`ಮಹಿಳೆ ಮತ್ತು ಕಾನೂನು’ ಮಾಹಿತಿ ಕಾರ್ಯಾಗಾರ-ಮಹಿಳಾ ರಕ್ಷಣೆ ಕಾನೂನುಗಳ ಅರಿವು ಅಗತ್ಯ: ಸಿಲ್ವಿಯಾ ಡಿಸೋಜಾ…..
ಪುತ್ತೂರು: ಮಹಿಳೆಯರ ರಕ್ಷಣೆಗೆ ಸಂವಿಧಾನದಲ್ಲಿ ಹಲವು ಕಾನೂನುಗಳು ಇವೆ. ಆದರೆ ಅದರ ಅರಿವಿರುವವರು ಬಹಳ ವಿರಳ. ಸ್ತ್ರೀ ಸಬಲೀಕರಣದ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಹಲವು ಕಾನೂನಿನ ಸೌಲಭ್ಯಗಳು ಇದೆ. ಅನ್ಯಾಯದ ವಿರುದ್ಧ ಧ್ವನಿ ಎನ್ನುವುದರ ಮೂಲಕ ಎಲ್ಲಾ ರೀಯ ಕಾನೂನುಗಳನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಪುತ್ತೂರಿನ ನೋಟರಿ, ನ್ಯಾಯವಾದಿ ಸಿಲ್ವಿಯಾ ಡಿ ಸೋಜಾ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ಐಕ್ಯುಎಸಿ, ಮಹಿಳಾ ವಿದ್ಯಾರ್ಥಿನಿಯರ ಹಿತರಕ್ಷಣಾ ಘಟಕದ ಸಹಯೋಗದಲ್ಲಿ ಸೋಮವಾರ ನಡೆದ `ಮಹಿಳೆ ಮತ್ತು ಕಾನೂನು’ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಮನುಷ್ಯನಲ್ಲಿ ಬಂದ ಕೆಟ್ಟ ಭಾವನೆ, ಆಲೋಚನೆ ಕಾನೂನು ಸೃಷ್ಟಿಯಾಗಲು ಕಾರಣವಾಯಿತು. ಹೃದಯದಿಂದ ವಿಚಾರಗಳು ಹೊರಹೊಮ್ಮಿದರೆ ಅಲ್ಲಿ ನ್ಯಾಯದ ಅಗತ್ಯವಿಲ್ಲ. ಆದರೆ ಬುದ್ಧಿಯಿಂದ ಆಲೋಚನೆ ಬಂದಾಗ ಕಾನೂನಿನ ಅಗತ್ಯವಿರುತ್ತದೆ. ಬಾಲ್ಯದಲ್ಲಿ ಮಕ್ಕಳು ಕೊಳಕಾದ ಬಟ್ಟೆಯನ್ನು ಹಾಕುತ್ತಿದ್ದರೂ ಅವರ ಮನಸ್ಸು ಶುದ್ಧವಾಗಿತ್ತು, ಆದರೆ ಬೆಳೆಯುತ್ತಾ ಮನುಷ್ಯ ತನ್ನ ಬಟ್ಟೆಯನ್ನು ಶುಭ್ರಗೊಳಿಸಿದ ಆದರೆ ಮನಸ್ಸು ಕಲ್ಮಶಗಳಿಂದ ತುಂಬಿದವು. ಕಾನೂನು ಎಂಬುವುದು ಎಲ್ಲರ ರಕ್ಷಣೆಗೆಯ ಅಡಿಪಾಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ, ಮಹಿಳಾ ಘಟಕದ ಸಂಯೋಜಕಿ ಡಾ. ಗೀತಾ ಕುಮಾರಿ ಟಿ., ವಿದ್ಯಾರ್ಥಿ ಸಂಘದ ಸಹ ಕಾರ್ಯದರ್ಶಿ ಲಿಖಿತಾ ಉಪಸ್ಥಿತರಿದ್ದರು.
ಮಹಿಳಾ ವಿದ್ಯಾರ್ಥಿನಿಯರ ಹಿತರಕ್ಷಣಾ ಘಟಕದ ಸಂಯೋಜಕಿ ರೇಖಾ ಪಿ. ಸ್ವಾಗತಿಸಿದರು. ಐಕ್ಯುಎಸಿ ಸಂಯೋಜಕ ಡಾ. ಹೆಚ್. ಜಿ. ಶ್ರೀಧರ್ ಪ್ರಸ್ತಾವನೆಗೈದರು. ಮಹಿಳಾ ವಿದ್ಯಾರ್ಥಿನಿಯರ ಹಿತರಕ್ಷಣಾ ಘಟಕದ ಸಂಯೋಜಕಿ ಮೋತಿ ಬಾೈ ವಂದಿಸಿದರು. ಮಹಿಳಾ ವಿದ್ಯಾರ್ಥಿನಿಯರ ಹಿತರಕ್ಷಣಾ ಘಟಕದ ಸಂಯೋಜಕಿ ವಿಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.