ಮಂಗಳೂರು ಏರ್ ಪೋರ್ಟ್‍ನಲ್ಲಿ ಅಕ್ರಮ ಚಿನ್ನ ಸಾಗಾಟ….

ಮಂಗಳೂರು : ರೂ. 26,30,750 ಮೌಲ್ಯದ 619 ಗ್ರಾಂ, 24 ಕ್ಯಾರೆಟ್‌ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ಉಪ್ಪಳ ನಿವಾಸಿ ಮೊಯಿದ್ದೀನ್‌‌‌ ಅರ್ಝಾನ್‌‌ ಎಂದು ಗುರುತಿಸಲಾಗಿದೆ.
ದುಬೈಯಿಂದ ಆಗಮಿಸಿದ ಏರ್‌‌ ಇಂಡಿಯಾ ವಿಮಾನದಿಂದ ಬಂದಿಳಿದ ಈತ ತನ್ನ ಗುದದ್ವಾರದೊಳಗೆ ರಬ್ಬರ್‌‌ ಕ್ಯಾಪ್ಸುಲ್‌‌ಗಳಲ್ಲಿ ಪೇಸ್ಟ್‌‌ ರೂಪದಲ್ಲಿ ಅಡಗಿಸಿಟ್ಟ ಚಿನ್ನವನ್ನು ಸಾಗಾಟ ಮಾಡುತ್ತಿದ್ದ. ಆರೋಪಿಯನ್ನು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button