ನಾಳೆಯಿಂದ ಮದ್ಯ ದುಬಾರಿ???…
ಬೆಂಗಳೂರು: ಲಾಕ್ ಡೌನ್ ಸಡಿಲಿಕೆಯ ವೇಳೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ಸರ್ಕಾರ ನಾಳೆಯಿಂದ ಮದ್ಯ ದರ ಹೆಚ್ಚಳಕ್ಕೆ ಆದೇಶಿಸಿದೆ. ಶೇ.6 ರಷ್ಟು ದರ ಏರಿಕೆಗೆ ರಾಜ್ಯ ಅಬಕಾರಿ ಇಲಾಖೆ ತೀರ್ಮಾನಿಸಿದೆ.
ಏಪ್ರಿಲ್ 1 ರಿಂದ ಪೂರ್ವಾನ್ವಯ ಆಗುವಂತೆ ಜಾರಿ ಆದೇಶ ಹಿಂದೆಯೇ ಆಗಿದೆ. ಲಾಕ್ ಡೌನ್ ಕಾರಣಕ್ಕೆ ಅನುಷ್ಠಾನ ಆಗಿರಲಿಲ್ಲ. ನಾಳೆಯಿಂದ ಸರಬರಾಜು ಆಗುವ ಹೊಸ ಮದ್ಯಕ್ಕೆ ಹೊಸ ದರ ಅನ್ವಯ ಆಗಲಿದೆ. ಇಂದು ಎಲ್ಲಾ ಮದ್ಯದಂಗಡಿಗಳಲ್ಲಿ ಹಳೆಯ ದರದಲ್ಲಿಯೇ ಮದ್ಯ ಮಾರಾಟವಾಗುತ್ತಿದೆ.
ಕಳೆದ ಮಾರ್ಚ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ್ದ ಆಯವ್ಯಯದಲ್ಲಿ ವಿವಿಧ ಮದ್ಯಗಳ ಮೇಲಿನ ತೆರಿಗೆಯನ್ನು ಶೇ.6ರಷ್ಟು ಹೆಚ್ಚಳ ಮಾಡಿದ್ದರು.