ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಸುಳ್ಯದಲ್ಲಿ ಭವ್ಯ ಸ್ವಾಗತ…..

ಸುಳ್ಯ: ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ಸುಳ್ಯಕ್ಕೆ ಆಗಮಿಸಿದ ನಳಿನ್ ಕುಮಾರ್ ಕಟೀಲ್ ಅವರಿಗೆ ಅದ್ದೂರಿ,ಭವ್ಯ ಸ್ವಾಗತ ನೀಡಲಾಯಿತು.
ಮಡಿಕೇರಿಯಿಂದ ಆಗಮಿಸಿದ ಅವರನ್ನು ಅರಂಬೂರಿನಲ್ಲಿ ಸ್ವಾಗತಿಸಿ, ಮೆರವಣಿಗೆಯ ಮೂಲಕ ಚೆಂಡೆ, ವಾದ್ಯ, ಸಿಡಿ ಮದ್ದಿನ ಅಬ್ಬರದೊಂದಿಗೆ ಬಿಜೆಪಿ ಕಚೇರಿಯ ಬಳಿಯಲ್ಲಿ ಬಿಜೆಪಿ ನಾಯಕರು ಹಾಗು ಕಾರ್ಯಕರ್ತರು ಸ್ವಾಗತಿಸಿದರು. ಬಳಿಕ ಬಿಜೆಪಿ ಕಚೇರಿಯಲ್ಲಿ ಅವರನ್ನು ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಪ್ರಕಾಶ್ ಹೆಗ್ಡೆ ಸನ್ಮಾನಿಸಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಎ.ವಿ.ತೀರ್ಥರಾಮ, ಪಿ.ಕೆ.ಉಮೇಶ್, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಮತ್ತಿತರರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button