ನಂದಾವರದಲ್ಲಿ ನಾಟ್ಯಾಯನ…

ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾoಬಾ ಕ್ಷೇತ್ರದ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವದ ವೇದಿಕೆಯಲ್ಲಿ ವಿದುಷಿ ಅಯನಾ ವಿ ರಮಣ್ ಮೂಡುಬಿದಿರೆ ಮತ್ತು ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಬಳಗದವರಿಂದ ” ನಾಟ್ಯಾಯನ- ಯಗಳ ನೃತ್ಯ ” ಪ್ರದರ್ಶನ ಫೆ. 6 ರಂದು ನಡೆಯಿತು.
ಭಗವದ್ಗೀತೆ, ಸಂಗೀತ, ನೃತ್ಯ, ಸಂಸ್ಕೃತಿ ಮತ್ತು ಶಿಕ್ಷಣಗಳ ವಿಶಿಷ್ಟ ಸಮ್ಮಿಲನದ ಈ ಪ್ರಯೋಗ ಯಶಸ್ವಿಯಾಗಿ ಮೂಡಿಬಂದು ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ ಕಲಾವಿದರನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ವಿಶೇಷ ಸಹಕಾರವಿತ್ತ ಉದ್ಯಮಿ ಎಂ ಎನ್ ಕುಮಾರ್ ಮೆಲ್ಕಾರ್ ಇವರನ್ನು ಅಭಿನಂದಿಸಲಾಯಿತು.
ಕ್ಷೇತ್ರಾಡಳಿತ ಮಂಡಳಿಯ ಆಶ್ರಯದಲ್ಲಿ ಸ್ವರ್ಣೋದ್ಯಮಿಗಳಾದ ವಿಶ್ವನಾಥ್ ಬಂಟ್ವಾಳ್, ನಾಗೇಂದ್ರ ಬಾಳಿಗಾ, ಉದ್ಯಮಿ ಎಂ ಎನ್ ಕುಮಾರ್ ಮೆಲ್ಕಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಸಂತ ಪೆರಾಜೆ ಮತ್ತಿತರರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು.
ನಾಟ್ಯಾಯನದ ನಿರ್ದೇಶಕ ಕೆ. ವಿ . ರಮಣ್ ಮಂಗಳೂರು, ಸಾಂಸ್ಕೃತಿಕ ಸಮಿತಿಯ ಅರುಣ್ ಕುಮಾರ್ , ಶ್ರೀಮತಿ ವಿದ್ಯಾ ಮತ್ತಿತರರು ವೇದಿಕೆಯಲ್ಲಿದ್ದರು.

whatsapp image 2023 02 07 at 9.59.49 am
whatsapp image 2023 02 07 at 9.59.10 am
whatsapp image 2023 02 07 at 9.59.10 am (1)
whatsapp image 2023 02 07 at 9.58.30 am
Sponsors

Related Articles

Back to top button