ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾಲೋಚನಾ ಸಭೆ…..
ಬಂಟ್ವಾಳ: ಸಾಹಿತ್ಯ ಸಮ್ಮೇಳನ ಜಾತ್ರೆಯ ಮಾದರಿಯಲ್ಲಿ ಸಂಘಟಿತ ಆಗಬೇಕು. ಆ ದೃಷ್ಟಿಯಲ್ಲಿ ನಮ್ಮ ಪ್ರಯತ್ನ ನಡೆಯುವುದು. ಮಾಣಿ ಆಸುಪಾಸಿನ ಹನ್ನೊಂದು ಗ್ರಾಮಗಳ ಎಲ್ಲ ಸಾಹಿತ್ಯಪ್ರಿಯರು ಒಂದಾಗಿ ಪೂರ್ವ ಸಿದ್ದತೆಯ ಕೆಲಸಗಳು ನಡೆಯಬೇಕು. ಜನತೆಯ ಮೇಲಿರುವ ವಿಶ್ವಾಸದಿಂದ ನಾವು ಸಮ್ಮೇಳನದ ವೀಳ್ಯ ಸ್ವೀಕರಿಸಿದ್ದೇವೆ. ಅದನ್ನು ಯಶಸ್ವಿಗೊಳಿಸುವಲ್ಲಿ ಶಕ್ತಿ ಮೀರಿ ದುಡಿಯುವ ಬದ್ದತೆ ನಮ್ಮದಾಗಿದೆ ತಂದು ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಪ್ರಹ್ಲಾದ ಶೆಟ್ಟಿ ಜಡ್ತಿಲ ಹೇಳಿದರು.
ಅವರು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆ ಉದ್ದೇಶಿಸಿ ಮಾತನಾಡಿದರು.
ಜಿ.ಪಂ.ಸದಸ್ಯೆ ಮಂಜಳಾ ಮಾವೆ ಮಾತನಾಡಿ ಸಮ್ಮೇಳನದ ಆರ್ಥಿಕ ವೆಚ್ಚ, ಯಶಸ್ಸು ನಮ್ಮ ದುಡಿತದಲ್ಲಿದೆ. ನಾವು ಹೊಣೆಗಾರರಾಗಿ ಕೆಲಸ ಮಾಡಬೇಕು. ಮಾಣಿಯಲ್ಲಿ ಇಂತಹ ಕಾರ್ಯಕ್ರಮ ಇದೇ ಪ್ರಥಮವಾಗಿ ನಡೆಯುತ್ತಿದೆ. ಎಲ್ಲರ ಸಹಭಾಗಿತ್ವವನ್ನು ಪಡೆಯುವ ಭರವಸೆ ವ್ಯಕ್ತ ಪಡಿಸಿದರು.
ಬಂಟ್ವಾಳ ಕಸಾಪ ಅಧ್ಯಕ್ಷ ಕೆ. ಮೋಹನ ರಾವ್ ಮಾತನಾಡಿ ಸ್ಥಳೀಯರಿಂದ ಬಂದ ಸೂಚನೆಯಂತೆ ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆಯ ಡಾ. ಧರಣಿದೇವಿ ಮಾಲಗತ್ತಿ ಅವರು ಸಮ್ಮೇಳನ ಅಧ್ಯಕ್ಷರಾಗಲು ಒಪ್ಪಿಕೊಂಡಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅನುಮತಿಯಂತೆ ಹೆಸರನ್ನು ಘೋಷಿಸುತ್ತಿರುವುದಾಗಿ ತಿಳಿಸಿದರು.
ಸಮಿತಿ ಕೋಶಾಧಿಕಾರಿ ಜಗನ್ನಾಥ ಚೌಟ, ಕಾರ್ಯದರ್ಶಿ ಶ್ರೀಧರ್ ಸಿ., ಕಸಾಪ ಕಾರ್ಯದರ್ಶಿ ನಾಗವೇಣಿ ಮಂಚಿ, ಬಂಟ್ವಾಳ ತಾಲೂಕು ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಗ್ರಾ.ಪಂ. ಅಧ್ಯಕ್ಷೆ ಮಮತಾ ಶೆಟ್ಟಿ, ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ರೈ ಮಾಣಿ, ಸಚಿನ್ ರೈ ಮಾಣಿಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಬ್ರಾಹಿಂ ಕೆ. ಮಾಣಿ, ಮೋಹನ್ ಪಿ.ಎಸ್., ಶ್ರೀಧರ ಗೌಡ, ಡಾ| ಮನೋಹರ ರೈ , ಗಿರಿಯಪ್ಪ ಗೌಡ, ಪೂವಪ್ಪ ನೇರಳಕಟ್ಟೆ, ಡಾ| ಶ್ರೀನಾಥ್ ಆಳ್ವ, ಪುಷ್ಪರಾಜ ಹೆಗ್ಡೆ, ತಾರಾನಾಥ ಶೆಟ್ಟಿ, ಅಮಿತ್ ಕುಮಾರ್ ಜೈನ್, ಜಯಂತಿ ಪೂಜಾರಿ, ಸುದೀಪ್ ಕುಮಾರ್ ಶೆಟ್ಟಿ, ಉಮೇಶ ಬರಿಮಾರು, ಜನಾರ್ದನ ಪೆರಾಜೆ, ಕುಶಲ ಎಂ. ಪೆರಾಜೆ ಮತ್ತು ಇತರರು ವಿವಿಧ ಸಲಹೆಗಳನ್ನು ನೀಡಿದರು.
ಕಸಾಪ ಅಧ್ಯಕ್ಷರು ಸ್ವಾಗತಿಸಿ, ಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಶೆಟ್ಟಿ ವಂದಿಸಿದರು. ಸ್ವಾಗತ ಸಮಿತಿ ಜೊತೆ ಕಾರ್ಯದರ್ಶಿ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು.