ನೇರಳಕಟ್ಟೆಯಲ್ಲಿ ಹಿರಿಯರ ಸೇವಾ ಪ್ರತಿಷ್ಠಾನದ ಮಾಸಿಕ ಸಭೆ…

ಬಂಟ್ವಾಳ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ( ರಿ) ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಜನವರಿ ತಿಂಗಳ ಸಭೆಯು ನೇರಳಕಟ್ಟೆ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದಲ್ಲಿ ಜರಗಿತು.
ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ ಎ .ವಿ ನಾರಾಯಣ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಾಸ್ತವಿಕವಾಗಿ ಮಾತಾಡಿದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಪ್ರತಿಷ್ಠಾನದ ವತಿಯಿಂದ ಒಂದು ವರ್ಷದ ಅವಧಿಯಲ್ಲಿ ನಡೆಸಲಾದ ಚಟುವಟಿಕೆಗಳ ಬಗ್ಗೆ ಸಿಂಹಾವಲೋಕನ ನಡೆಸಿ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರ ಸಲಹೆಗಳನ್ನು ಸ್ವೀಕರಿಸಿ ಸಮನ್ವಯಗೊಳಿಸಿದರು.
ಬಳಿಕ ಲಘು ವ್ಯಾಯಾಮ ಚಟುವಟಿಕೆಗಳನ್ನು ನಡೆಸಿ ಶ್ರೀಮದ್ ಭಾಗವತದ ಕಥಾನಕದ ಸತ್ಸಂಗವನ್ನು ನಡೆಸಿಕೊಟ್ಟರು.
ಪ್ರತಿಷ್ಠಾನದ ಟ್ರಸ್ಟಿ ಜಯರಾಮ ಪೂಜಾರಿ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಸುಲಭವಾದ ಕೆಲವು ಪರಿಹಾರ ಕ್ರಮಗಳನ್ನು ತಿಳಿಸಿದರು.

ಸಭೆಯಲ್ಲಿ ಕೇಂದ್ರ ಸಮಿತಿಯ ಟ್ರಸ್ಟಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ತಾಲೂಕು ಸಮಿತಿಯ ಕನಿಷ್ಠ ಎರಡು ಪದಾಧಿಕಾರಿಗಳು ಭಾಗವಹಿಸುವ ಮೂಲಕ ಎಲ್ಲಾ ತಾಲೂಕುಗಳಲ್ಲಿ ಕೇಂದ್ರ ಸಮಿತಿಯಲ್ಲಿ ಚರ್ಚಿಸುವ ವಿಷಯಗಳ ಬಗ್ಗೆ ಚಟುವಟಿಕೆಗಳನ್ನು ರೂಪಿಸುವಂತೆ ಎಲ್ಲರೂ ಸಹಕರಿಸಬೇಕೆಂದು ತೀರ್ಮಾನಿಸಲಾಯಿತು.

ಯುವ ಜನಾಂಗಕ್ಕೆ ಅಗತ್ಯವೆನಿಸುವ ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆಸುವ ಬಗ್ಗೆ ಉಪ ಸಮಿತಿಯನ್ನು ರಚಿಸಲಾಯಿತು.

ಸಭೆಯಲ್ಲಿ ಲೋಕೇಶ್ ಹೆಗ್ಡೆ ಪುತ್ತೂರು, ಅನಂತ ಪ್ರಭು ನೇರಳಕಟ್ಟೆ ,ಅನಾರು ಕೃಷ್ಣಶರ್ಮ ,ರಾಜಮಣಿ ರಾಮಕುಂಜ ,ಜಯಾನಂದ ಪೆರಾಜೆ, ಭವಾನಿ ಶಂಕರ ಶೆಟ್ಟಿ ಪುತ್ತೂರು, ಶ್ರೀಮತಿ ವತ್ಸಲಾ ರಾಜ್ನಿ, ಉದಯ ಶಂಕರ ರೈ ಪುಣಚ, ವೆಂಕಟರಾಯ ಪ್ರಭು ಕಲ್ಲಡ್ಕ ,ದಿನಕರ ನಾಯಕ್, ಭೋಜ ನಾರಾಯಣ ಮೂಲ್ಯ, ರಾಮಚಂದ್ರ. ಎಂ ತಿಮ್ಮಪ್ಪ ,ಸಂಜೀವ ಶೆಟ್ಟಿ, ಸುಬ್ರಾಯ ಮಡಿವಾಳ, ಸುಮಿತ್ರ ಮಡಿವಾಳ ಮತ್ತು ಭಜನಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಧನ್ಯವಾದ ಅರ್ಪಿಸಿದರು.

img 20230119 wa0003
Sponsors

Related Articles

Back to top button