ನಾಳೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಕೊಂಚ ಸಡಿಲ….
ಬೆಂಗಳೂರು:ರಾಜ್ಯ ಸರಕಾರವು ಲಾಕ್ ಡೌನ್ ನಿಯಮಗಳಲ್ಲಿ ಒಂದಷ್ಟು ಸಡಿಲಿಕೆಗಳನ್ನು ಮಾಡಿ ಇಂದು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆದರೆ ಈ ಮಾರ್ಗಸೂಚಿ ಸೋಂಕು ಪ್ರಕರಣಗಳು ಅಧಿಕವಾಗಿರುವ ಕಂಟೈನ್ ಮೆಂಟ್ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ.ಇಂದು ಮಧ್ಯರಾತ್ರಿಯಿಂದಲೇ ಈ ಪರಿಷ್ಕೃತ ಮಾರ್ಗಸೂಚಿ ಜಾರಿಗೆ ಬರಲಿದೆ.
ಏನಿರುತ್ತೆ..?
1. ಲಾರಿ ರಿಪೇರಿ ಅಂಗಡಿ, ಡಾಬಾ, ಕೊರಿಯರ್ ಸೇವೆ, ಎಲೆಕ್ಟ್ರಿಷಿಯನ್ ಅಂಗಡಿ.
2. ಪ್ಲಂಬರ್, ಕಾರ್ಪೆಂಟರ್, ಮೋಟರ್ ರಿಪೇರಿ, ಆಹಾರ ಸಂಸ್ಕರಣಾ ಘಟಕಗಳ ಕಾರ್ಯನಿರ್ವಹಣೆಗೆ ಅವಕಾಶ
3. ಪ್ಯಾಕೇಜಿಂಗ್ ಘಟಕಗಳು, ಗ್ರಾಮೀಣ ಭಾಗದಲ್ಲಿ ರಸ್ತೆ ಮತ್ತು ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಅನುಮತಿ.
4. ಆರೋಗ್ಯ ಕ್ಷೇತ್ರದಲ್ಲಿನ ಎಲ್ಲಾ ಚಟುವಟಿಕೆಗಳೂ ಈ ಹಿಂದಿನಂತೆಯೇ ಕಾರ್ಯನಿರ್ವಹಿಸಲಿವೆ.
5. ಆಸ್ಪತ್ರೆ, ನರ್ಸಿಂಗ್ ಹೋಂಗಳು, ಕ್ಲಿನಿಕ್ ಗಳು ಹಾಗೂ ಟೆಲಿಮೆಡಿಸಿನ್ ಎಂದಿನಂತೇ ಕಾರ್ಯನಿರ್ವಹಿಸಲಿವೆ.
6. ಔಷಧಿ ಅಂಗಡಿಗಳು, ಜನೌಷಧಿ ಕೇಂದ್ರಗಳ ಮತ್ತು ಮೆಡಿಕಲ್ ಲ್ಯಾಬೊರೇಟರಿಗಳ ಕಾರ್ಯನಿರ್ವಹಣೆಗೆ ಅಡ್ಡಿ ಇರುವುದಿಲ್ಲ.
7. ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಪ್ರಾರಂಭಿಸಲು ಮಾರ್ಗಸೂಚಿ ಜಾರಿ.
8. ಮೀನುಗಾರಿಕೆ ಮತ್ತು ಪ್ಲಾಂಟೇಶನ್ ಗಳಿಗೆ ಸಂಬಂಧಿಸಿದ ಕೆಲಸಕಾರ್ಯಗಳನ್ನು ಪ್ರಾರಂಭಿಸಲು ಅನುಮತಿ.
9. ಮನ್ ನರೇಗಾ ಅಡಿಯಲ್ಲಿ ನೀರಾವರಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪ್ರಾರಂಭಿಸಲು ಆದ್ಯತೆ ಮೇರೆಗೆ ಅನುಮತಿ.
10. ಗೂಡ್ಸ್ ಮತ್ತು ಕಾರ್ಗೋ ಸಂಚಾರಕ್ಕೆ ಅನುಮತಿ ಲಭಿಸಿದೆ.
11. ಸಿಮೆಂಟ್, ಸ್ಟೀಲ್, ಜಲ್ಲಿ, ಟೈಲ್ಸ್, ಪೇಂಟ್, ಇಟ್ಟಿಗೆ ಹಾಗೂ ಟಾರ್ ಸಾಗಾಟಕ್ಕೆ ಅನುಮತಿ.
ಏನಿರಲ್ಲ….?
1. ಬಸ್, ರೈಲು, ನಮ್ಮ ಮೆಟ್ರೋ, ವಿಮಾನ ಸಂಚಾರ
2.ಅಂತರ್ ಜಿಲ್ಲೆ, ಅಂತರ್ ರಾಜ್ಯಗಳ ನಡುವಣ ಸಂಚಾರ
3.ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಕೇಂದ್ರಗಳು
4.ಕೈಗಾರಿಕೆ, ವಾಣಿಜ್ಯ ಚಟುವಟಿಕೆ (ಅಗತ್ಯ ಸೇವೆ ಹೊರತುಪಡಿಸಿ)
5.ಆತಿಥ್ಯ ಸೇವೆಗಳು (ಅಗತ್ಯ ಸೇವೆ ಹೊರತುಪಡಿಸಿ)
6.ಓಲಾ, ಉಬರ್ ಕ್ಯಾಬ್, ಟ್ಯಾಕ್ಸಿ, ಆಟೋ ರಿಕ್ಷಾ
7.ಥಿಯೇಟರ್, ಶಾಪಿಂಗ್ ಮಾಲ್, ಜಿಮ್, ಈಜುಕೊಳ
8.ಹೋಟೆಲ್, ರೆಸ್ಟೋರೆಂಟ್, ಬಾರ್, ವೈನ್ ಶಾಪ್
9.ಎಲ್ಲಾ ರೀತಿಯ ಸಭೆ ಸಮಾರಂಭಗಳು
10.ಅಂತ್ಯಕ್ರಿಯೆಯಲ್ಲಿ 20ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವಂತಿಲ್ಲ