ಯೆನೆಪೋಯ ತಾಂತ್ರಿಕ ವಿದ್ಯಾಲಯದಲ್ಲಿ ಅಧ್ಯಾಪನಾ ಕೌಶಲ್ಯಭಿವೃದ್ಧಿ ಕಾರ್ಯಕ್ರಮ…..

ಮೂಡಬಿದ್ರೆ: ಯೆನೆಪೋಯ ತಾಂತ್ರಿಕ ವಿದ್ಯಾಲಯದ ಯಾಂತ್ರಿಕ ವಿಭಾಗವು, ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಸಹಯೋಗದೊಂದಿಗೆ “ರಿಸರ್ಚ್ ಟೂಲ್ಸ್ ಅಂಡ್ ಟೆಕ್ನಿಕ್ಸ್” ಕುರಿತು 5 ದಿನಗಳ ಕಾರ್ಯಾಗಾರವನ್ನು ಆಯೋಜಿಸುತ್ತಿದೆ. ಈ ಕಾರ್ಯಾಗಾರವನ್ನು ಜನವರಿ 27, 2020 ರಂದು ಯೆನೆಪೋಯ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲರಾದ ಡಾ। ಆರ್ ಜಿ ಡಿಸೋಜಾ ಅವರು ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು. ಡಾ। ಶ್ರೀರಂಗ ಭಟ್ ಪ್ರಾಧ್ಯಾಪಕರು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ಕಾರ್ಯಾಗಾರದ ಮೊದಲ ದಿನ ಶ್ರೀ। ರಂಗಭಟ್ ಅವರಿಂದ “ಡೀಸೈನ್ ಆಫ್ ಏಕ್ಸಫೇರಿಮೆಂಟ್” ಕುರಿತು 2ನೇ ದಿನದಂದು ಡಾ। ಎಸ್ ಆರ್ ಕಾರ್ನಿಕ್ ಅವರಿಂದ “ಇಂಟಲಿಜೆಂಟ್ ಓಪ್ಟಿಮೈಸೇಶನ್ ಆಲ್‍ಗೋರಿದಂ” 3ನೇ ದಿನದಂದು ಡಾ। ಕಾಡದೇವರಮಠ್ ಅವರಿಂದ “ಓಪ್ಟಿಮೈಸೇಶನ್ ಟೂಲ್ಸ್”, ಅಪರಾಹ್ನ ಯೆನೆಪೋಯ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲರಾದ ಡಾ। ಆರ್। ಜಿ। ಡಿಸೋಜಾ ಅವರಿಂದ “ಲಿಟರೆಚರ್ ರಿವಿವ್ ಟು ಪ್ರಾಬ್ಲಮ್ ಸ್ಟೇಟ್‍ಮೆಂಟ್ ಫಾರ್ಮುಲೇಶನ್”, 4ನೇ ದಿನದಂದು ಡಾ। ಶ್ರೀಕಾಂತ್ ಪ್ರಭು ಅವರಿಂದ “ಆರ್‍ರ್ಟಿಫೀಶಲ್ ನ್ಯೂರಲ್ ನೆಟ್‍ವರ್ಕ್” 5ನೇ ದಿನದಂದು ಡಾ। ಶ್ರೀನಿವಾಸ್ ಸಿ।ಜಿ ಅವರಿಂದ “ರಿಸರ್ಚ್‍ಸ್ಕಿಲ್ಸ್” ಕುರಿತು ಪ್ರವಚನ ಮತ್ತು ಪ್ರಾತ್ಯಕ್ಷಿಕೆ ಇರಲಿದೆ.
ಈ 5 ದಿನಗಳ ಕಾರ್ಯಾಗಾರವು ಭಾಗವಹಿಸುವವರಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಈ ಕಾರ್ಯಾಗಾರದಿಂದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಅಧ್ಯಾಪಕರಿಗೆ ಲಾಭವಾಗಲಿದೆ ಹಾಗೂ ಅವರ ಜ್ಞಾನವನ್ನು ಹೆಚ್ಚಿಸಲಿದೆ.

Sponsors

Related Articles

Leave a Reply

Your email address will not be published. Required fields are marked *

Back to top button