರಕೆ’ ಕೃತಿ ಬಿಡುಗಡೆ:
‘ಸದಾಶಯ ಪತ್ರಿಕೆಯ ಪ್ರಧಾನ ಸಂಪಾದಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ 100 ಲೇಖನಗಳ ಸಂಚಯ ‘ಏಕಾಂತದಿಂದ ಲೋಕಾಂತರ’ ಸಂಪರ್ಕ – ಸದಾಶಯಗಳ ಭಾವಯಾನ ಕೃತಿಯನ್ನು ಸಭೆಯಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ ನುಡಿದರು.
ಮುಂಬೈ ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ಗ್ರಂಥ ಲೋಕಾರ್ಪಣೆ ಮಾಡುವರು. ಅಬುಧಾಬಿ ಉದ್ಯಮಿ ಡಾ. ಬಿ.ಆರ್.ಶೆಟ್ಟಿ, ಎ.ಜೆ. ಸಮೂಹ ಸಂಸ್ಥೆಗಳ ಡಾ.ಎ.ಜೆ.ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಡಾ.ಎಂ.ಮೋಹನ ಆಳ್ವ, ಎಮ್. ಆರ್. ಜಿ. ಗ್ರೂಪಿನ ಪ್ರಕಾಶ್ ಶೆಟ್ಟಿ, ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸವಣೂರು ಸೀತಾರಾಮ ಶೆಟ್ಟಿ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಮತ್ತಿತರ ಗಣ್ಯರು ಸಮಾರಂಭದ ಅತಿಥಿಗಳಾಗಿರುವರು ಎಂದವರು ತಿಳಿಸಿದರು.
ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಪದಾಧಿಕಾರಿಗಳಾದ ಭಾಸ್ಕರ ರೈ ಕುಕ್ಕುವಳ್ಳಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರದೀಪ್ ಆಳ್ವ ಕದ್ರಿ, ಸೀತಾರಾಮ ಶೆಟ್ಟಿ ಜೆಪ್ಪಿನಮೊಗರು, ಸತ್ಯಪ್ರಸಾದ್ ಶೆಟ್ಟಿ, ಗೋಪಿನಾಥ್ ಶೆಟ್ಟಿ, ರಾಜಕುಮಾರ್ ಶೆಟ್ಟಿ, ದೇವಿಪ್ರಸಾದ್ ಅಜಿಲ, ರತನ್ ಶೆಟ್ಟಿ, ರಾಮಚಂದ್ರ ಆಳ್ವ, ನಾಗೇಶ್ ಶೆಟ್ಟಿ, ಗೀತಾ ಶೆಟ್ಟಿ, ವತ್ಸಲಾ ಮಲ್ಲಿ, ಆರತಿ ಆಳ್ವ, ಉಷಾ ಶೆಟ್ಟಿ ಮೊದಲಾದವರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.
ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ.ಶೆಟ್ಟಿ ಸ್ವಾಗತಿಸಿದರು. ಜಿ.ಕೆ.ಹರಿಪ್ರಸಾದ್ ರೈ ಕಾರಮೊಗರು ವಂದಿಸಿದರು.

whatsapp image 2023 04 17 at 4.17.10 pm
whatsapp image 2023 04 17 at 4.17.48 pm
whatsapp image 2023 04 17 at 4.42.54 pm
Sponsors

Related Articles

Back to top button