ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಉಧ್ಘಾಟನೆ….

ಬಂಟ್ವಾಳ: ಮಾಣಿ ಪರಿಸರದ ಜನವಸತಿಗಳಿಗೆ ಶುದ್ಧ ಕುಡಿಯುವ ನೀರಿನ್ನು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಶುಕ್ರವಾರ ಉದ್ಘಾಟಿಸಿದರು.
ಕಡೇಶ್ವಾಲ್ಯ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನದ ಬಳಿ ನೇತ್ರಾವತಿ ನದಿಯಿಂದ ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿಯಾರದ ನೀರು ಶುದ್ಧೀಕರಣ ಘಟಕಕ್ಕೆ 175ಹೆಚ್‍ಪಿ ಪಂಪ್‍ನ ಮೂಲಕ ನೀರನ್ನು ಸರಬರಾಜು ಮಾಡಲಾಗುವುದು. ಮಾಣಿ, ಪೆರಾಜೆ,ಅನಂತಾಡಿ, ನೆಟ್ಲಮುಡ್ನೂರು , ಕಡೇಶ್ವಾಲ್ಯ, ಬರಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 51 ಜನ ವಸತಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತದೆ. 1,646.70 ಲಕ್ಷ ಅಂದಾಜು ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ನಿರ್ಮಿಸಲಾಗಿದೆ.
ಉದ್ಘಾಟನಾ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು. , ಸಂಸದ ನಳಿನ್ ಕುಮಾರ್ ಕಟೀಲು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ.ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ , ಉಪಾಧ್ಯಕ್ಷ ಅಬ್ಬಾಸ್ ಆಲಿ, ಪ್ರಮುಖರಾದ ಜಿ.ಪಂ. ಸದಸ್ಯ ಮಂಜುಳಾ ಮಾಧವ ಮಾವೆ, ಕಮಲಾಕ್ಷಿ ಕೆ. ಪೂಜಾರಿ, ಗ್ರಾ.ಪಂ ಅಧ್ಯಕ್ಷರಾದ ಮಮತ ಎಸ್.ಶೆಟ್ಟಿ ಮಾಣಿ, ಪುಷ್ಪ ಪೆರಾಜೆ, ಸನತ್ ಕುಮಾರ್ ರೈ ಅನಂತಾಡಿ, ವಿಜಯ ನೆಟ್ಲಮುಡ್ನೂರು , ಶ್ಯಾಮಲ ಶೆಟ್ಟಿ ಕಡೇಶ್ವಾಲ್ಯ, ವಸಂತ ಪೂಜಾರಿ ಬರಿಮಾರು, ತಾ.ಪಂ ಸದಸ್ಯೆ ಮಂಜುಳಾ ಕುಶಲ ಪೆರಾಜೆ ಮತ್ತು ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ಪ್ರಮುಖರಾದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಮೋನಪ್ಪ ದೇವಸ್ಯ , ಹರಿಕೃಷ್ಣ ಬಂಟ್ವಾಳ, ಪುಷ್ಪರಾಜ್ ಚೌಟ ಮಾಣಿ, ನಾರಾಯಣ ಸಪಲ್ಯ ಕಡೇಶ್ವಾಲ್ಯ, ಸುಲೋಚನ ಜಿ.ಕೆ.ಭಟ್, ತನಿಯಪ್ಪ ಗೌಡ, ತೋಟ ನಾರಾಯಣ ಶೆಟ್ಟಿ, ರಾಘವ ಏನಾಜೆ, ಗ್ರಾ.ಪಂ ಉಪಾಧ್ಯಕ್ಷೆ ಗುಲಾಬಿ, ಗ್ರಾ.ಪಂ ಸದಸ್ಯ ಉಮೇಶ ಎಸ್.ಪಿ., ಶ್ರೀನಿವಾಸ ಪೂಜಾರಿ ಪೆರಾಜೆ , ರಾಜಾರಾಮ ಕಾಡೂರು, ಸದಾಶಿವ ಬರಿಮಾರು ಮೊದಲಾದವರು ಭಾಗವಹಿಸಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button