ಫೆ. 17 – ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ…
ಬಂಟ್ವಾಳ : ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು ಎಂಬ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಮಂಗಳೂರು ವಿವಿ ಸಹಯೋಗದಲ್ಲಿ ಫೆ. 17ರಂದು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ವೇದವ್ಯಾಸ ಸಭಾಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿವರ ನೀಡಿದರು.
ಉದ್ಘಾಟನೆಯಲ್ಲಿ ಭಾರತದ ರಾಜಕೀಯ, ಕಾನೂನು, ಆರ್ಥಿಕ , ವ್ಯವಹಾರಿಕ, ಬೌದ್ಧಿಕ ಮಜಲುಗಳಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆ ಪ್ರಸ್ತಾವನೆ ಹಾಗೂ ಚರ್ಚೆ ನಡೆಯಲಿದೆ.
ಪ್ರಸ್ತಾವನೆಯಲ್ಲಿ ವಿಚಾರ ಸಂಕಿರಣದ ಅಗತ್ಯತೆ- ಅನಿವಾರ್ಯತೆ ಕುರಿತು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಪ್ರಸ್ತಾವನೆ ನೀಡುವರು. ಪೌರತ್ವ ತಿದ್ದುಪಡಿ ಕಾಯ್ದೆ – ಘಟನೆಗಳ ಸುತ್ತಮುತ್ತ ಕುರಿತು ಬೆಂಗಳೂರಿನ ನ್ಯಾಯವಾದಿ, ಕಲಾವಿದೆ, ಸಾಮಾಜಿಕ ಕಾರ್ಯಕರ್ತೆ ಮಾಳವಿಕಾ ಅವಿನಾಶ್ ಮಾತನಾಡುವರು.
ದ್ವಿತೀಯ ಗೋಷ್ಠಿ ಗಂಟೆ 11.45ರಿಂದ 12.45ರಲ್ಲಿ ಸಶಕ್ತ ಭಾರತ -ಆರ್ಥಿಕತೆ ಮತ್ತು ರಕ್ಷಣೆಯ ಪಾತ್ರ ಕುರಿತು ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾತನಾಡುವರು.
ತೃತೀಯ ಗೋಷ್ಠಿ ಗಂಟೆ 1. 45ರಿಂದ 2.45ರಲ್ಲಿ ಜನಸಂಖ್ಯೆ- ಲಾಭವೇ ಅಪಾಯವೇ ಕುರಿತು ಬೆಂಗಳೂರಿನ ಆರೋಹಿ ರಿಸರ್ಚ್ ಪೌಂಡೇಷನ್ ನಿರ್ದೇಶಕ, ಚಿಂತಕ, ವಿಮರ್ಶಕ ಎಂ. ಎಸ್. ಚೈತ್ರ ಮಾತನಾಡುವರು.
ಚತುರ್ಥ ಗೋಷ್ಠಿ ಗಂಟೆ 3ರಿಂದ 4 ಸಮಾರೋಪದಲ್ಲಿ ಬೌದ್ದಿಕ ದಾಸ್ಯ- ಮೇಲೆಳುತ್ತಿದೆಯೇ ಭಾರತ…? ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಮೈಸೂರಿನ ಪ್ರಾಧ್ಯಾಪಕ ಡಾ| ಬಿ.ವಿ. ವಸಂತ್ ಕುಮಾರ್ ಮಾತನಾಡುವರು.
ಒಂದು ಸಂಸ್ಥೆಯಿಂದ ನಾಲ್ಕು ವಿದ್ಯಾರ್ಥಿಗಳು ಒಬ್ಬರು ಪ್ರಾಧ್ಯಾಪಕರಿಗೆ ಭಾಗವಹಿಸಲು ಅವಕಾಶ ಕಲ್ಪಿಸಿದೆ. ಮಂಗಳೂರು ವಿವಿ 60 ಹೆಚ್ಚು ಕಾಲೇಜು, ಹೊರ ರಾಜ್ಯ ವಿವಿಗಳ ಪ್ರತಿನಿಧಿಗಳು ಮುಂಚಿತ ತಿಳಿಸಿದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರಶ್ನೋತ್ತರಕ್ಕೆ ಅವಕಾಶವಿದೆ, ಒಒಡಿ ಸೌಲಭ್ಯವಿದೆ ಎಂದು ವಿವರ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಾಗೇಶ್ ಇರಾ, ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ಕಟ್ಟೆ ಉಪಸ್ಥಿತರಿದ್ದರು.