ಪುತ್ತೂರು-ಕನ್ನಡ ರಾಜ್ಯೋತ್ಸವ ಆಚರಣೆ….

ಪುತ್ತೂರು: ನಾಡಿನ ಭಾಷೆ ಎಂಬುದು ಎಲ್ಲರನ್ನೂ ಐಕ್ಯಗೊಳಿಸುವ ಹೊದಿಕೆ. ಕನ್ನಡ ನಾಡಿಗಾಗಿ ಹೋರಾಡಿದವರ, ನಾಡಿನ ಗೌರವವನ್ನು ಎತ್ತರಕ್ಕೇರಿಸಿದ ಸಾಧಕರ ಕುರಿತು ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಆಗಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಆಶಯ ವ್ಯಕ್ತಪಡಿಸಿದರು.
ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕ್ಲಿಲೆ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಕನ್ನಡ ಧ್ವಜಾರೋಹಣ ನೆರವೇರಿಸಿ ಬಳಿಕ ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು, ಭಾಷೆ ಭಾವನಾತ್ಮಕ ಬೆಸುಗೆ
ಭಾವನಾತ್ಮಕ ಸಂಬಂಧಗಳ ಬೆಸುಗೆ. ಜಗತ್ತಿಗೇ ಕನ್ನಡದ ಮೂಲಕ ಕರ್ನಾಟಕವನ್ನು ನಾವು ತೋರಿಸಿಕೊಟ್ಟಿದ್ದೇವೆ. ದೇಶದಲ್ಲೇ ಸಮೃದ್ಧ, ಸುಂದರ ಭಾಷೆ ಹಾಗೂ 8 ಜ್ಞಾನಪೀಠ ಪುರಸ್ಕಾರ ಪಡೆದ ಭಾಷೆ ಎಂಬ ಹೆಗ್ಗಳಿಕೆ ಕನ್ನಡಕ್ಕಿದೆ ಎಂದರು. ಶಿಲ್ಪಕಲೆ, ವಿಧಾನಸೌಧದಂತಹ ನಿರ್ಮಾಣ ಸೇರಿದಂತೆ ಉಲ್ಲೇಖನೀಯ ಹಾಗೂ ಹೆಮ್ಮೆಯ ಸಂಗತಿಗಳು ಕನ್ನಡಿಗರದ್ದು ಎಂಬುದು ನಮಗೆ ಹೆಮ್ಮೆ ಎಂದರು.ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಸಾಧಕರಾದ ಕಡಮಜಲು ಸುಭಾಸ್ ರೈ, ತ್ಯಾಂಪಣ್ಣ ನಾಯ್ಕ್ ಹಾಗೂ ಧರ್ಣಪ್ಪ ಗೌಡ ಅವರನ್ನು ಸಮಿತಿಯ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.
ತಾ. ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾ.ಪಂ. ಕಾರ್ಯನಿರ್ವಹಣಾ„ಕಾರಿ ನವೀನ್ ಭಂಡಾರಿ, ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಇಲಾಖೆಗಳ ಅ„ಕಾರಿಗಳು, ಸಿಬಂದಿ, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಚಂದ್ರಶೇಖರ ಎ. ಹಾಗೂ ಪದಾ„ಕಾರಿಗಳು, ಸೀತಾರಾಮ ಶೆಟ್ಟಿ ಸೇರಿದಂತೆ ಕನ್ನಡಾಭಿಮಾನಿಗಳು ಪಾಲ್ಗೊಂಡರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಅನಂತ ಶಂಕರ್ ಸ್ವಾಗತಿಸಿ, ಸಾಂಸ್ಕøತಿಕ ಸಮಿತಿ ಸಂಚಾಲಕ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ವಂದಿಸಿದರು.ದೈ. ಶಿ. ಶಿಕ್ಷಕ ಬಾಲಕೃಷ್ಣ ಪೊರ್ದಳ್ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button