ಪುತ್ತೂರಿನಲ್ಲಿ ಇಂದಿನಿಂದ ದಸರಾ ಸಂಭ್ರಮ-ವಿವಿಧ ಕ್ಷೇತ್ರಗಳಲ್ಲಿ ಆರಾಧನೆಯ ಸಡಗರ….

ಪುತ್ತೂರು:ನಾಡಿನ ದೊಡ್ಡ ಹಬ್ಬವಾಗಿರುವ ದಸರಾಕ್ಕೆ ತಾಲೂಕಿನ ಎಲ್ಲೆಡೆ ಸಂಭ್ರಮ ಸಿದ್ಧತೆ ನಡೆಯುತ್ತಿದೆ. ದಸರಾ ನಾಡಹಬ್ಬದ ಸಮಿತಿಗಳಿಂದ ಕೆಲವು ಕಡೆಗಳಲ್ಲಿ ಹಬ್ಬದ ತಯಾರಿ ನಡೆಯುತ್ತಿದ್ದರೆ. ತಾಲೂಕಿನ ದೇವಿ ಕ್ಷೇತ್ರಗಳಲ್ಲಿ ಹಬ್ಬದ ತಯಾರಿ ಬಿರುಸಿನಿಂದ ನಡೆಯುತ್ತಿದೆ.
ಪುತ್ತೂರಿನ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನ, ಬೊಳುವಾರು ಓಂ ಶಕ್ತಿ ಆಂಜನೇಯ ಮಂತ್ರಾಲಯ, ಮಠಂತಬೆಟ್ಟು ರಾಜರಾಜೇಶ್ವರೀ ದೇವಸ್ಥಾನ, ಸಂಪ್ಯ ಅನ್ನಪೂರ್ಣೇಶ್ವರಿ ದೇವಸ್ಥಾನ, ಎಡಮಂಗಲ ದುರ್ಗಾಪರಮೇಶ್ವರೀ ದೇವಸ್ಥಾನ, ಕೇರ್ಪಡ ಮಹಿಷಮರ್ದಿನಿ ದೇವಸ್ಥಾನ, ಸುಬ್ರಹ್ಮಣ್ಯ ವನದುರ್ಗಾ ದೇವಸ್ಥಾನ, ಮರಕತ ದುರ್ಗಾಪರಮೇಶ್ವರೀ ದೇವಸ್ಥಾನ, ಬೆಳ್ಳಾರೆ ಪೆರುವಾಜೆ ಜಲದುರ್ಗಾ ದೇವಸ್ಥಾನ, ಕಡಬ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ, ಪುಣಚ ಮಹಿಷಮರ್ದಿನಿ ದೇವಸ್ಥಾನ, ಪುತ್ತೂರು ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ದೇವಸ್ಥಾನ, ಪುತ್ತೂರು ಮಹಾಮಾಯ ದೇವಸ್ಥಾನ, ಪುತ್ತೂರು ಶಾರದಾ ಭಜನಾ ಮಂದಿರ, ಮೊಟ್ಟೆತ್ತಡ್ಕ ಮಿಷನ್‍ಮೂಲೆ ಚಾಮುಂಡೇಶ್ವರಿ ದೇವಸ್ಥಾನ ಮುಂತಾದ ಕ್ಷೇತ್ರಗಳಲ್ಲಿ ಭಾನುವಾರದಿಂದ 9 ದಿನಗಳ ದೇವಿ ಆರಾಧನೆ ನಡೆಯಲಿದೆ.
ಉತ್ಸವದ ಅಂಗವಾಗಿ ಶಾರದಾ ಮಾತೆಯ ಪ್ರತಿಷ್ಠಾಪನೆ, ನವದುರ್ಗಾ ಪ್ರತಿಷ್ಠಾಪನೆ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ದೇವಿಗೆ ವಿಶೇಷ ಪೂಜೆ, ಅಲಂಕಾರ ಪೂಜೆ, ಕುಂಕುಮಾರ್ಚನೆ ಸೇವೆ, ಮಹಿಳೆಯರಿಂದ ಲಲಿತಸಹ್ರ ನಾಮ ಪಠಣ, ರಂಗಪೂಜೆ, ಮಹಾಪೂಜೆ, ಅಕ್ಷರಾಭ್ಯಾಸ, ಆಯುಧಪೂಜೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸಂಗೀತ ಕಲಾವಿದರಿಂದ ಶಾಸ್ತ್ರೀಯ ಸಂಗೀತ, ನೃತ್ಯ ವೈವಿಧ್ಯ, ಯಕ್ಷಗಾನ ಬಯಲಾಟ, ತಾಳಮದ್ದಳೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪುತ್ತೂರಿನಲ್ಲಿ ಐತಿಹಾಸಿಕ ಹಿನ್ನಲೆಯ ಹೊಂದಿರುವ ಡಾ. ಶಿವರಾಮ ಕಾರಂತರು ಆರಂಭಿಸಿದ ಪುತ್ತೂರಿನ ದಸರಾ ನಾಡಹಬ್ಬ ಸಮಿತಿ ವತಿಯಿಂದ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯುವ 67ನೇ ವರ್ಷದ ದಸರಾ ನಾಡಹಬ್ಬ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಪ್ಯ ವಿಷ್ಣುಮೂರ್ತಿ-ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನವದುರ್ಗಾರಾಧನಾ ಸಮಿತಿ ವತಿಯಿಂದ ಗಣಪತಿ, ಶಾರದೆ ಸಹಿತ ನವದುರ್ಗೆಯರ ಪ್ರತಿಷ್ಠಾಪನೆ ನಡೆಯಲಿದೆ. ನವರಾತ್ರಿ ಅಂತಿಮ ದಿನ ವೈಭವದ ನವದುರ್ಗೆಯರ ಶೋಭಾಯಾತ್ರೆ ಮತ್ತು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶಾರದಾ ಭಜನಾ ಮಂದಿರದಲ್ಲಿ ಶಾರದೆ ಪ್ರತಿಷ್ಠಾಪನೆ ನಡೆದು ವೈಭವದ ಶೋಭಾಯಾತ್ರೆ ನಡೆಯಲಿದೆ.

Sponsors

Related Articles

Leave a Reply

Your email address will not be published. Required fields are marked *

Back to top button