ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕಿ ನಾಪತ್ತೆ: ದೂರು….

ಪುತ್ತೂರು: ಇಲ್ಲಿನ ಪುತ್ತೂರು ನಗರ ಯೋಜನಾ ಪ್ರಾಧಿಕಾರ(ಪುಡಾ)ದ ಸಹಾಯಕ ನಿರ್ದೇಶಕಿಯಾಗಿದ್ದು, ಇದೀಗ ಮಂಡ್ಯ ಜಿಲ್ಲೆಯ ಮಳವಳ್ಳಿ ಯೋಜನಾ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪುತ್ತೂರಿನ ಮಹಿಳೆ ಲಾವಣ್ಯ ಎಂಬವರು ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಹಿಂದೆ ಪುತ್ತೂರು ಪುಡಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲಾವಣ್ಯ ಅವರು ಅಲ್ಲಿ ಲಂಚ ಪ್ರಕರಣವೊಂದರಲ್ಲಿ ಸಿಕ್ಕಿ ಬಿದ್ದು ಅಮಾನತುಗೊಂಡಿದ್ದರು. ಬಳಿಕ ಅಮಾನತು ತೆರವುಗೊಂಡು ಅವರು ಮಳವಳ್ಳಿ ಯೋಜನಾ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಲಾವಣ್ಯ ಅವರು ಸೋಮವಾರ ಪುತ್ತೂರಿನ ಬೀರಮಲೆ ಸಮೀಪದಲ್ಲಿರುವ ತನ್ನ ಪತಿಯ ಮನೆಗೆ ಆಗಮಿಸಿದ್ದರು. ಸೆ. 25ರಂದು ತಾನು ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಕಚೇರಿಗೆ ಆಗಮಿಸಿದ್ದರು. ಅಲ್ಲಿ ತನ್ನ ಬಟ್ಟೆ ಬರೆಗಳಿದ್ದ ಬ್ಯಾಗನ್ನು ಇಟ್ಟು ಹೋದವರು ನಾಪತ್ತೆಯಾಗಿದ್ದರು. ಈ ನಡುವೆ ತನ್ನ ಸಹೋದರ ಘಣೇಂದ್ರ ಅವರೊಂದಿಗೆ ಮೊಬೈಲ್ ಮೂಲಕ ಮಾತನಾಡಿ ತಾನು ಪುತ್ತೂರಿನಲ್ಲಿರುವುದುಆಗಿ ತಿಳಿಸಿದ್ದರು. ಬಳಿಕ ಅವರ ಮೊಬೈಲ್ ಸ್ವಿಚ್‍ಆಫ್ ಆಗಿತ್ತು.
ಲಾವಣ್ಯ ಅವರ ತಂದೆ ಎಂ.ಜಿ. ಸುಬ್ಬಕೃಷ್ಣ ಅವರು ನೀಡಿದಂತೆ ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button