ಬೆಂಗಳೂರು ಪಾದರಾಯನಪುರದಲ್ಲಿ ನಡೆದ ಘಟನೆ- ಟಿ. ಎಂ. ಶಾಹಿದ್ ಖಂಡನೆ….

ಸುಳ್ಯ: ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರು ಮತ್ತು ಬಿಬಿಎಂಪಿ. ಯವರು ಕೊವಿಡ್ -19 ರೋಗ
ಸಂಶಯಿತರನ್ನು ಕ್ವಾರೆಂಟೈನ್ ಗೆ ಪ್ರಯತ್ನ ಮಾಡುವ ಸಂದರ್ಭದಲ್ಲಿ ಆದ ಗಲಭೆಯನ್ನು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ. ಎಂ. ಶಾಹಿದ್ ಖಂಡಿಸಿದ್ದಾರೆ.
ವಿಶೇಷವಾಗಿ ಅಲ್ಪಸಂಖ್ಯಾತರು ಶಾಂತಿಯಿಂದ ಇರಬೇಕು. ಮುಸ್ಲಿಂ ಸಮುದಾಯದ ಕೆಲವರು ಮಾಡುವ ನೀಚ ನಡವಳಿಕೆಯಿಂದ ಇಡೀ ಸಮುದಾಯಯಕ್ಕೆ ಕಳಂಕ ಬರುತ್ತಿದೆ. ಕೆಲವು ಕೋಮು ಶಕ್ತಿಗಳು ಹಾಗು ದೃಶ್ಯ ಮಾಧ್ಯಮಗಳು ಇಂತಹ ಘಟನೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿಜಿ ಹಾಗು ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು ಧರ್ಮ, ಜಾತಿಗಳನ್ನು ನೋಡಿ ಕೊವಿಡ್ -19 ವೈರಸ್ ದಾಳಿ ಮಾಡುವುದಿಲ್ಲ ಎಂದು ತಿಳಿಸಿರುತ್ತಾರೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಕೊವಿಡ್ -19 ಹೆಸರಲ್ಲಿ ಪದೇ ಪದೇ ಅಪಮಾನಿಸುವುದು ಸರಿಯಲ್ಲ ಎಂದು ಮುಸ್ಲಿಂ ಸಮುದಾಯಕ್ಕೆ ವಿಶ್ವಾಸ ಮತ್ತು ಧೈರ್ಯ ವನ್ನು ತುಂಬುವ ಕೆಲಸವನ್ನು ಪ್ರಧಾನಮಂತ್ರಿ ಹಾಗು ಮುಖ್ಯಮಂತ್ರಿ ಯವರು ಮಾಡಿರುವುದು ಶ್ಲ್ಯಾಘನೀಯ. ಅಲ್ಪಸಂಖ್ಯಾತರು, ಮುಸಲ್ಮಾನರು ಸರಕಾರಗಳು ಕೈಗೊಳ್ಳುವ ಎಲ್ಲಾ ಕಾರ್ಯಕ್ರಮ, ತೀರ್ಮಾನಗಳಿಗೆ ಸ್ಪಂದಿಸಬೇಕು ಮತ್ತು ಎಲ್ಲರೂ ಜೊತೆಗೂಡಿ ಕೊವಿಡ್ -19 ಮಹಾಮಾರಿ ವಿರುದ್ಧ ಹೋರಾಟ ಮಾಡಿ ಪ್ರತಿಯೊಬ್ಬರು ಪರಸ್ಪರ ಸಹಕಾರದಲ್ಲಿ ಈ ರೋಗವನ್ನು ಹತೋಟಿಗೆ ತರಲು ಧರ್ಮ, ಜಾತಿ, ಪಕ್ಷ ಭೇದ ಭಾವ ಬಿಟ್ಟು ಕೇಂದ್ರ ಮತ್ತು ರಾಜ್ಯ ಸಹಕಾರಗಳಿಗೆ ಸಹಕರಿಸಬೇಕೆಂದು ಕಾಂಗ್ರೆಸ್ ಮುಖಂಡ ಟಿ. ಎಂ. ಶಾಹಿದ್ ರವರು ವಿನಂತಿಸಿರುತ್ತಾರೆ.

Sponsors

Related Articles

Leave a Reply

Your email address will not be published. Required fields are marked *

Back to top button