ಬಿ.ಸಿ. ರೋಡ್ ಕಲ್ಪನೆಯಲ್ಲಿ ಮಗುಚಿ ಬಿದ್ದ ಎರಡು ಬಸ್ ಗಳು- ಹಲವರಿಗೆ ಗಾಯ, ಮೂವರು ಗಂಭೀರ…

ಬಂಟ್ವಾಳ: ಬಿ.ಸಿ. ರೋಡ್- ಪೊಳಲಿ ರಸ್ತೆಯ ಕಲ್ಪನೆ ತಿರುವಿನಲ್ಲಿ ಎರಡು ಬಸ್ ಗಳು ಪಲ್ಟಿಯಾಗಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು ಅದರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಎರಡೂ ಬಸ್ ಗಳು ಬಿ.ಸಿ .ರೋಡ್ ನಿಂದ ಪೊಳಲಿ ಕಡೆಗೆ ಸಂಚರಿಸುತ್ತಿದ್ದವು. ಇದರಲ್ಲಿ ಒಂದು ಇಲ್ಲಿ ದಿನಂಪ್ರತಿ ಸಂಚರಿಸುವ ರೂಟ್ ಬಸ್ ಮತ್ತು ಇನ್ನೊಂದು ಮದುವೆ ಬಸ್. ಒಂದರ ಹಿಂದೊಂದು ಬರುತ್ತಿದ್ದ ಬಸ್ ಗಳು ಕಲ್ಪನೆ ತಿರುವಿನಲ್ಲಿ ಢಿಕ್ಕಿಯಾದವು. ಮುಂದಿನಿಂದ ಹೋಗುತ್ತಿದ್ದ ರೂಟ್ ಬಸ್ ಗೆ ಹಿಂದಿನಿಂದ ಬರುತ್ತಿದ್ದ ಮದುವೆ ದಿಬ್ಬಣದ ಬಸ್ ಢಿಕ್ಕಿ ಹೊಡೆಯಿತು. ಮದುವೆ ದಿಬ್ಬಣದ ಬಸ್ ಚರಂಡಿಗೆ ಬಿದ್ದರೆ, ರೂಟ್ ಬಸ್ ರಸ್ತೆಯಲ್ಲೇ ಪಲ್ಟಿಯಾಗಿದೆ.
ಗಾಯಗೊಂಡವರನ್ನು 108 ಆಂಬುಲೆನ್ಸ್ ನಲ್ಲಿ ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ನೂರಾರು ಜನರು ಸೇರಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

Sponsors

Related Articles

Leave a Reply

Your email address will not be published. Required fields are marked *

Back to top button