ದ.ಕ. ಜಿಲ್ಲೆಯ 80 ಕಡೆ ಕೊರೊನಾ ತಪಾಸಣೆ ಕೇಂದ್ರ….

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 80 ಕಡೆಗಳಲ್ಲಿ ಕೊರೊನಾ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ.

ವೆನ್ಲಾಕ್ ಮತ್ತು ಲೇಡಿಗೋಶನ್‌ ಜಿಲ್ಲಾಸ್ಪತ್ರೆಗಳಲ್ಲಿ ಮಾತ್ರವಲ್ಲದೆ, ಜಿಲ್ಲೆಯ 6 ಸಮುದಾಯ ಆರೋಗ್ಯ ಕೇಂದ್ರ, 66 ಪ್ರಾಥಮಿಕ ಆರೋಗ್ಯ ಕೇಂದ್ರ, 4 ತಾಲೂಕು ಆಸ್ಪತ್ರೆಗಳಲ್ಲಿ ಕೊರೊನಾ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಜನರು ಅಗತ್ಯ ಬಿದ್ದಲ್ಲಿ ಸನಿಹದ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬಹುದು.

ಸಮುದಾಯ ಆರೋಗ್ಯ ಕೇಂದ್ರಗಳು: ಮೂಲ್ಕಿ, ಮೂಡುಬಿದಿರೆ, ಬಂಟ್ವಾಳ ತಾಲೂಕಿನ ವಾಮದಪದವು, ವಿಟ್ಲ; ಪುತ್ತೂರು ತಾಲೂಕಿನ ಕಡಬ, ಉಪ್ಪಿನಂಗಡಿ, ಜಿ.ಎಚ್‌. ಪುತ್ತೂರು ಕೇಂದ್ರಗಳಲ್ಲಿ ಕೊರೊನಾ ತಪಾಸಣೆ ಮಾಡಲಾಗುತ್ತದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳು: ಮಂಗಳೂರು ತಾಲೂಕಿನ ಕೋಟೆಕಾರು, ಉಳ್ಳಾಲ, ನಾಟೆಕಲ್‌, ಬೋಳಿಯಾರು, ಅಂಬ್ಲಿಮೊಗರು, ಅಡ್ಯಾರ್‌, ಗಂಜಿಮಠ, ಕುಡುಪು, ಕೊಂಪದವು, ಕುಪ್ಪೆಪದವು, ಬಜಪೆ, ಕಟೀಲು, ಆತೂರ್‌ ಕೆಮ್ರಾಲ್‌, ಕಾಟಿಪಳ್ಳ, ಬೋಂದೆಲ್‌, ಸುರತ್ಕಲ್‌, ಶಿರ್ತಾಡಿ, ಪಾಲಡ್ಕ, ಕಲ್ಲಮುಂಡ್ಕೂರು, ಬೆಳುವಾಯಿ, ನೆಲ್ಲಿಕಾರು, ಬಂಟ್ವಾಳ ತಾಲೂಕಿನ ಮಾಣಿ, ಪುಣಚ, ಪಂಜಿಕಲ್ಲು, ಮಂಚಿ, ಸಜಿಪನಡು, ಪುದು, ಕಲ್ಲಡ್ಕ ಬಾಳ್ತಿಲ, ಕುರ್ನಾಡು, ಪುಂಜಾಲಕಟ್ಟೆ, ದೈವಸ್ಥಳ, ಅಡ್ಯನಡ್ಕ, ಬೆಂಜನಪದವು, ರಾಯಿ, ಕನ್ಯಾನ, ನಾವೂರು, ಪೆರುವಾಯಿ, ಅಳಿಕೆ; ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಕಣಿಯೂರು, ವೇಣೂರು, ಇಂದಬೆಟ್ಟು, ಅಳದಂಗಡಿ, ಉಜಿರೆ, ನೆರಿಯ, ಹತ್ಯಡ್ಕ, ನಾರಾವಿ, ಪಡಂಗಡಿ, ಕೊಕ್ಕಡ, ಧರ್ಮಸ್ಥಳ; ಪುತ್ತೂರು ತಾಲೂಕಿನ ಕಾಣಿ ಯೂರು, ಸರ್ವೆ, ಪಾಣಾಜೆ, ನೆಲ್ಯಾಡಿ, ಕೊಯಿಲ, ಕೊಳ್ತಿಗೆ, ಈಶ್ವರಮಂಗಲ, ಶಿರಾಡಿ, ತಿಂಗಳಾಡಿ, ಪಾಲ್ತಾಡಿ, ಅರಂತೋಡು, ಬೆಳ್ಳಾರೆ, ಪಂಜ, ಸುಬ್ರಹ್ಮಣ್ಯ, ಗುತ್ತಿಗಾರು, ಕೊಲ್ಲಮೊಗ್ರು ಕೇಂದ್ರಗಳಲ್ಲಿ ತಪಾಸಣೆ ಕೇಂದ್ರ ತೆರೆಯಲಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button