ಬುಡಕಟ್ಟು ಜನಾಂಗದ ಮೊದಲ ಐಎಎಸ್ ಶ್ರೀಧನ್ಯಾ- ಕೋಯಿಕ್ಕೋಡ್‌ ಉಪ ಜಿಲ್ಲಾಧಿಕಾರಿಯಾಗಿ ನೇಮಕ….

ಕೋಯಿಕ್ಕೋಡ್ : 2018ರಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ಪಾಸ್ ಮಾಡಿದ ಕೇರಳದ ಬುಡಕಟ್ಟು ಜನಾಂಗದ ಮೊದಲ ಮಹಿಳೆ ಶ್ರೀಧನ್ಯಾ ಸುರೇಶ್(26 ) ಇದೀಗ ಕೋಯಿಕ್ಕೋಡ್ ಜಿಲ್ಲೆಯ ಉಪಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ವಯನಾಡು ಜಿಲ್ಲೆಯ ಪುದುತನ ಪಂಚಾಯತ್ ನಿವಾಸಿಯಾದ ಶ್ರೀಧನ್ಯಾ, ಕುರಿಚಿಯಾ ಎಂಬ ಬುಡಕಟ್ಟು ಸಮುದಾಯದವರು.
ಶ್ರೀಧನ್ಯಾ ಅವರು ಕೋಯಿಕ್ಕೋಡ್‌ನ ದೇವಗಿರಿ ಸೇಂಟ್ ಜಾಸೆಫ್ ಕಾಲೇಜಿನಲ್ಲಿ ಪದವಿ ಪಡೆದಿದ್ದು ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೂರನೇ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆ ಪಾಸ್ ಮಾಡಿದ್ದಾರೆ.

ವಯನಾಡ್ ಜಿಲ್ಲೆಯಲ್ಲಿರುವ ಕಾಡು ಮಧ್ಯದ ಅವರ ಮನೆಗೆ ರಸ್ತೆಯೂ ಇಲ್ಲ. ಈಗಲೂ ಅರ್ಧ ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಬೇಕು.IAS ಮುಖ್ಯ ಸಂದರ್ಶನಕ್ಕೆ ದೆಹಲಿಗೆ ಹೊರಟಾಗ ಧನ್ಯಾರಲ್ಲಿ ದುಡ್ಡೇ ಇರಲಿಲ್ಲ, ಊರವರು, ಹಿತೈಷಿಗಳೆಲ್ಲ 40,000 ಒಟ್ಟು ಸೇರಿಸಿ ಕೊಟ್ಟಿದ್ದರು.ಅವರು ಓದಿದ್ದು ಮಲಯಾಳಂ ಮಾಧ್ಯಮ ಶಾಲೆಯಲ್ಲಿ. ಪ್ರಾಣಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಲಯಾಳಂನಲ್ಲೇ IAS ಬರೆದು ಪಾಸ್ ಆಗಿದ್ದಾರೆ.

ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿರುವ ಸರ್ಕಾರಿ ಯೋಜನೆಯೊಂದರ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಾನಂತವಾಡಿ ಉಪ ಜಿಲ್ಲಾಧಿಕಾರಿ ಶ್ರೀರಾಮ್‌ ಸಾಂಬಶಿವ ರಾವ್ ಅವರಿಗೆ ಜನರು ನೀಡುತ್ತಿದ್ದ ಗೌರವ ನೋಡಿದ್ದ ಶ್ರೀ ಧನ್ಯಾ ಅವರು ತಾನು ಐಎಎಸ್‌ ಮಾಡಬೇಕು ಹಾಗೂ ನಾಗರಿಕ ಸೇವಾ ಅಧಿಕಾರಿ ಆಗಬೇಕೆಂದು ಅಂದುಕೊಂಡಿದ್ದರು. ಆದರೆ ಅಶ್ಚರ್ಯವೆಂಬಂತೆ ಶ್ರೀರಾಮ್ ಸಾಂಬಶಿವ್ ಅವರು ಆಗ ಕೋಳಿಕ್ಕೋಡ್ ಜಿಲ್ಲಾಧಿಕಾರಿಯಾಗಿದ್ದು, ಈಗ ಅಲ್ಲಿಯೇ ಶ್ರೀಧನ್ಯಾ ಉಪಜಿಲ್ಲಾಧಿಕಾರಿಯಾಗಿದ್ದಾರೆ.

 

Sponsors

Related Articles

Leave a Reply

Your email address will not be published. Required fields are marked *

Back to top button