ಕರ್ನಾಟಕ ಪದವಿ ಪೂರ್ವ ಕಾಲೇಜು ಮಾಣಿ – ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಮತ್ತು ಸಂಸ್ಕೃತಿ ಹಬ್ಬ….

ಬಂಟ್ವಾಳ: ಕರ್ನಾಟಕ ಪದವಿ ಪೂರ್ವ ಕಾಲೇಜು ಮಾಣಿ ಹಾಗೂ ಸಿರಿಗನ್ನಡ ವೇದಿಕೆ ಬಂಟ್ವಾಳ ತಾಲೂಕು ಇದರ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಮತ್ತು ಸಂಸ್ಕೃತಿ ಹಬ್ಬ ಕರ್ನಾಟಕ ಪದವಿಪೂರ್ವ ಕಾಲೇಜಿನ ಶಾಂತಲ ಸಭಾಂಗಣದಲ್ಲಿ ನೆರವೇರಿತು.
ಕಾಲೇಜಿನ ವಿದ್ಯಾರ್ಥಿನಿಯರು ಹಚ್ಚೇವು ಕನ್ನಡದ ದೀಪ ಆಶಯ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲೆ ಶ್ರೀದೇವಿ ಇವರು ಆಗಮಿಸಿದ ಗಣ್ಯರಿಗೆ ಸ್ವಾಗತವನ್ನು ಕೋರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಕೂಡಿ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿ, ಮಂಗಳೂರು ವಿಶ್ವವಿದ್ಯಾನಿಲಯ ಸಹಾಯಕ ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ ಅವರು ಕನ್ನಡ ಸಂಸ್ಕೃತಿ, ಭಾವೈಕ್ಯತೆ ಕನ್ನಡದ ಬಳಕೆ ಹಾಗೂ ಕಲಿಕೆ, ಕನ್ನಡದ ಮಹತ್ವ, ಕನ್ನಡದ ಉಳಿವಿಗಾಗಿ
ಶ್ರಮಿಸಿದಂತಹ ಮಹನೀಯರನ್ನು ನೆನೆದರು.
ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷರಾದಂತಹ ಮಧುರಕಾನನ ಗಣಪತಿ ಭಟ್ಟ ಅವರು ಸಿರಿಗನ್ನಡ ವೇದಿಕೆಯ ಧ್ಯೇಯೋದ್ದೇಶಗಳ ಕುರಿತು, ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡಿದರು.
ಸಿರಿಗನ್ನಡ ವೇದಿಕೆಯ ಬಂಟ್ವಾಳ ತಾಲೂಕಿನ ಅಧ್ಯಕ್ಷರಾದಂತಹ ಅಶೋಕ ಎನ್ ಕಡೇಶಿವಾಲಯ ಇವರು ಕನ್ನಡದ ಉಳಿವಿಗಾಗಿ ಮಕ್ಕಳು ಕನ್ನಡ ಪುಸ್ತಕ ಓದುವ ಮತ್ತು ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾಭಿವರ್ಧಕ ಸಂಘ(ರಿ) ಮಾಣಿ ಇದರ ಕಾರ್ಯದರ್ಶಿಗಳಾದ ಹಾಜಿ ಇಬ್ರಾಹಿಂ ಕೆ ಇವರು ಡಿಸೆಂಬರ್ ತಿಂಗಳಿನಲ್ಲಿ ಮಾಣಿಯಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಬಗ್ಗೆ ಮಾಹಿತಿಯನ್ನು ನೀಡಿದರು.
ವಿದ್ಯಾಭಿವರ್ಧಕ ಸಂಘ (ರಿ) ಮಾಣಿ ಇದರ ಅಧ್ಯಕ್ಷ ರೊ| ಕಿರಣ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾಭಿವರ್ಧಕ ಸಂಘ(ರಿ) ಮಾಣಿ ಇದರ ಸದಸ್ಯರ ಕೆ ಜಯರಾಮ ರೈ ಹಾಗೂ ಕರ್ನಾಟಕ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಬಿ.ಕೆ. ಭಂಡಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಜ್ಞಾನದ ಸಂಕೇತವಾಗಿ ಹಣತೆಗಳನ್ನು ಹಚ್ಚಿ ಸಂಭ್ರಮಿಸಿದರು. ಚೇತನ್ ,ತೇಜಸ್ , ಹರ್ಷಿತ್, ನಿಶ್ಮಿತ ಸಭಾ ಕಲಾಪದಲ್ಲಿ ಸಹಕರಿಸಿದರು.ನ್ಯಾಯವಾದಿ ಪರಿಮಳ ಮಹೇಶ್ ರಾವ್ ಮತ್ತು ಕಾಲೇಜಿನ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.

Sponsors

Related Articles

Leave a Reply

Your email address will not be published. Required fields are marked *

Back to top button