ಮಂಗಳೂರು ,ಕಾಸರಗೋಡಿನಲ್ಲಿ ಕೊರೊನಾ ಪ್ರಕರಣ ಪತ್ತೆಯಿಲ್ಲ…
ಮಂಗಳೂರು : ಮಾ. 25ರ ಬುಧವಾರ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕೊರೊನಾ ದೃಢವಾದ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.
ಈ ಹಿಂದೆ ಮಂಗಳೂರಿನಲ್ಲಿ ಐದು ಪ್ರಕರಣಗಳು ವರದಿಯಾಗಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 44 ಕ್ಕೆ ತಲುಪಿತ್ತು. ಬುಧವಾರ ಕರ್ನಾಟಕದಲ್ಲಿ 10 ಮತ್ತು ಕೇರಳದಲ್ಲಿ ಒಂಬತ್ತು ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಇವುಗಳಲ್ಲಿ ಕಾಸರಗೋಡು ಮತ್ತು ದ.ಕ ಜಿಲ್ಲೆಯ ಪ್ರಕರಣಗಳಿಲ್ಲ.