ಮಂತ್ರದೇವತಾ ಕ್ಷೇತ್ರ ಸಾನಿಧ್ಯ, ಕಟ್ಟೆಮಾರ್- ಪುನರ್ ಪ್ರತಿಷ್ಠಾ ಕಲಶಾಭಿಷೇಕ….
ಬಂಟ್ವಾಳ: ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯ, ಕಟ್ಟೆಮಾರ್ ಅಮ್ಟೂರು ಪುನರ್ ಪ್ರತಿಷ್ಠಾ ಕಲಶಾಭಿಷೇಕದ ಧಾರ್ಮಿಕ ಸಭಾ ಕಾರ್ಯಕ್ರಮವನ್ನುವಿವೇಕಾನಂದ ವಿದ್ಯವರ್ಧಕ ಸಂಘದ ಅಧ್ಯಕ್ಷ ಡಾl ಕಲ್ಲಡ್ಕ ಪ್ರಭಾಕರ ಭಟ್ ಉಧ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಕೃತಿಯನ್ನು ಪೂಜಿಸುವ ದೇಶ ನಮ್ಮದು, ಮಹಿಳೆಯರಿಗೆ ದೇವತಾ ಸ್ಥಾನ ಕೊಟ್ಟ ದೇಶ ನಮ್ಮದು, ದೇಶದ ಪ್ರಸ್ತುತ ವಿದ್ಯಮಾನದ ಬಗ್ಗೆ ಜಾಗ್ರತರಾಗಬೇಕು, ಮತ್ತು ದೈವ ದೇವರ ಬಗ್ಗೆ ನಂಬಿಕೆ ಹುಟ್ಟಿಸುವ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೋಹನ್ ರಾಜ ಚೌಟ ಪುಂಚೋಲಿಮಾರ್ ಗುತ್ತು ಮಾತನಾಡಿ, ನಮ್ಮ ಜೀವನ ನಂಬಿಕೆಯ ಮೇಲೆ ನಿಂತಿದೆ, ನಂಬಿಕೆ ಕಡಿಮೆಯಾದಾಗ ಅದು ಸಂಘರ್ಷಕ್ಕೆ ದಾರಿಯಾಗುತ್ತದೆ. ಆದ್ದರಿಂದ ಸಮಾಜದಲ್ಲಿ ನಂಬಿಕೆಯೇ ಮೂಲ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಶಾಸಕರಾದ ಎ ರುಕ್ಮಯ ಪೂಜಾರಿ ಮಾತನಾಡಿ, ಶ್ರೀ ಮಂತ್ರ ದೇವತಾ ಸಾನಿಧ್ಯ ಕೇವಲ ಒಂದು ಮನೆಗೆ ಸೀಮಿತವಾಗಿರದೆ ಎಲ್ಲರ ಆರಾಧನೆಯ ಸ್ಥಳವಾಗಬೇಕು ಎಂದು ಹಾರೈಸಿದರು.
ಕ್ಷೇತ್ರದ ಪ್ರಮುಖರಾದ ಮನೋಜ್ ಕುಮಾರ್ ಕಟ್ಟೆಮಾರ್ ಕ್ಷೇತ್ರದ ಸಾನಿಧ್ಯದ ಹಿನ್ನಲೆಯ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ರವೀಂದ್ರ ಪೂಜಾರಿ ಬದನಾಡಿ ಅಧ್ಯಕ್ಷರು, ಶ್ರೀ ನಾಗಬ್ರಹ್ಮ ಸುಬ್ರಮಣ್ಯ ಭಜನಾ ಮಂಡಳಿ ಬದನಾಡಿ
ವಿದ್ಯಾಧರ ಪೂಜಾರಿ ನಿವೃತ್ತ ಯೋಧರು, ಸಂಚಾಲಕರು ಬಿರುವೆರ್ ಕಡೇಶಿವಾಲಯ, ಅಶೋಕ್ ಕರ್ಕೇರಾ ಬಂಟ್ವಾಳ
ಸಾಮಾಜಿಕ ಮುಖಂಡರು, ಮುಂಬೈ, R. ಚೆನ್ನಪ್ಪ ಕೋಟ್ಯಾನ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಅಧ್ಯಕ್ಷರು, ಶ್ರೀರಾಮ ಮಂದಿರ, ಕಲ್ಲಡ್ಕ , ದಿನೇಶ್ ಸುವರ್ಣ ರಾಯಿ ತುಳು ನಿರೂಪಕರು ಇವರನ್ನು ಸನ್ಮಾನಿಸಲಾಯಿತು
ಶ್ರೀಮತಿ ನಾಗಮ್ಮ ಶಾಂತಿಪಲ್ಕೆ, ಶ್ರೀಮತಿ ಲೀಲಾವತಿ ರಾಯಪ್ಪಕೋಡಿ, ಶ್ರೀಮತಿ ಸೀತು ಪೊಯ್ಯೇಕಂಡ ಅಮ್ಟೂರ್ ಶ್ರೀ ಉಮೇಶ್ ತಾರಾಬರಿ ಅಮ್ಟೂರ್, ಲಿಂಗಪ್ಪ ಪೂಜಾರಿ ಕರಿಂಗಾಣ, ವೆಂಕಪ್ಪ ಶೆಟ್ಟಿಗಾರ್ ಅಮ್ಟೂರ್, ಗಣೇಶ್ ಶೆಟ್ಟಿ ಬಾಳಿಕೆ, ಅಚ್ಚು ಪೆಲತಕಟ್ಟೆ ಸಜಿಪ ಇವರಿಗೆ ಧನಸಹಾಯ ನೀಡಲಾಯಿತು
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರಖ್ಯಾತ ಅತಿಥಿ ಕಲಾವಿದರಿಂದ ಯಕ್ಷಗಾನ ಹಾಸ್ಯ ವೈಭವ ಕಾರ್ಯಕ್ರಮದಲ್ಲಿ ಪ್ರಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ರವೀಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರು ,ಇವರ ಗಾನ ಜುಗಲ್ಬಂದಿ ಹಾಗೂ ಹಾಸ್ಯ ಕಲಾವಿದರಾದ ಅರವಿಂದ ಬೋಲಾರ್, ದಿನೇಶ್ ಶೆಟ್ಟಿಗಾರ್ ಕೊಡಪದವು ,ರಾಜೇಶ್ ನಿಟ್ಟೆ ಇವರ ಹಾಸ್ಯ ತುಣುಕುಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು .ಬಳಿಕ ಶ್ರೀ ಚಿಂತಾಮಣಿ ಡಾನ್ಸ್ ಗ್ರೂಪ್, ಮತ್ತು ಟೀಮ್ ಡಿವೈನ್ ಬಿ ಸಿ ರೋಡ್ ನಿಂದ ಡಾನ್ಸ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉದ್ಯಮಿ ವಿಜಯ ಬಂಗೇರ ಮುಂಬೈ, ಶ್ರೀ ಸೀತಾರಾಮ ಮಂಗಳೂರು,ಮುಂಬೈಯ ಸಾಮಾಜಿಕ ಮುಖಂಡರಾದ ಅಶೋಕ ಕರ್ಕೇರ ಬಂಟ್ವಾಳ. ಉದ್ಯಮಿ ಹರೀಶ್ ಶೆಟ್ಟಿ ಮುಂಬೈ, ಯುವ ಉದ್ಯಮಿ ಜಗದೀಶ್ ಬಜ್ಜರ್ ಅಮ್ಟೂರ್, ಶೈಲೇಶ್ ಪೂಜಾರಿ ಕುಟ್ಟಿಗುಡ್ಡೆ ಶೈಲೇಶ್ ಮೆಲ್ಕಾರ್, ಸಂತೋಷ ಪೂಜಾರಿ ಮುಂಬೈ, ಲಕ್ಷ್ಮಣ ಪೂಜಾರಿ ಇರುವೈಲ್ ಉದ್ಯಮಿ ಮುಂಬೈ ಉಪಸ್ಥಿತರಿದ್ದರು ,
ಚೆನ್ನಪ್ಪ ಕೋಟ್ಯಾನ್ ಸ್ವಾಗತಿಸಿದರು, ವಸಂತ ಪೂಜಾರಿ, ಬಟ್ಟೆಹಿತ್ಲು ಧನ್ಯವಾದ ಸಮರ್ಪಿಸಿದರು, ದಿನೇಶ್ ಸುವರ್ಣ ರಾಯಿ ನಿರೂಪಿಸಿದರು . ಬಳಿಕ ಶ್ರೀ ಮಂತ್ರದೇವತೆ ಹಾಗೂ ಗುಳಿಗ ದೈವಗಳಿಗೆ ಕೋಲ ಉತ್ಸವ ಜರಗಿತು.