ಮೊಹಿಯುದ್ದೀನ್ ಜುಮ್ಮಾ ಮಸೀದಿ ಪೇರಡ್ಕ – ಗಣರಾಜ್ಯೋತ್ಸವ ದಿನಾಚರಣೆ…
ಸುಳ್ಯ: ಮೊಹಿಯುದ್ದೀನ್ ಜುಮ್ಮಾ ಮಸೀದಿ ಪೇರಡ್ಕ ಹಾಗು ತೆಕ್ಕಿಲ್ ಮೊಹಮ್ಮದ್ ಹಾಜಿ ಸ್ಮಾರಕ ತಕ್ವಿಯತುಲ್ ಇಸ್ಲಾಂ ಮದರಸ ಪೇರಡ್ಕದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಜಮಾತ್ ಉಪಾಧ್ಯಕ್ಷರಾದ ಸಾಜಿದ್ ಅಝ್ಹರಿ ಅಧ್ಯಕ್ಷತೆ ವಹಿಸಿದ್ದರು.
ಮಸೀದಿಯ ಗೌರವಾಧ್ಯಕ್ಷ, ತೆಕ್ಕಿಲ್ ಪ್ರತಿಷ್ಠಾನದ ಸಂಸ್ಥಾಪಕರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಧ್ವಜಹಾರೋಣಗೈದು ಮಾತನಾಡಿ, ದೇಶ ಪ್ರೇಮ ಕೂಡ ಇಸ್ಲಾಮಿನ ಒಂದು ಭಾಗವಗಿದ್ದು ನೈಜ ಮುಸ್ಲಿಂ ದೇಶದ್ರೋಹಿ ಆಗಲಿಕ್ಕೆ ಸಾಧ್ಯವಿಲ್ಲ. 74 ನೇ ಗಣರಾಜ್ಯೋತ್ಸವ ದೇಶದ ಅಖಂಡತೆ ಐಕ್ಯತೆಗೆ ಮಾದರಿಯಾಗಲಿ. ಬಾಬಾ ಸಾಹೇಬ್ ಅಂಬೇಡ್ಕರ್ ಗಾಂಧೀಜಿ ಅಜಾದ್ ಬಗ್ಗೆ ವಿವರಿಸಿ ಗಣರಾಜೋತ್ಸವದ ಬಗ್ಗೆ ತಿಳಿಸಿದರು.
ಮಸೀದಿಯ ಖತೀಬ್ ಉಸ್ತಾದರಾದ ರಿಯಾಜ್ ಫೈಝಿ ಅವರು ಮದರಸ ವಿದ್ಯಾರ್ಥಿಗಳಿಗೆ ದುವಾ ಗೈದು ಪ್ರತಿಜ್ಞಾ ವಾಕ್ಯ ಭೋದಿಸಿದರು.ನಾನೊಬ್ಬ ಮುಸಲ್ಮಾನ.ನಾನೊಬ್ಬ ಭಾರತೀಯ. ಸ್ವದೇಶ ಪ್ರೇಮ ವಿಶ್ವಾಸದ ಭಾಗವೆಂದು ಕಲಿಸಿದ ಧರ್ಮದ ಅನುಯಾಯಿ ಎಂಬ ನಿಟ್ಟಿನಲ್ಲಿ, ನನ್ನ ದೇಶದ ಐಕ್ಯತೆ ಹಾಗೂ ಅಖಂಡತೆಗಾಗಿ ನಾನು ಪ್ರಯತ್ನಿಸುತ್ತೇನೆ. ಎಲ್ಲ ಭಾರತೀಯರನ್ನು ನನ್ನ ಸಹೋದರರಂತೆ ಪ್ರೀತಿಸುವೆನು ಮತ್ತು ಗೌರವಿಸುವೆನು. ನನ್ನ ಭಾರತ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ. ಖಂಡಿತವಾಗಿಯೂ ನಾನೂ ಅದರಲ್ಲಿ ಭಾಗಿಯಾಗುವೆನು.ನನ್ನ ವಿಶ್ವಾಸಾಚರಣೆಗಳನ್ನು ನೆಲೆನಿಲ್ಲಿಸಿಕೊಂಡು ಇತರ ಧರ್ಮೀಯರನ್ನು ಗೌರವಿಸುತ್ತಾ ಈ ಗಣರಾಜ್ಯೋತ್ಸವದ ಸುದಿನದಲ್ಲಿ ಉಗ್ರವಾದ , ಕೋಮುವಾದಗಳಿಂದ ಈ ದೇಶದ ಸುರಕ್ಷತೆಗಾಗಿ ಈ ಕೈಗಳೆತ್ತಿ ನಾನು ಪ್ರತಿಜ್ಞೆ ಮಾಡುವೆನು ಎಂದು ಪ್ರತಿಜ್ಞಾ ವಾಕ್ಯ ಭೋದಿಸಲಾಯಿತು .
ನಮ್ಮ ಪೂರ್ವಜರ ನಾಡು ಭಾರತದಲ್ಲಿ ಪರಂಪರೆಯನ್ನು ಉಳಿಸೋಣ, ಪವಿತ್ರ ಸುಸಂಸ್ಕೃತ ಈ ನೆಲದಲ್ಲಿ ಜಾತ್ಯಾತೀತತೆಯನ್ನು ಬೆಳೆಸೋಣ ಭಾರತದಲ್ಲಿ ಒಂದಾಗೋಣ,
ಗಾಂಧೀಜಿ ನೆಹರು ಆಜಾದರು
ಸಹೋದರರಾದ ಅಲಿಯರು
ಸಹಸ್ರಾರು ಮಂದಿ ಯೋಧರು
ಪ್ರಾಣವ ನೀಡಿ-ರಕ್ತವ ನೀಡಿ
ಗಳಿಸಿದ ಸ್ವಾತಂತ್ರ್ಯವನ್ನು
ಕಣ್ಮಣಿ ಯಂತೆ ಕಾಯೋಣ ಭಯೋತ್ಪಾದಕ ಚಿಂತನೆ, ಕೋಮುವಾದ ಬೇಡ,
ಭಾರತ ನಾಡಿನಲ್ಲಿ ಶಾಂತಿ ಪಸರಿಸಲು,
ಬಾಲ್ಯದ ಮನದಲ್ಲಿ ಸೌಹಾರ್ದ
ಬಾಲ ಭಾರತ ನಿರ್ಮಾಣ ಮಾಡೋಣ ಎಂದು ಪ್ರತಿಜ್ಞೆ ಬೋದಿಸಿದರು.
ಮದರಸ ವಿದ್ಯಾರ್ಥಿಗಳ ಸಹಿತ ಎಲ್ಲರು ಪ್ರತಿಜ್ಞೆ ಸ್ವೀಕರಿಸಿದರು
ಕಾರ್ಯಕ್ರಮದಲಿ ಸಹ ಅಧ್ಯಾಪಕರಾದ ಹಂಝ ಮುಸ್ಲಿಯಾರ್, ತೆಕ್ಕಿಲ್ ಮೊಹಮ್ಮದ್ ಕುಂಞಿ ಪೇರಡ್ಕ , ಇಬ್ರಾಹಿಂ ಶೆಡ್ಯಡ್ಕ , ಮಸೀದಿ ಕಾರ್ಯದರ್ಶಿ ಟಿ ಎಂ ರಜಾಕ್ ಹಾಜಿ , ಅಶ್ರಫ್ ತೆಕ್ಕಿಲ್ ಪೇರಡ್ಕ , ಯಾಸಿರ್ ಅರ್ಫಾತ್ ದರ್ಖಾಸ್ , ಅಲ್ತಾಫ್ ಗೂನಡ್ಕ , ಪಾಂಡಿ ಉಸ್ಮಾನ್ , ಶಂಶುದ್ಧೀನ್ ದರ್ಖಾಸ್ , ಸಲಾಂ ದರ್ಖಾಸ್ , ಖಾಜ ಪೆರುಂಗೋಡಿ , ಇಬ್ರಾಹಿಂ ನಡುಬೈಲ್ , ಶಾಹಿಲ್ ದರ್ಖಾಸ್ , ಪಿ ಕೆ ಅಬ್ದುಲ ಪೇರಡ್ಕ ಹಾಗೂ ಮದರಸ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.