ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಸಭೆ…..
ಪುತ್ತೂರು: ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಸಭೆಯು ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹಾಜಿ ಎಸ್ ಇಬ್ರಾಹಿಂ ಕಮ್ಮಾಡಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಪ್ಯ ಕಮ್ಮಾಡಿ ಸಭಾಂಗಣದಲ್ಲಿ ನಡೆಯಿತು.
ಶರೀಅತ್ ಸಲಹಾ ಮಂಡಳಿಯ ಎಸ್.ಬಿ ಮುಹಮ್ಮದ್ ದಾರಿಮಿ ದುವಾ ನೆರವೇರಿಸಿದರು. ಸಂಘಟನಾ ಕಾರ್ಯದರ್ಶಿ ಕೆ.ಎಂ ಬಾವಾ ಹಾಜಿ ಕೂರ್ನಡ್ಕ ಗತ ಸಭೆಯ ವರದಿ ವಾಚಿಸಿದರು. ಉಪಾಧ್ಯಕ್ಷರಾದ ಎಂ.ಎಸ್ ಮುಹಮ್ಮದ್, ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಅಬ್ದುಲ್ ರಹಿಮಾನ್ ಹಾಜಿ ಅರ್ತಿಕೆರೆ, ಅಬ್ದುಲ್ ರಹಿಮಾನ್ ಹಾಜಿ ಬೈತ್ತಡ್ಕ, ಶರೀಅತ್ ಸಲಹಾ ಮಂಡಳಿಯ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಸತ್ತಾರ್ ಸಖಾಪಿ ಮತ್ತಿತರರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಉಪಾಧ್ಯಕ್ಷ ಖಾಸಿಂ ಹಾಜಿ ಮಿತ್ತೂರು, ಕಾನೂನು ಸಲಹೆಗಾರ ಕೆ.ಎಂ ಸಿದ್ದೀಕ್ ಹಾಜಿ, ಸಲಹಾ ಮಂಡಳಿಯ ಯು.ಅಬ್ದುಲ್ಲ ಹಾಜಿ, ಪತ್ರಿಕಾ ಕಾರ್ಯದರ್ಶಿಗಳಾದ ಸಂಶುದ್ದೀನ್ ಸಂಪ್ಯ, ಯೂಸುಫ್ ರೆಂಜಲಾಡಿ, ಸದಸ್ಯರಾದ ಉಮರ್ ಹಾಜಿ ಅತ್ತಿಕೆರೆ, ಇಸ್ಮಾಯಿಲ್ ಸಾಲ್ಮರ, ಹಸೈನಾರ್ ಹಾಜಿ, ಸುಲೈಮಾನ್ ಹಾಜಿ ಸಾಲ್ಮರ, ಅಬ್ದುಲ್ ರಝಾಕ್ ಕೆನರಾ, ಯೂಸುಫ್ ಹಾಜಿ ಕೈಕಾರ, ಹಸೈನಾರ್ ಸಿಟಿ ಬಜಾರ್, ಅಬ್ದುಲ್ ಕರೀಂ ಸವಣೂರು, ಇಸ್ಮಾಯಿಲ್ ದರ್ಬೆ ತಿಂಗಳಾಡಿ, ಇಬ್ರಾಹಿಂ ಹಾಜಿ ತಿಂಗಳಾಡಿ ಉಪಸ್ಥಿತರಿದ್ದರು.
ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಬಿ.ಎ ಶಕೂರ್ ಹಾಜಿ ಕಲ್ಲೇಗ ವಂದಿಸಿದರು.