ಮಂಗಳೂರು ಪಡೀಲ್ ನ ಖಾಸಗಿ ಆಸ್ಪತ್ರೆ ಸುತ್ತಮುತ್ತ ಕಂಟೈನ್ ಮೆಂಟ್ ವಲಯ….

ಮಂಗಳೂರು: ಬಂಟ್ವಾಳ ಪೇಟೆಯ ಮೃತ ಮಹಿಳೆಯ ಅತ್ತೆ ಚಿಕಿತ್ಸೆ ಪಡೆಯುತ್ತಿದ್ದ ಪಡೀಲ್ ಸಮೀಪದ ಖಾಸಗಿ ಆಸ್ಪತ್ರೆಯ ಸೀಮಿತ ಪ್ರದೇಶವನ್ನು ಕಂಟೈನ್ ಮೆಂಟ್ ವಲಯ ಎಂದು ಘೋಷಿಸುವ ಮೂಲಕ ಎಲ್ಲಾ ಚಟುವಟಿಕೆಗಳಿಗೆ ದ.ಕ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.
ಮೃತ ಮಹಿಳೆಯ ಅತ್ತೆ ಕಳೆದ ಒಂದು ತಿಂಗಳಿಂದ ಪಾರ್ಶ್ವವಾಯು ಪೀಡಿತರಾಗಿ ಪಡೀಲ್ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಮೃತ ಮಹಿಳೆಯ ಅತ್ತೆಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಮುಂಜಾಗ್ರತಾ ಕ್ರಮವಾಗಿ ಸೋಂಕು ವ್ಯಾಪ್ತಿಸದಂತೆ ವೃದ್ಧೆ ಚಿಕಿತ್ಸೆಗೆ ದಾಖಲಾಗಿದ್ದ ಖಾಸಗಿ ಆಸ್ಪತ್ರೆಯನ್ನು “ಸುಪರ್ವೈಸ್ಡ್ ಐಸೋಲೆಟೆಡ್ ಸೆಂಟರ್” ಆಗಿ ಗುರುತಿಸಲಾಗಿದೆ. ಹೀಗಾಗಿ ಸೀಲ್ ಡೌನ್ ವೇಳೆ ಆಸ್ಪತ್ರೆಯಲ್ಲಿದ್ದ ರೋಗಿ, ಸಿಬ್ಬಂದಿ ,ವೈದ್ಯರು , ನರ್ಸ್ ಸೇರಿದಂತೆ ಆಸ್ಪತ್ರೆಯಿಂದ ಹೊರಬರುವಂತಿಲ್ಲ. ಹಾಗೂ ಯಾರು ಕೂಡಾ ಒಳಹೋಗುವಂತಿಲ್ಲ . ಆಸ್ಪತ್ರೆಯಲ್ಲಿ ಸೀಲ್ ಡೌನ್ ವೇಳೆ ಇದ್ದವರಿಗೆ ಆಹಾರ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಲಿದೆ ಎಂದು ತಿಳಿದುಬಂದಿದೆ

ಅಲ್ಲದೆ ಈ ಆಸ್ಪತ್ರೆಗೆ ಹೊಂದಿಕೊಂಡಿರುವ ಸೀಮಿತ ಪ್ರದೇಶವನ್ನು ಕಂಟೈನ್ ಮೆಂಟ್ ವಲಯವಾಗಿ ಘೋಷಿಸಲಾಗಿದೆ. ಹೀಗಿರುವಾಗ ಇನ್ಮುಂದೆ ಈ ವಲಯದಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಮನೆಯಿಂದ ಯಾರು ಹೊರಗೆ ಹೋಗುವಂತಿಲ್ಲ ಮತ್ತು ಹೊರಗಡೆಯಿಂದ ಈ ಪ್ರದೇಶಕ್ಕೆ ಬರುವುದನ್ನು ಸಂಪೂರ್ಣ ತಡೆಹಿಡಿಯಲಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button