ಶ್ರೀ ಮಹಾಕಾಳಿ ನಾಲ್ಕೈತ್ತಾಯ ದೈವಸ್ಥಾನ -ವಿವಿಧ ಧಾರ್ಮಿಕ ಕಾರ್ಯಕ್ರಮ…

ಬಂಟ್ವಾಳ: ಶ್ರೀ ಮಹಾಕಾಳಿ ನಾಲ್ಕೈತ್ತಾಯ ದೈವಸ್ಥಾನ ಮಹಾಕಾಳಿಪಡ್ಪು ಸಜೀಪಮುನ್ನೂರು ಇದರ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಮಾ.8 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿತು.
ವಾರ್ಷಿಕೋತ್ಸವದ ಅಂಗವಾಗಿ ಪುಣ್ಯಾಹ ಪಂಚಗವ್ಯ ದ್ವಾದಶ ನಾಳಿಕೇರ ಗಣಯಾಗ, ದುರ್ಗಾಹೋಮ, ಕಲ್ಪೋಕ್ತ ಪೂಜೆ, ಪ್ರಸನ್ನ ಪೂಜೆ, ಅನ್ನದಾನ, ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಮುಗುಳಿಯ ಶ್ರೀ ಶಾರದಾಂಬೆ ಭಜನಾ ಸಂಗ ಶಾರದಾ ನಗರ, ಶ್ರೀ ಷಣ್ಮುಖ ಸುಬ್ರಹ್ಮಣ್ಯ ಭಜನಾ ಮಂಡಳಿ ಸಜಿಪನಡು, ಶ್ರೀ ಶರಭೇಶ್ವರ ಭಜನಾ ಸಂಘ ಬೊಕ್ಕಸ, ಶ್ರೀ ವಿಷ್ಣುಮೂರ್ತಿ ಭಜನಾ ಸಂಘ ಮಂಜಲ್ ಪಾದೆ ಇವರಿಂದ ಭಜನಾ ಕಾರ್ಯಕ್ರಮ ಜರಗಿತು. ರಾತ್ರಿ ಶ್ರೀದೇವರಿಗೆ ಲಲಿತಾ ಸಹಸ್ರನಾಮಾರ್ಚನೆ, ಸಪ್ತಶತಿ ಪಾರಾಯಣ, ಕಾರ್ತಿಕ ಪೂಜೆ ,ರಂಗಪೂಜೆ ವಿದ್ಯುಕ್ತವಾಗಿ ಜರಗಿತು.

Sponsors

Related Articles

Back to top button