ಪೇರಡ್ಕದಲ್ಲಿ ನಡೆದ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ಸಂಘಮ- ಕಣ್ತುಂಬಿಕೊಂಡ ಜನಸಾಗರ…

ಸುಳ್ಯ: ಎಸ್.ಕೆ.ಎಸ್.ಎಸ್.ಎಪ್ ಗೂನಡ್ಕ ಶಾಖೆ ವತಿಯಿಂದ ಉಸ್ತಾದ್ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತ್ರತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ವಾರ್ಷಿಕ ಮಜ್ಲಿಸ್ ನ್ನೂರ್ ಕಾರ್ಯಕ್ರಮವು ಮಾ. 19 ರಂದು ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ವಠಾರದಲ್ಲಿ ತೆಕ್ಕಿಲ್ ಮೊಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆಯಿತು.
ಧ್ವಜಾರೋಹಣವನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ನೆರವೇರಿಸಿದರು. ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಘಮವನ್ನು ಬಹು| ಸಯ್ಯದ್ ಜಲಾಲುದ್ದೀನ್ ತಂಗಳ್ರವರು ಉದ್ಘಾಟಿಸಿ ಅಲ್ಲಾಹುವಿನ ಹೆಸರಿನಲ್ಲಿ ಹೇಳುವ ದಿಕ್ರ್ ನ್ನಿಂದ ಆತ್ಮ ಶುದ್ದೀಕರಣಗೊಂಡು ಅನುಗ್ರಹ ಪ್ರಾಪ್ತಿಯಾಗಲಿದೆ ಎಂದರು.
ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಪೇರಡ್ಕ ಜುಮಾ ಮಸೀದಿಯ ಗೌರವಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ವಿಜ್ಞಾನಂ, ವಿನಯಂ, ಸೇವೆ ಎಂಬ ವೇದ ವಾಕ್ಯದೊಂದಿಗೆ ಮುನ್ನಡೆಯುತ್ತಿರುವ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯು ವಿಕಾಯ, ಟ್ರೆಂಡ್ ಗಳ ಮೂಲಕ ಸಮಾಜಕ್ಕೆ ಮಾದರಿಯಾದ ಕೆಲಸವನ್ನು ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ ಮಾತನಾಡಿ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯು ಜೋಡುಪಾಲ ಮತ್ತು ಸಂಪಾಜೆ ಗ್ರಾಮದಲ್ಲಿ ನಡೆದ ನೆರೆ ಸಂಧರ್ಭದಲ್ಲಿ ತಮ್ಮ ಜೀವದ ಹಂಗುತೊರೆದು ನೆರೆ ಸಂತ್ರಸ್ಥರನ್ನು ರಕ್ಷಿಸಿದ ರೀತಿಸಮಾಜಕ್ಕೆ ಮಾದರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬಹು| ಹುಸೈನ್ ದಾರಿಮಿ ರೆಂಜಿಲಾಡಿ, ಬಹು| ಇಬ್ರಾಹಿಂ ಖಲೀಲ್ ಫೈಝಿ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ| ಉಮ್ಮರ್ ಬೀಜದಕಟ್ಟೆ, ಝೈನುದ್ದೀನ್ ಯಮಾನಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್ ಗೂನಡ್ಕ ಶಾಖೆಯ ಅಧ್ಯಕ್ಷ ಬಹು| ಹಾಜಿ ಸಾಜಿದ್ ಅಝ್ಹರಿ ವಹಿಸಿದರು. ವೇದಿಕೆಯಲ್ಲಿ ಪೇರಡ್ಕ ಜಮಾಅತ್ ಅಧ್ಯಕ್ಷ ಆಲಿಹಾಜಿ, ಅರಂತೋಡು ಜುಮಾ ಮಸೀದಿ ಖತೀಬರಾದ ಹಾಜಿ ಇಸಾಕ್ ಬಾಖವಿ, ಅರಂತೋಡು ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಗುಂಡಿ, ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಅಧ್ಯಕ್ಷ ಅಬ್ದುಲ್ ಫೈಝಿ ಫೈಂಬಚ್ಚಾಲ್, ನೂರೆ ಅಜ್ಮೀರ್ ಕರ್ನಾಟಕ ಸಂಚಾಲಕ ಇಕ್ಬಾಲ್ ಬಾಳಿಲ, ಸಮಸ್ತ ಮುಖಂಡರಾದ ಇಬ್ರಾಹಿಂ ಕತ್ತರ್, ಸುನ್ನಿ ಮಹಲ್ ಫೆಡರೇಶನ್ ಅಧ್ಯಕ್ಷ ಹಮೀದ್ ಹಾಜಿ, ತಾಲೂಕು ಮದರಸ ಮಾನೇಜ್ ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ, ಇಕ್ಬಾಲ್ ಸುಣ್ಣಮೂಲೆ, ಶಾಫಿ ದಾರಿಮಿ, ಪೇರಡ್ಕ ಜಮಾಅತ್ ಕಾರ್ಯದರ್ಶಿ ಟಿ.ಎ ಅಬ್ದುಲ್ ರಝಾಕ್ ತೆಕ್ಕಿಲ್, ಟಿ.ಎ ಮಹಮ್ಮದ್ ಕುಂಇ’ ತೆಕ್ಕಿಲ್ ಪೇರಡ್ಕ, ಅಬ್ಬಾಸ್ ಪಾಂಡಿ, ಯು.ಪಿ ಬಶೀರ್ ಬೆಳ್ಳಾರೆ, ನ್ಯಾಯವಾದಿ ಪವಾಜ್ ಕನಕಮಜಲು ಅಕ್ಬರ್ ಕರಾವಳಿ ಮೊದಲಾದವರು ಉಪಸ್ಥಿತರಿದ್ದರು. ಎಸ್.ಕೆ.ಎಸ್.ಎಸ್.ಎಫ್ ಗೂನಡ್ಕ ಶಾಖೆ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ಸ್ವಾಗತಿಸಿ ಸದರ್ ಮುಅಲ್ಲಿಂ ನೂರುದ್ದೀನ್ ಅನ್ಸಾರಿ ವಂಧಿಸಿದರು, ಮುನೀರ್ ದಾರಿಮಿ, ಜುರೈದ್ ತೆಕ್ಕಿಲ್ ನಿರೂಪಿಸಿದರು.

whatsapp image 2023 03 21 at 7.55.53 pm
whatsapp image 2023 03 21 at 7.56.11 pm
Sponsors

Related Articles

Back to top button