ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ – ಚಪ್ಪರ ಮುಹೂರ್ತ…

ಬಂಟ್ವಾಳ: ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಹಾಗೂ ಮಾಣಿಗುತ್ತು ಭಂಡಾರದ ಮನೆ ಶ್ರೀ ಉಳ್ಳಾಲ್ತಿ, ಬೆಮ್ಮೆರ್, ಗುಡ್ಡೆಚಾಮುಂಡಿ ಪಂಜುರ್ಲಿ, ಮಲೆಕೊರತಿ ದೈವಗಳ ಧರ್ಮಚಾವಡಿಯಲ್ಲಿ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶದ ಸಿದ್ಧತೆಗಾಗಿ ಚಪ್ಪರ ಮುಹೂರ್ತ ಜ.10 ರಂದು ಮಾಣಿ ಶ್ರೀ ಉಳ್ಳಾಲ್ತಿ ಮಾಡದಲ್ಲಿ‌ ನೆರವೇರಿತು.
ಧರ್ಮಚಾವಡಿಯ ಅಂಗಣದಲ್ಲಿ ಪ್ರಧಾನ ಅರ್ಚಕರಾದ ಅನಂತ ಭಟ್ ಪಳನೀರು ಪೌರೋಹಿತ್ಯದಲ್ಲಿ ಪೂಜೆ ನೆರವೇರಿಸಿ, ಪ್ರಧಾನ ಕಂಬವನ್ನು ಸ್ಥಾಪಿಸಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಜ.20ರಿಂದ 25 ರ ವರೆಗೆ ವೇ‌.ಮೂ.ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವ ಮತ್ತು ಕೂಡುಕಟ್ಟಿನ ಯಜಮಾನತ್ವದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಕಾಲಾವಧಿ ಮೆಚ್ಚಿ ಜಾತ್ರೆಯು ಫೆ.6 ರಂದು ನಡೆಯಲಿದೆ.
ಇತಿಹಾಸ ಪ್ರಸಿದ್ಧ ತುಳುನಾಡಿನ ಐದು ಕ್ಷೇತ್ರಗಳಲ್ಲಿ ಉಳ್ಳಾಲ್ತಿ ಸಾನ್ನಿಧ್ಯ ಪ್ರಸಿದ್ಧವಾಗಿದೆ. ಮಾಣಿಗುತ್ತು ಧರ್ಮಚಾವಡಿಯು ಭಂಡಾರದ ಮನೆ ಶೈಲಿಯಲ್ಲಿ ಜೀರ್ಣೋದ್ಧಾರಗೊಂಡಿದೆ.
ಚಪ್ಪರ ಮುಹೂರ್ತ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಮತ್ತು ಜೀರ್ಣೋದ್ಧಾರ ಸಮಿತಿ‌ ಅಧ್ಯಕ್ಷ ಯಂ. ಸಚಿನ್ ರೈ ಮಾಣಿಗುತ್ತು ,ರವೀಂದ್ರ ರೈ ಖಂಡಿಗ,ಸಂತೋಷ ಕುಮಾರ್ ಅರೆಬೆಟ್ಟು ನುಳಿಯಾಲು ಗುತ್ತು, ಸುಧೀರ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಆಳ್ವ ಕೊಡಾಜೆ ನೇತೃತ್ವ ವಹಿಸಿದ್ದರು.
ಪ್ರಮುಖರಾದ ರಾಮಚಂದ್ರ ಪೂಜಾರಿ ಪಾದೆ,ಲೋಕೇಶ ಬಂಗೇರ ಪಳ್ಳತ್ತಿಲ,ಸುದೀಪ್ ಕುಮಾರ್ ಶೆಟ್ಟಿ ಕೊಡಾಜೆ,ಗಣೇಶ ರೈ‌ ಸಾಗು,ಚಂದ್ರಹಾಸ ಶೆಟ್ಟಿ ಅರೆಬೆಟ್ಟು ವರ್ಕಾಡಿ , ಸಂದೇಶ್ ಶೆಟ್ಟಿ ಅರೆಬೆಟ್ಟು,ಸಂದೀಪ್ ಶೆಟ್ಟಿ ಅರೆಬೆಟ್ಟು,ರಾಜೀವ ಶೆಟ್ಟಿ ವಾರಾಟ,ರಮೇಶ ಶೆಟ್ಟಿ ಸಾಗು,ರಘುರಾಮ ಶೆಟ್ಟಿ ಸಾಗು ಹೊಸಮನೆ,ಜಯರಾಮ ಶೆಟ್ಟಿ ಸಾಗು,ನಾಗೇಶ ಶೆಟ್ಟಿ ಕೊಡಾಜೆ,ರಾಮಚಂದ್ರ ಶೆಟ್ಟಿ ನುಳಿಯಾಲು,ಜಗದೀಶ ಜೈನ್ ಮಾಣಿ, ಆನಂದ ಕುಲಾಲ್ ಕೊಡಾಜೆ,ಜನಾರ್ದನ ಪೂಜಾರಿ ನಾರಕೋಡಿ,ಗಿರೀಶ್ ಪೂಜಾರಿ ಮಾಣಿ ಹಾಗೂ ಮಾಣಿ ಗ್ರಾಮಸ್ಥರು ಉಪಸ್ಥಿತರಿದ್ದರು.

whatsapp image 2024 01 10 at 6.05.16 pm

Sponsors

Related Articles

Back to top button