ಮಾಣಿಯ ಕರ್ನಾಟಕ ಪ್ರೌಢ ಶಾಲೆಯಲ್ಲಿ ಹಿಂದಿ ದಿನಾಚರಣೆ…
ಬಂಟ್ವಾಳ:ಹಿಂದಿ ಭಾರತ ಮಾತೆಯ ಬಿಂದಿ , ಈ ಸರಳ-ಸುಂದರ ಭಾಷೆಯಲ್ಲಿ ಹೆಚ್ಚು ಅಂಕಗಳಿಸಿದಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸ ಬಹುದು ಎಂದು ಸರಕಾರಿ ಪ್ರೌಢ ಶಾಲೆ ಸಿದ್ದಕಟ್ಟೆಯ ಮುಖ್ಯೋಪಾಧ್ಯಾಯ ರಮಾನಂದ ರವರು ನುಡಿದರು.
ಅವರು ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ನಡೆದ ಹಿಂದಿ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀ ಗಂಗಾಧರ ರೈ ಇವರನ್ನು ಸನ್ಮಾನಿಸಲಾಯಿತು. ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಗಳಿಸಿದ ಮತ್ತು ವಿವಿಧ ಸ್ಫರ್ಧೆಗಳ ವಿಜೇತ, ಅವಿರತ ಶ್ರಮಿಸಿದ ಸುಮಾರು 50 ವಿದ್ಯಾರ್ಥಿಗಳಿಗೆ ಸರಣಿಕೆ ನೀಡಿ ಗೌರವಿಸಲಾಯಿತು. ಮುಖ್ಯೋಪಾಧ್ಯಾಯರಾದ ಬಿ ಕೆ ಭಂಡಾರಿಯವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಎಂ ಕೆ ಬಾಲಕೃಷ್ಣ, ಎಸ್ ಕೃಷ್ಣ ಭಟ್, ಐ ಜಯಲಕ್ಷ್ಮೀ , ಚೆನ್ನಪ್ಪ ಗೌಡ, ಶ್ಯಾಮಲಾ ಕೆ , ಅಭಿಲಾಷ್, ನಯನ ಎಸ್, ಸುಶ್ಮಿತಾ ಉಪಸ್ಥಿತರಿದ್ದರು. ಹಿಂದಿ ಶಿಕ್ಷಕರಾದ ಜಯರಾಮ ಕೆ ಸ್ವಾಗತಿಸಿ, ಅಧ್ಯಕ್ಷೆ ಅನನ್ಯ ವಂದಿಸಿದರು. ಕುಮಾರ್ ಅವಿನಾಶ್ ಕಾರ್ಯಕ್ರಮ ನಿರೂಪಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.