ರಾಜ್ಯದಲ್ಲಿ ನಿರಂತರ ವಿದ್ಯುತ್ ನೀಡುವ ಸಲುವಾಗಿ ಹೆಚ್ಚು ಹೆಚ್ಚು ಸಬ್ ಸ್ಟೇಷನ್ ಗಳ ನಿರ್ಮಾಣ- ಸಚಿವ ಸುನಿಲ್ ಕುಮಾರ್…

ಬಂಟ್ವಾಳ: ರಾಜ್ಯದಲ್ಲಿ ನಿರಂತರವಾಗಿ ಹಾಗೂ ಗುಣಮಟ್ಟದ ವಿದ್ಯುತ್ ನೀಡುವ ಸಲುವಾಗಿ ಸರಬರಾಜಿನಲ್ಲಿ ಎಲ್ಲಿಯೂ ಕೊರತೆಯಾಗದಂತೆ ಸಬ್ ಸ್ಟೇಷನ್ ಗಳನ್ನು ಹೆಚ್ಚು ಹೆಚ್ಚು ನಿರ್ಮಾಣ ಮಾಡುತ್ತಿದ್ದೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಉಪಸ್ಥಿತಿಯಲ್ಲಿ ಬಂಟ್ವಾಳದ ವಿದ್ಯಾಗಿರಿಯ ಅರ್ಬಿಗುಡ್ಡೆ ಎಂಬಲ್ಲಿ 33/11 ಕೆ.ವಿ. ಗ್ಯಾಸ್ ಇನ್ಸುಲೇಟಡ್ ವಿದ್ಯುತ್ ಉಪಕೇಂದ್ರದ ಉದ್ಘಾಟನೆ ನಡೆಸಿ ಮಾಧ್ಯಮ ದವರ ಜೊತೆ ಮಾತನಾಡಿದರು.
ಕೇಂದ್ರದ ಶೇ.60 ಹಾಗೂ ಮೆಸ್ಕಾಂ ನ ಶೇ.40. ಪರ್ಸೆಂಟ್ ವೆಚ್ಚದೊಂದಿಗೆ ಎರಡು ಜಿಲ್ಲೆಗಳಲ್ಲಿ ಇನ್ಸುಲೇಟರ್ ನಾಲ್ಕು ಉಪಕೇಂದ್ರಗಳನ್ನು ಆರಂಭಮಾಡಿದ್ದೇವೆ. ಬಂಟ್ವಾಳ, ಉರ್ವ, ಕೋಟ, ಉದ್ಯಾವರ ನಾಲ್ಕು ಕಡೆಗಳಲ್ಲಿ 39 ಕೋಟಿ ವೆಚ್ಚದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ನಾಲ್ಕರಲ್ಲಿ ಪ್ರಥಮವಾಗಿ ಬಂಟ್ವಾಳ ದಲ್ಲಿ 11 ಕೋಟಿ ರೂ ವೆಚ್ಚದಲ್ಲಿ ಉಪಕೇಂದ್ರದ ಉದ್ಘಾಟನೆ ನಡೆದಿದೆ. ಬಂಟ್ವಾಳದ ಸುತ್ತ ಮುತ್ತಲಿನ ಪರಿಸರದ ಸುಮಾರು 14 ಸಾವಿರ ಮನೆಗಳಿಗೆ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ನೀಡಲು ಅನುಕೂಲವಾಗಿದೆ. ಏಳು ತಿಂಗಳ ಅವಧಿಯಲ್ಲಿ ಕೆ.ಪಿ.ಟಿ.ಸಿ.ಎಲ್ ಹಾಗೂ ಎಸ್ಕಾಂ ನ ನೇತೃತ್ವದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ದೊಡ್ಡ ಪ್ರಮಾಣದಲ್ಲಿ ಸಬ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡುತ್ತಿದ್ದೇವೆ.ಮುಂದಿನ ದಿನಗಳಲ್ಲಿ ಬೇಡಿಕೆಯ ಮೇಲೆ ಇಂತಹ ಸಬ್ ಸ್ಟೇಷನ್ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು. ಕಲ್ಲಿದ್ದಲಿನ ಕೊರತೆ ರಾಜ್ಯಕ್ಕೆ ಆಗದಂತೆ ಕ್ರಮಕೈಗೊಂಡಿದ್ದೇವೆ. ಕಳೆದ 7 ವರ್ಷಗಳ ಬಳಿಕ
ಕರ್ನಾಟಕದ ಲ್ಲಿ 5 020 ಮೆಗಾವ್ಯಾಟ್ ಮೊದಲಿನೇ ಬಾರಿಗೆ ಆರಂಭಿಸಿದ್ದೇವೆ.ರಾಯಚೂರು ಮತ್ತು ಬಳ್ಳಾರಿಯ ಎಲ್ಲಾ ಯುನಿಟ್ ಗಳು ಕಾರ್ಯರಂಭವಾಗಿದೆ. ಕಲ್ಲಿದ್ದಲಿನ ನಿರಂತರವಾದ ಸರಬರಾಜು ಆಗುವ ಕಾರಣಕ್ಕಾಗಿ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ವಿದ್ಯುತ್ ಸರಬರಾಜು ಆಗುತ್ತಿದೆ, ತೊಂದರೆಯಾಗದಂತೆ ನಿರ್ವಹಣೆ ಯನ್ನು ಅಧಿಕಾರಿಗಳು ಚೆನ್ನಾಗಿ ಮಾಡಿದ್ದಾರೆ.
ಇಲಾಖೆಯಲ್ಲಿ ಹೊಸದಾಗಿ 899 ಮಂದಿ ಹೊಸ ನೇಮಕಾತಿ ಮಾಡಿದೆ, ಹೊಸದಾಗಿ 600 ಕ್ಕೂ ಅಧಿಕ 600 ಕ್ಕೂ ಹೆಚ್ಚು ಜನರ ನೇಮಕಾತಿ ಆರಂಭವಾಗಿದೆ. ಕೊರತೆಯಿರುವ ಕಡೆಗಳಲ್ಲಿ ತೆಗದುಕೊಳ್ಳುವ ಕೆಲಸ ಪ್ರಾರಂಭ ಮಾಡಿದ್ದೇವೆ. ಹೊಸ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು, 1500 ಜನರಿಗೆ ಕೆ.ಪಿ.ಟಿ.ಸಿ.ಎಲ್ ಮುಖಾಂತರ ನೇಮಕಾತಿ ಗಾಗಿ ಅರ್ಜಿ ಆಹ್ವಾನ ಮಾಡಲಾಗಿದ್ದು, ಮುಂದಿನ ಜೂನ್ ತಿಂಗಳ ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಪವರ್ ಮ್ಯಾನ್ ಗಳಿಗೆ 20 ಲಕ್ಷ ಜೀವವಿಮೆ ಇತ್ತು ನಾನು ಬಂದ ಅದನ್ನು 40 ಲಕ್ಷಕ್ಕೆ ಏರಿಸಿದ್ದೇನೆ ಎಂದು ಅವರು ತಿಳಿಸಿದರು.
ವಿದ್ಯುತ್ ಚಾರ್ಜಿಂಗ್ ಸೆಂಟರ್ ಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಕೆಲಸ ಪ್ರಾರಂಭವಾಗಿದೆ.ಜೂನ್ ಮೊದಲನೇ ವಾರದಲ್ಲಿ ಇಡೀ ರಾಜ್ಯದಲ್ಲಿ ವಿದ್ಯುತ್ ಚಾರ್ಜಿಂಗ್ ಸೆಂಟರ್ ಅಭಿಯಾನಕ್ಕೆ ದಿನ ನಿಗದಿ ಮಾಡುತ್ತೇವೆ.ಒಂದು ಸಾವಿರ ಚಾರ್ಜಿಂಗ್ ಸೆಂಟರ್ ಮಾಡುವ ಯೋಜನೆ ಮಾಡಿದ್ದೇವೆ.ಮೆಸ್ಕಾಂ ಇದಕ್ಕೆ ನೊಡಲ್ ಅಧಿಕಾರಿಯಾಗಿ ಮಾಡಿ ಟೆಂಡರ್ ಪ್ರಕ್ರಿಯೆ ಆರಂಭಮಾಡುತ್ತೇವೆ ಎಂದು ಅವರು ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ,ವಿಧಾನಪರಿಷತ್ ಸದಸ್ಯ ಪ್ರತಾಪ್‌ ಸಿಂಹ ನಾಯಕ್, ಎಂ.ಐ.ಇ‌ಇ ಅದ್ಯಕ್ಷ
ಸಂತೋಷ್ ಕುಮಾರ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಭಟ್, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ,ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪುರಸಭಾ ಸದಸ್ಯ ಗಂಗಾದರ ಪೂಜಾರಿ,ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿ ಅರಳ, ಪುರಸಭಾ ಸದಸ್ಯ ಹರಿಪ್ರಸಾದ್, ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಮಾಜಿ ತಾ.ಪಂ.ಸದಸ್ಯ ಗಣೇಶ್ ಸುವರ್ಣ, ಪ್ರಮುಖರಾದ ಮಹೇಶ್ ತುಪ್ಪೆಕಲ್ಲು, ಪುಷ್ಪರಾಜ್ ಚೌಟ, ಸುಕೇಶ್ ಚೌಟ, ಸೀಮಾ ಮಾಧವ, ಪುರುಷೋತ್ತಮ ಶೆಟ್ಟಿ, ಉದಯಕುಮಾರ್ ರಾವ್, ಗಣೇಶ್ ದಾಸ್, ಡೊಂಬಯ ಅರಳ, ಮಹೇಶ್ ಶೆಟ್ಟಿ, ಕೇಶವ ದೈಪಲ,ನಂದರಾಮ ರೈ, ಯಶೋಧರ ಕರ್ಬೆಟ್ಟು, ದ‌.ಕ.ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ! ಕುಮಾರ್, ತಹಶೀಲ್ದಾರ್ ಡಾ.ಸ್ಮಿತಾ ರಾಮು , ಮೆಸ್ಕಾಂ ಎಂ.ಡಿ.ಪ್ರಶಾಂತ್ ಕುಮಾರ್ ಮಿಶ್ರ, ತಾಂತ್ರಿಕ ನಿರ್ದೇಶಕಿ ಪದ್ಮಾವತಿ, ಚೀಪ್ ಇಂಜಿನಿಯರ್ ಹರೀಶ್ , ಅಧೀಕ್ಷಕ ಇಂಜಿನಿಯರ್ ಕೃಷ್ಣ ರಾಜ್, ಇ.ಇ.ಪ್ರಶಾಂತ್ ಪೈ, ಪಿ.ಆರ್.ಒ.ವಸಂತ ಶೆಟ್ಟಿ, ಬಂಟ್ವಾಳ ಎ.ಇ.ಇ.ನಾರಾಯಣ ಭಟ್, ಪುತ್ತೂರು ಇ.ಇ.ರಾಮಚಂದ್ರ, ಬೆಳ್ತಂಗಡಿ ಎ.ಇ‌ಇ.ಶಿವಶಂಕರ್, ಬಂಟ್ವಾಳ ನಗರ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ, ನಗರ ಠಾಣಾ ಎಸ್. ಐ. ಅವಿನಾಶ್ ಎಚ್. ಗೌಡ ಮತ್ತಿತರರು ಉಪಸ್ಥಿತರಿದ್ದರು.

Sponsors

Related Articles

Back to top button