ಬಂಟ್ವಾಳ – ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ…

ಬಂಟ್ವಾಳ: ಬಂಟ್ವಾಳದ ಆರೋಗ್ಯ, ಶಿಕ್ಷಣ ಕ್ಷೇತ್ರದ ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯವನ್ನು ಮಾಡಲಾಗಿದ್ದು, 12 ಕೋ.ರೂ.ವೆಚ್ಚದಲ್ಲಿ ಪುಂಜಾಲಕಟ್ಟೆ ಆಸ್ಪತ್ರೆಯ ಮೇಲ್ದರ್ಜೆ ಕಾಮಗಾರಿಯ ಜತೆಗೆ 5 ಕೋ.ರೂ.ವೆಚ್ಚದಲ್ಲಿ ಬಂಟ್ವಾಳ ಪಾಲಿಟೆಕ್ನಿಕ್ ಕಾಲೇಜಿನ‌ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.
ಅವರು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಸಂಪರ್ಕದ 2 ಕೋ.ರೂ.ವೆಚ್ಚದ ಕಾಂಕ್ರೀಟ್ ರಸ್ತೆ- ಇಂಟರ್ ಲಾಕ್ ಅಳವಡಿಕೆ ಸೇರಿದಂತೆ ಮಾಣಿ ಗ್ರಾಮ ವ್ಯಾಪ್ತಿಯಲ್ಲಿ ನಡೆದ ಸುಮಾರು 13 ಕೋ.ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾಣಿ ಶ್ರೀ ಉಳ್ಳಾಲ್ತಿ ಕ್ಷೇತ್ರದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಂಟ್ವಾಳ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ನನ್ನ ಜವಾಬ್ದಾರಿ ಹಾಗೂ ಧರ್ಮವೆಂದು ನಂಬಿ ನಿಷ್ಠೆಯ ಮೂಲಕ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಜಗತ್ತಿನ ಮಹಾನ್ ನಾಯಕ ಪ್ರಧಾನಿ ಮೋದಿಯವರ ಅಧೀನದಲ್ಲಿ ಕೆಲಸ ಮಾಡಿರುವುದಕ್ಕೆ ಹೆಮ್ಮೆ ಇದೆ.
ಸುಮಾರು 10 ವರ್ಷಗಳ ಹಿಂದೆ ಪಕ್ಷದ ಹಿರಿಯರ ಒತ್ತಾಯದ ಮೇರೆಗೆ ಬಂಟ್ವಾಳದಲ್ಲಿ ಪ್ರಥಮ ಬಾರಿಗೆ ಚುನಾವಣೆಗೆ ನಿಂತಾಗ ಕ್ಷೇತ್ರದ ಪರಿಚಯವೇ ಇರಲಿಲ್ಲ. ಆದರೆ ಮೊದಲ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನೀಡಿದ ಸಹಕಾರದಿಂದ 65 ಸಾವಿರ ಮಂದಿ ಮತ ಹಾಕಿದ್ದಾರೆ. ಹೀಗಾಗಿ ಅಂದೇ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಪಣತ್ತೊಟ್ಟು ಸಂಘಟಿತರಾಗಿ ಕೆಲಸ ಮಾಡಿದ ಪರಿಣಾಮ 22018 ರಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಸಾಧ್ಯವಾಯಿತು.
ಬಂಟ್ವಾಳದ ಸರಕಾರಿ ಆಸ್ಪತ್ರೆ, ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಘಟಕ, ಬಂಟ್ವಾಳದಲ್ಲಿ 72 ಮಂದಿಗೆ ಒಂದೇ ದಿನ ಡಯಾಲಿಸೀಸ್ ಚಿಕಿತ್ಸಾ ಸೌಲಭ್ಯ ನೀಡುವ ಕಾರ್ಯ ಮಾಡಲಾಗಿದೆ. ‌
ಕ್ಷೇತ್ರದಲ್ಲಿ ೧೫೦೦ಕ್ಕೂ ಅಧಿಕ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ಕ್ಷೇತ್ರದ ಜನತೆಗೆ ನ್ಯಾಯ ಒದಗಿಸುವ ಕಾರ್ಯ ಮಾಡಿದ ತೃಪ್ತಿ ಇದೆ. ಪಾದಯಾತ್ರೆ ನಡೆಸಿ ಜನರ ಬೇಡಿಕೆ, ನೋವನ್ನು ತಿಳಿಯುವ ಪ್ರಯತ್ನ ಮಾಡಲಾಗಿದೆ ಎಂದರು.‌

ಶ್ರೀ ಉಳ್ಳಾಲ್ತಿ ಕ್ಷೇತ್ರದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿಗುತ್ತು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಾಧವ ಮಾವೆ, ಹಿರಿಯರಾದ ರತ್ನಾಕರ ಭಂಡಾರಿ, ಮಾಣಿ ಗ್ರಾ.ಪಂ.ಸದಸ್ಯ ನಾರಾಯಣ ಶೆಟ್ಟಿ ತೋಟ, ಉದ್ಯಮಿ ಸಂತೋಷ್ ಶೆಟ್ಟಿ ಅರೆಬೆಟ್ಟು, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ಬಂಟ್ವಾಳ ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ಗಣೇಶ್ ರೈ ಮಾಣಿ, ನೇರಳಕಟ್ಟೆ ಸಿಎ ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ್ ಚೌಟ, ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ ಉಪಸ್ಥಿತರಿದ್ದರು. ‌
ಪೆರಾಜೆ ಗ್ರಾ.ಪಂ.ಸದಸ್ಯ ರಾಜಾರಾಮ್ ಭಟ್ ಕಡೂರು ಸ್ವಾಗತಿಸಿದರು. ಗಣೇಶ್ ಕೊಳ್ನಾಡು ಕಾರ್ಯಕ್ರಮ ನಿರ್ವಹಿಸಿದರು.

ಉದ್ಘಾಟನೆಗೊಂಡ ಕಾಮಗಾರಿ
10 ಲಕ್ಷ ರೂ. ವೆಚ್ಚದ ಮಾಣಿ ಗ್ರಾಮದ ಮಂಟಮೆ ರಸ್ತೆ ಕಾಂಕ್ರೀಟ್, 10 ಲಕ್ಷ ವೆಚ್ಚದ ಶಂಭುಗ ಬಾಯಿಲ ರಸ್ತೆ ಕಾಂಕ್ರೀಟ್
10 ಲಕ್ಷ ರೂ ವೆಚ್ಚದ ಬದಿಗುಡ್ಡೆ ದೇವಸ್ಥಾನದ ರಸ್ತೆ
10 ಲಕ್ಷ ರೂ.‌ವೆಚ್ಚದ ವಾರಾಟ ಚಾವಡಿ ರಸ್ತೆ
3.20 ಕೋಟಿ ರೂಪಾಯಿ ವೆಚ್ಚದ ಮಾಣಿ ಗ್ರಾಮದ‌ ಅರ್ಬಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು
10 ಲಕ್ಷ ರೂ. ವೆಚ್ಚದ ಕಾಪಿಕಾಡು ರಸ್ತೆ ಕಾಂಕ್ರೀಟ್
10 ಲಕ್ಷರೂ. ವೆಚ್ಚದ ಭರಣಿಕೆರೆ ಪಲ್ಕೆ ರಸ್ತೆ ಕಾಂಕ್ರೀಟ್
10 ಲಕ್ಷ ರೂ. ವೆಚ್ಚದ ಕೋಡಾಜೆ ಪಟ್ಲಕೋಡಿ ರಸ್ತೆ ಕಾಂಕ್ರೀಟ್, 2 ಕೋಟಿ ರೂ. ವೆಚ್ಚದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ರಸ್ತೆ ಕಾಂಕ್ರೀಟ್ ಹಾಗೂ ಇಂಟರ್ ಲಾಕ್ ಅಳವಡಿಕೆ ಕಾಮಗಾರಿ.

whatsapp image 2023 03 20 at 7.04.25 am (1)
whatsapp image 2023 03 20 at 7.04.24 am
whatsapp image 2023 03 20 at 7.04.23 am
Sponsors

Related Articles

Back to top button